ಕಾರವಾರ: ಜಿಲ್ಲೆಯ ಮೀನುಗಾರರ ಸಮಸ್ಯೆ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸರ್ಕಾರದ ಮುಂದೆ ಹತ್ತಾರು ಸಮಸ್ಯೆಗಳು ಜ್ವಲಂತವಾಗಿದೆ. ನಿರ್ಲಕ್ಷ್ಯ ಸರಿಯಲ್ಲವೆಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ತಿಳಿಸಿದರು.ನಗರದ ಕೋಡಿಭಾಗ ಸಾಗರದರ್ಶನ್ ಸಭಾಭವನದಲ್ಲಿ ಹಮ್ಮಿಕೊಂಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘದ 19ನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ಹಿರಿಯರಿಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲಾದ್ಯಂತ ಮೀನುಗಾರರು ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದಾರೆ. ಮೀನುಗಾರರಿಗೆ ಸರ್ಕಾರದ ಸೌಲಭ್ಯಗಳು ಕಡಿಮೆಯಾಗುತ್ತಿದೆ. ಮೀನುಗಾರರನ್ನು ಕೃಷಿಕರಂತೆ ಪರಿಗಣಿಸಿ ಅವರಿಗೆ ನೀಡುವ ಸವಲತ್ತು ಮತ್ತು ಸಹಾಯವನ್ನು ನೀಡಬೇಕಿದೆ ಎಂದರು.ಉದ್ಯಮಿ ಎಚ್.ಎಸ್. ಗಜಾನನ ಮಾತನಾಡಿ, ಹರಿಕಂತ್ರ ಸಮಾಜದವರಿಗೆ ಸರ್ಕಾರದ ಯೋಜನೆಗಳ ಸಮರ್ಪಕ ಮಾಹಿತಿ ದೊರೆಯುವಂತೆ ಆಗಬೇಕಿದೆ ಎಂದರು.
ಸುರೇಶ ಕೆ. ತಾಂಡೇಲ್, ದುಲಿಯಾ ದುರ್ಗೇಕರ್, ದೇವಾನಂದ ಚೆಂಡೇಕರ್, ಗೌರೀಶ ಉಳ್ವೇಕರ್, ಪ್ರಶಾಂತ ತಾಂಡೇಲ್, ಅನಿಲ್ ಹರಿಕಂತ್ರ, ಸಂಪತ್ ಹರಿಕಂತ್ರ, ನಾರಾಯಣ ಖಾರ್ವಿ, ಅಶೋಕ ಮೋಟಾ ಅರ್ಗೇಕರ, ಅಮದಳ್ಳಿ(ಮುದಗಾ) ರವಿ ಡಿ. ಅಂಕೋಲೆಕರ, ಮೇಘಶ್ಯಾಮ ದುರ್ಗೇಕರ, ಕಾರವಾರ ನಗರಸಭೆ ಸದಸ್ಯರಾದ ರಾಜೇಶ ಶಿವು ಮಾಜಾಳಿಕರ, ಸ್ನೇಹಲ್ ಚೇತನ ಹರಿಕಂತ್ರ, ಸುವಿಧಾ ಓಂ ಉಳ್ವೇಕರ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಬಿ. ಹರಿಕಾಂತ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನ್ನಾಡಿದರು.
ಜಿಲ್ಲಾ ಶೈಕ್ಷಣಿಕ ಸಮಿತಿ ಅಧ್ಯಕ್ಷ ಶಿವಾನಂದ ತಾಂಡೇಲ್ ನಿರ್ವಹಿಸಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಸ್ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಸಮಾಜದ ಹಿರಿಯರು ಮತ್ತು ಸಾಧಕರನ್ನು ಗೌರವಿಸಲಾಯಿತು.ಇಂದು ಉಚಿತ ದಂತ ಚಿಕಿತ್ಸಾ ಶಿಬಿರ
ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಅಶುತೋಷಕುಮಾರ ರಾಯ, ಖಜಾಂಚಿ ಲಿಯೋ ಪಿಟೋ, ರೋಟರಿ ಕ್ಲಬ್‌ನ ಪ್ರಮುಖರಾದ ಎಸ್.ಜಿ. ಬಿರಾದಾರ, ಆರ್.ಪಿ. ನಾಯ್ಕ, ಡಾ. ಅನೂಪ ಮಾಡ್ದೋಳಕರ ಮುಂತಾದವರಿದ್ದರು.