ಕನ್ನಡಪ್ರಭ ವಾರ್ತೆ ಹುಕ್ಕೇರಿಸರ್ಕಾರಿ ಶಾಲೆಗಳು ಹಳ್ಳಿಗಳ ಮತ್ತು ಬಡ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿವೆ ಎಂದು ಎಂದು ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಅಂಕಿತಾ ಕೊಣ್ಣೂರ ಹೇಳಿದರು.
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೊಣ್ಣೂರ ಮರಡಿಮಠದ ಡಾ.ಪವಾಡೇಶ್ವರ ಸ್ವಾಮೀಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ನಿವೃತ್ತ ಪ್ರಾಧ್ಯಾಪಕ ಪ್ರೊ.ಪಿ.ಜಿ.ಕೊಣ್ಣೂರ, ಮುಖಂಡರಾದ ಶಿವಾನಂದ ಜಿರಲಿ, ಎಸ್.ಬಿ.ಜಿನರಾಳಿ, ಸುಭಾಷ ನಾಯಿಕ, ಚನ್ನಪ್ಪ ಗಜಬರ, ಆನಂದ ಪಟ್ಟಣಶೆಟ್ಟಿ, ವಿರೇಶ ಗಜಬರ, ಮಹಾಲಿಂಗ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.
ಕೋಟ್..ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ವಿಶೇಷ ಆದ್ಯತೆ ನೀಡಿದ ಪರಿಣಾಮ ನನ್ನಂಥರು ರಾಜ್ಯವೇ ಹೆಮ್ಮೆ ಪಡುವ ರೀತಿ ಸಾಧನೆ ಮಾಡಲು ಸಾಧ್ಯವಾಗಿದೆ. ಕಠಿಣ ಪ್ರಯತ್ನ, ನಿರಂತರ ಪರಿಶ್ರಮ, ಸಮಚಿತ್ತದ ಆಲಿಕೆಯಿಂದ ಯಶಸ್ಸು ಗಳಿಸಬಹುದು.-ಅಂಕಿತಾ ಕೊಣ್ಣೂರ, ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ.