ಸರ್ಕಾರಿ ಶಾಲೆಗಳು ಪ್ರತಿಭಾವಂತರನ್ನು ರೂಪಿಸುವ ಕೇಂದ್ರಗಳು

KannadaprabhaNewsNetwork |  
Published : Feb 06, 2025, 12:15 AM IST
ಬೈಲಹೊಂಗಲ | Kannada Prabha

ಸಾರಾಂಶ

ದೇಶ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಗತ್ಯವಾಗಿದ್ದು, ಸರ್ಕಾರಿ ಶಾಲೆಗಳು ಪ್ರತಿಭಾವಂತರನ್ನು ರೂಪಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಸಕಾರಗೊಳಿಸುತ್ತಿವೆ ಎಂದು ಬಿಎಒ ಎ.ಎನ್.ಪ್ಯಾಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ದೇಶ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಗತ್ಯವಾಗಿದ್ದು, ಸರ್ಕಾರಿ ಶಾಲೆಗಳು ಪ್ರತಿಭಾವಂತರನ್ನು ರೂಪಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಸಕಾರಗೊಳಿಸುತ್ತಿವೆ ಎಂದು ಬಿಎಒ ಎ.ಎನ್.ಪ್ಯಾಟಿ ಹೇಳಿದರು.

ಪಟ್ಟಣದ ಶಾಸಕರ ಮತಕ್ಷೇತ್ರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ.4 ರಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ, 8ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಮುಖ್ಯೋಪಾಧ್ಯಾಯ ಸಿ.ಬಿ.ಶಿಗಿಹಳ್ಳಿ ಅವರ ವಯೋ ನಿವೃತ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ಸಾಧಕರನ್ನು ರಾಜ್ಯದ ಕನ್ನಡ ಶಾಲೆಗಳು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದು, ದೇಶ-ವಿದೇಶದಲ್ಲಿಯೂ ಸಹ ಕನ್ನಡದ ಕೀರ್ತಿ ಬೆಳಗಿಸಿ ಉದ್ಯೋಗ-ಉದ್ಯಮ ನಡೆಸುತ್ತಿರುವುದು ಹೆಮ್ಮಯಾಗಿದೆ ಎಂದರು.ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅರ್ಜುನ ಕಲಕುಟಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಶಾಲೆಗಳೆಂದರೆ ಸಮಾಜದ ಕಣ್ಣಿದ್ದಂತೆ. ಇಂಥಹ ಶಾಲೆಗಳಲ್ಲಿ ಕಲಿತಂತಹ ಹಳೆ ವಿದ್ಯಾರ್ಥಿಗಳು ನಮ್ಮ ಶಾಲೆ, ನಮ್ಮ ಜವಾಬ್ದಾರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೇ ರಾಜ್ಯದ ಪ್ರತಿ ಶಾಲೆಗಳು ಹೈಟೆಕ್ ಆಗಲು ಸಾಧ್ಯವಾಗಲಿದ್ದು, ಈ ಆಶಯ ಹೆಚ್ಚಿನ ಪ್ರಚಾರ ಪಡೆಯಬೇಕಾಗಿದೆ ಎಂದರು.ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಅರ್ಜುನ ಕಲಕುಟಕರ, ಉಪಾಧ್ಯಕ್ಷ್ಯೆ ಗಂಗಮ್ಮ ಸಾಲಿ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ಕಲಾದಗಿ, ಸಿಆರ್‌ಪಿ ಎಸ್.ಐ.ಜನ್ಮಟ್ಟಿ, ಬಿ.ಆರ್.ಸಿ ರಾಜು ಹಕ್ಕಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ಕಾರ್ಯದರ್ಶಿ ಸಿ.ಎಸ್.ಭಜಂತ್ರಿ, ಕೋಶ್ಯಾಧ್ಯಕ್ಷ ಪರಶುರಾಮ ಸೊಂಟಕ್ಕಿ, ಎನ್‌ಜಿಒ ಸದಸ್ಯ ವಿವೇಕ ಗಾಣಗಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಜಿ.ಹೊರಟ್ಟಿ, ಎಸ್‌ಡಿಎಂಸಿ ಸದಸ್ಯರಾದ ಗದಿಗೆಪ್ಪ ಮಡಿವಾಳರ, ಮಹಾಂತೇಶ ರಾಜಗೋಳಿ, ನಾಗರಾಜ ಸಾಲಿಮಠ, ಪೂಜಾ ಕೊಟಬಾಗಿ, ರಾಮನಿಂಗ ಗೋಣಿ, ಪವಿತ್ರಾ ತಲ್ಲೂರ, ಭಾರತಿ ಬಾದಾಮಿ, ಪುರಸಭೆ ಸ್ಥಾಯಿ ಸಮಿತಿ ಸದಸ್ಯರಾದ ಹೇಮಲತಾ ಹಿರೇಮಠ, ಸದಸ್ಯ ಶ್ರೀದೇವಿ ದೇವಲಾಪೂರ, ದೈಹಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಸ್.ಐ.ಮಿರ್ಜಣ್ಣವರ ಇದ್ದರು. ತಾಲೂಕು ಶಿಕ್ಷಣ ಇಲಾಖೆ ಅಧಿಕಾರಿ ವರ್ಗ ಹಾಗೂ ಎಸ್‌ಡಿಎಂಸಿ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಣೇತರ ವಿವಿಧ ಸಂಘಟಣೆಗಳು, ಸಹ ಶಿಕ್ಷಕರ, ವಿದ್ಯಾರ್ಥಿಗಳ ಬಳಗ ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯ ಸಿ.ಬಿ.ಶಿಗಿಹಳ್ಳಿ ಅವರನ್ನು ಸನ್ಮಾನಿಸಿ, ಬೀಳ್ಕೊಟ್ಟರು. ಶಾಲೆಗೆ ದೇಣಿಗೆ ನೀಡಿದ ಮಹಣೀಯರನ್ನು ಸತ್ಕರಿಸಲಾಯಿತು. ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.

ಶಿಕ್ಷಕ ಡಿ.ಎನ್.ಹಲಕಿ ಸ್ವಾಗತಿಸಿದರು. ಶಿಕ್ಷಕಿ ಪಿ.ಜಿ.ಕೆಮಲಾಪೂರೆ ನಿರೂಪಿಸಿದರು. ಶಿಕ್ಷಕ ಸಿ.ಎಸ್‌.ಧರೆಪ್ಪನವರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!