ಕನ್ನಡಪ್ರಭ ವಾರ್ತೆ ಹುಕ್ಕೇರಿ
ಇಲ್ಲಿನ ತಾಲೂಕು ಪಂಚಾಯತಿ ಸಭಾಭವನದಲ್ಲಿ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ ಪ್ರಯುಕ್ತ ತಮಗೆ ಏರ್ಪಡಿಸಿದ ಬೀಳ್ಕೋಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಗೊಳಿಸಲಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತಿ ಆಡಳಿತ ಮಂಡಳಿ, ಜನಪ್ರತಿನಿಧಿಗಳು ಸೇರಿದಂತೆ ಹುಕ್ಕೇರಿ ತಾಲೂಕಿನ ಸಾರ್ವಜನಿಕರು ಸಾಕಷ್ಟು ಸಹಕಾರ ನೀಡಿರುವುದನ್ನು ನೆನೆದು ಕೆಲಕಾಲ ಭಾವುಕರಾದರು.
ಬೆಳಗಾವಿ ಪಿಆರ್‌ಇ ಇಇ ಆನಂದ ಬಣಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿಆರ್‌ಇ ಎಇಇ ಎಂ.ಎಸ್.ಬಿರಾದಾರ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ ಮಾತನಾಡಿ ಮಿಶ್ರೀಕೋಟಿ ಅವರ ಕಾರ್ಯ ಸಾಧನೆಗಳ ಬಗ್ಗೆ ಶ್ಲಾಘಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ದಸ್ತಗೀರ ಬಸ್ಸಾಪುರೆ, ಕಸಾಪ ಅಧ್ಯಕ್ಷ ಪ್ರಕಾಶ ಅವಲಕ್ಕಿ, ಪ್ರಭಾರಿ ಎಇಇ ರಾಜೇಂದ್ರ ಜಾಧವ, ನಿವೃತ್ತ ಅಧಿಕಾರಿ ಎ.ಬಿ.ಪಟ್ಟಣಶೆಟ್ಟಿ, ಅಭಿಯಂತರರಾದ ಬಿ.ಡಿ.ನಾಯಿಕವಾಡಿ, ಚೇತನ ಕಡಕೋಳ, ಸಂತೋಷ ಪಾಟೀಲ, ವಿಕಾಸ ಸವನೂರೆ, ಈರಪ್ಪ ಪಾಟೀಲ, ಗುತ್ತಿಗೆದಾರರಾದ ರವಿಂದ್ರ ಜಿಂಡ್ರಾಳಿ, ಈರಣ್ಣ ಬಿಸಿರೊಟ್ಟಿ, ರತ್ನಾಕರ ಬೋನಿ, ಮಾರ್ತಂಡ ಗೋಟೂರಿ, ಸಂಜಯ ಕಂಠಿ, ಡಿ.ಆರ್.ಪಿಡಾಯಿ, ಅಶೋಕ ತಳವಾರ, ಅಕ್ಷಯ ವೀರಮುಖ, ಅಡಿವೆಪ್ಪ ಕರೆನ್ನವರ ಮತ್ತಿತರರು ಉಪಸ್ಥಿತರಿದ್ದರು.
-----------
-ವಿಜಯ ಮಿಶ್ರೀಕೋಟಿ, ನಿವೃತ್ತ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ.
ಸರ್ಕಾರಿ ಸೇವೆಯಲ್ಲಿ ಬಡ್ತಿ, ವರ್ಗಾವಣೆ ಸಹಜ ಪ್ರಕ್ರಿಯೆಯಾಗಿದೆ. ಹಾಗೆಯೇ ನಿವೃತ್ತಿ ಕೂಡ ಹೊಂದಲೇಬೇಕು. ಅದರಂತೆ ಮಿಶ್ರೀಕೋಟಿ ನಿವೃತ್ತಿ ಜೀವನ ಸುಖಕರವಾಗಿರಲಿ. ಎಲ್ಲರೊಂದಿಗೆ ಬೆರೆಯುವ ಗುಣ, ಸಮಯಪ್ರಜ್ಞೆಯನ್ನು ಮಿಶ್ರೀಕೋಟಿ ಅವರಿಂದ ಕಲಿತುಕೊಳ್ಳಬೇಕು.
---------------
-ಎಂ.ಎಸ್.ಬಿರಾದಾರ ಪಾಟೀಲ, ಪಿಆರ್‌ಇ ಎಇಇ.
ಯಶಸ್ವಿ ಮತ್ತು ಪರಿಣಾಮಕಾರಿ ಕೆಲಸದಿಂದ ಮಿಶ್ರೀಕೋಟಿ ಯುವ ನೌಕರರು ಮತ್ತು ಸಿಬ್ಬಂದಿಗಳಿಗೆ ಆದರ್ಶರಾಗಿದ್ದಾರೆ. ಸರಳ, ಸಜ್ಜನ, ಸೌಮ್ಯ ಸ್ವಭಾವದ ಅವರ ಗುಣಲಕ್ಷಣಗಳು ಮೆಚ್ಚುವಂಥದ್ದಾಗಿದೆ.
-ಟಿ.ಆರ್.ಮಲ್ಲಾಡದ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ.