ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸರ್ಕಾರಿ ಸೇವೆಗಳು ನಿಮ್ಮ ಮನೆಯ ಬಾಗಿಲಿಗೆ ಕಾರ್‍ಯಕ್ರಮದ ನಾಲ್ಕನೇ ದಿನ ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳ ಕುರಿತು ಸುಮಾರು 173 ಅರ್ಜಿಗಳು ಸ್ವೀಕೃತಗೊಂಡಿವೆ.ಸರ್ಕಾರದಲ್ಲಿ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳನ್ನು ಜನರ ಮನೆಯ ಬಾಗಿಲಿಗೆ ಹೋಗಿ ತಲುಪಿಸಬೇಕು ಎಂಬ ಉದ್ದೇಶದಿಂದ ನಡೆಸಲಾಗುತ್ತಿರುವ ಕಾರ್‍ಯಕ್ರಮದಲ್ಲಿ ಕಂದಾಯ, ಗ್ರಾಪಂ, ಕೃಷಿ, ಸೆಸ್ಕ್, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಬೆಳಿಗ್ಗೆಯಿಂದ ಸಂಜೆಯವರೆಗೂ ಸ್ಥಳದಲ್ಲಿಯೇ ಮೊಕ್ಕಂ ಹೋಡಿ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.
ಸಾರ್ವಜನಕರು, ರೈತರು ಕಂದಾಯ, ಮನೆ, ಸಾಮಾಜಿಕ ಭದ್ರತೆ, ಈಸ್ವತ್ತು ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು. ಅಧಿಕಾರಿಗಳು ಯಾವುದೇ ತಕರಾರುಗಳು ಇಲ್ಲದ ಅರ್ಜಿಯನ್ನು ಸ್ಥಳದಲ್ಲೇ ಬಗೆಹರಿಸುವ ಕೆಲಸ ಮಾಡಿದರು.ಕ್ಲಿಸ್ಟಕರ ಸಮಸ್ಯೆಗಳಿಗೆ ಅಧಿಕಾರಿಗಳು ಪರಿಹಾರ ಹುಡುಕಿಕೊಡಲಾಗುತ್ತಿದೆ. ಗ್ರಾಮದಲ್ಲಿ ಇರುವಂತಹ ಸರಕಾರಿ ಜಮೀನುಗಳನ್ನು ಗುರುತಿಸುವ ಕೆಲಸವನ್ನು ಸರ್ವೇ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ.
ಕಾರ್‍ಯಕ್ರಮದಲ್ಲಿ ಸ್ವೀಕೃತಗೊಂಡಿರುವ 173 ಅರ್ಜಿಗಳ ಪೈಕಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ-40, ವಂಶವೃಕ್ಷ-24, ವಾಸಸ್ಥಳ ಧೃಡೀಕರಣಕ್ಕೆ-5, ಸಾಮಾಜಿಕ ಭದ್ರತಾ ಯೋಜನೆಗೆ-25, ಸಾಮಾಜಿಕ ಭದ್ರತ ಯೋಜನೆಯಡಿ 600 ರು .ನಿಂದ 1200 ಪಿಂಚಣಿ ಯೋಜನೆಗಾಗಿ 40 ಅರ್ಜಿಗಳು. ಪೌತಿ ಖಾತೆ-28, ಆರ್‌ಟಿಸಿ ತಿದ್ದುಪಡಿಗಾಗಿ-40 ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ಉಪತಹಶೀಲ್ದಾರ್ ಲಕ್ಷ್ಮಿಕಾಂತ್ ತಿಳಿಸಿದರು.ಈ ವೇಳೆಗ್ರಾಮದ ಮುಖಂಡರಾದ ಸಿಡಿಎಸ್ ಉಪಾಧ್ಯಕ್ಷ ಶ್ರೀನಿವಾಸ್, ಬಿ.ಜೆ.ಸ್ವಾಮಿ, ಲವಕುಮಾರ್, ಬಿ.ಕೆ.ರೇವಣ್ಣ, ಕೆ.ಕುಬೇರ ಸೇರಿದಂತೆ ಹಲವು ಮುಖಂಡರು, ಅಧಿಕಾರಿಗಳು ಹಾಜರಿದ್ದರು.ಆ.30,31ರಂದು ಆಹಾರ ಸುರಕ್ಷತೆ ತಪಾಸಣೆ
ಮಂಡ್ಯ: ಜಿಲ್ಲಾ ಆಹಾರ ಸುರಕ್ಷತಾಧಿಕಾರಿ ಡಾ.ಕೆ.ಆರ್.ಶಶಿಧರ್ ಆ.30 ಹಾಗೂ 31ರಂದು ಜಿಲ್ಲೆಯ ಎಲ್ಲಾ ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಆಹಾರ ಸುರಕ್ಷತೆಯ ಬಗ್ಗೆ ತಪಾಸಣೆ ನಡೆಸಲಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಯುಕ್ತಾಲಯದ ಆದೇಶದ ಮೇರೆಗೆ ಜಿಲ್ಲಾ ಆಹಾರ ಸುರಕ್ಷತಾಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ ಎಂದು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಂಕಿತ ಅಧಿಕಾರಿಗಳು ತಿಳಿಸಿದ್ದಾರೆ.ಇಂದು ಪ್ರತಿಭಟನೆ ನಂತರ ಕರುನಾಡ ಉತ್ಸವಮಂಡ್ಯ: ಕನ್ನಡಿಗರಿಗೆ ಉದ್ಯೋಗಕ್ಕೆ ಆಗ್ರಹಿಸಿ, ಕಾವೇರಿ, ಮಹದಾಯಿ ರಕ್ಷಣೆ, ಹಿಂದಿ ಹೇರಿಕೆಯಿಂದ ಸಮಸ್ಯೆ, ವಲಸಿಗರ ದಾಳಿಯಿಂದ ಅಪಾಯ ಖಂಡಿಸಿ ಆ.30 ರಂದು ಕದಂಬ ಸೈನ್ಯ ವತಿಯಿಂದ ನಗರದ ಮಹಾವೀರ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಂತರ ಗಾಂಧಿಭವನದಲ್ಲಿ ಕರುನಾಡ ಉತ್ಸವ, ಕದಂಬ ಚಾಲುಕ್ಯರ ವೈಭವ ಸವಿನೆನಪು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.