ಕಡೂರು: ಗ್ರಾಮಗಳು ಅಭಿವೃದ್ಧಿ ಕಾಣಬೇಕಾದರೆ ಸರಕಾರಿ ಶಾಲೆಗಳೇ ಶಕ್ತಿ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಲೀಲಾವತಿ ಈಶ್ವರ್ ಹೇಳಿದರು.
ಕಡೂರು: ಗ್ರಾಮಗಳು ಅಭಿವೃದ್ಧಿ ಕಾಣಬೇಕಾದರೆ ಸರಕಾರಿ ಶಾಲೆಗಳೇ ಶಕ್ತಿ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಲೀಲಾವತಿ ಈಶ್ವರ್ ಹೇಳಿದರು.
ತಾಲೂಕಿನ ಸಖರಾಯಪಟ್ಟಣ ಸಮೀಪದ ಅಗ್ರಹಾರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬಾಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮತನಾಡಿ, ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಸೋಲು ಗೆಲುವು ಮುಖ್ಯವಲ್ಲ. ಮಕ್ಕಳು ಎಲ್ಲ ಸ್ಪರ್ಧೆಗಳಲ್ಲೂ ಭಾಗವಹಿಸಬೇಕು. ಸರಕಾರಿ ಶಾಲೆಗಳು ಉಳಿಯು ವತ್ತ ಗ್ರಾಮಸ್ಥರ ಸಹಕಾರವೇ ಮುಖ್ಯ. ಜೊತೆಗೆ ಶಿಕ್ಷಕರ ಇಚ್ಛಾಶಕ್ತಿ ಬೇಕು. ಮುಚ್ಚಿದ್ದ ಈ ಶಾಲೆ ಇಷ್ಟರ ಮಟ್ಟಿಗೆ ಬರಲು ಗ್ರಾಮಸ್ಥರ ಪ್ರೇರಣೆಯೇ ಕಾರಣ ಎಂದರು. ಪ್ರಾಸ್ತಾವಿಕವಾಗಿ ಇಸಿಒ ಗಂಗಪ್ಪ ಮಾತನಾಡಿ, ಪ್ರತಿಭಾ ಕಾರಂಜಿಗಳು ಮಕ್ಕಳಲ್ಲಿ ಸ್ಪೂರ್ತಿಯನ್ನುಂಟು ಮಾಡಿ ವೇದಿಕೆ ರೂಪಿಸಿಕೊಡುತ್ತವೆ ಎಂದರು. ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಸಪ್ಪ ಮಾತನಾಡಿ, ಇಂತಹ ಸಣ್ಣ ಗ್ರಾಮದಲ್ಲೂ ಹಬ್ಬದ ವಾತಾವರಣ ನಿರ್ಮಿಸಿ ಪ್ರತಿಭಾ ಕಾರಂಜಿ ನಡೆಸುತ್ತಿದ್ದಾರೆ. ಮಕ್ಕಳು ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಯುವಂತಾಗಬೇಕು ಎಂದರು. ಎಸ್ ಡಿಎಂ ಸಿ ಅಧ್ಯಕ್ಷ ಮಹೇಶ್ ಮಾತನಾಡಿ ಈ ಶಾಲೆ ಪುನರಾರಂಭವಾಗಿ ಈಗ ಅತ್ಯುತ್ತಮವಾಗಿ ನಡೆಯುತ್ತಿದೆ. ಇದೆಲ್ಲದಕ್ಕೂ ಗ್ರಾಮಸ್ಥರೇ ಕಾರಣ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಭೈರೇಗೌಡ, ತಾಲೂಕು ಶಿಕ್ಷಕರ ಸಂಘದ ಗೀತಾ, ಕವಿತಾ, ಅಶೋಕ್, ಶಶಿಧರ್, ರವಿ, ಮುಖ್ಯ ಶಿಕ್ಷಕಿ ಪರಿಮಳಾದೇವಿ, ಗ್ರಾಮಸ್ಥರಾದ ಈಶ್ವರ್, ಷಡಾಕ್ಷರಿ,ಶಿಕ್ಷಕರಾದ ಕಲ್ಮರುಡಪ್ಪ, ಕೇಶವಮೂರ್ತಿ, ಧನಂಜಯಮೂರ್ತಿ, ಗ್ರಾಮಸ್ಥರು, ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು. 23ಕೆಕೆಡಿಯು.3
ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಅಗ್ರಹಾರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಗ್ರಾಪಂ ಮಾಜಿ ಉಪಾಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಲೀಲಾವತಿ ಈಶ್ವರ್ ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.