ಕನ್ನಡಪ್ರಭ ವಾರ್ತೆ ಕುಣಿಗಲ್
ಜಿಲ್ಲಾ ಮಾಪನಾಧಿಕಾರಿ ನಿರಂಜನ್ ಮಾತನಾಡಿ ಮಾಪನ ಅಧಿಕಾರಿಗಳು ದಿನನಿತ್ಯ ಹಲವಾರು ಒತ್ತಡಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮ ಪಡಿಸಬೇಕೆಂದು ಈ ರೀತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಅಭಿನಂದನ ವಿಚಾರ ಆದರೆ ಈ ದಿನದ ಕಾರ್ಯಕ್ರಮಗಳನ್ನು ನಾಳೆ ಪೂರೈಸುವ ಕೆಲಸ ಆಗಬೇಕಿದೆ ಎಂದರು. ಉತ್ತಮ ಅಭಿವೃದ್ಧಿ ಮತ್ತು ಕಾರ್ಯಕ್ಕಾಗಿ ಇಲಾಖೆ ವತಿಯಿಂದ ಎಲ್ಲಾ ರೀತಿ ಸಹಕಾರ ನೀಡುವುದಾಗಿ ತಿಳಿಸಿದರು.
ಪರವಾನಿಗೆ ಪಡೆದ ಭೂಮಾಪನ ಅಧಿಕಾರಿಗಳ ಜಿಲ್ಲಾಧ್ಯಕ್ಷ ನಾಗೇಶ್ ಮಾತನಾಡಿ ಸರ್ಕಾರದಿಂದ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ನಿರಂತರವಾಗಿ ಸಂಪರ್ಕ ಸಾಧಿಸುತ್ತಿದ್ದೇವೆ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದರು.ಕುಣಿಗಲ್ ಸಿಪಿಐ ನವೀನ ಗೌಡ ಮಾತನಾಡಿ ಪೊಲೀಸರ ರೀತಿ ಕಾರ್ಯನಿರ್ವಹಿಸುವಂತಹ ಭೂಮಾಪನ ಅಧಿಕಾರಿಗಳು ಹಲವಾರು ಸಂದರ್ಭದಲ್ಲಿ ತೊಂದರೆಗೆ ಈಡಾಗುವ ಸನ್ನಿವೇಶಗಳು ಎದುರಾಗುತ್ತವೆ ಅದಕ್ಕಾಗಿ ಅವರು ತಕ್ಷಣ ಪೊಲೀಸ್ ಇಲಾಖೆಯ ಸಹಕಾರ ಪಡೆದು ಉತ್ತಮ ರೀತಿ ನ್ಯಾಯ ಬದ್ಧ ಕಾರ್ಯಕ್ರಮ ಹಾಗೂ ಸರ್ವೇ ಮಾಡಬೇಕೆಂದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಜಯರಾಜು ಗ್ರೇಡ್ ಟು ತಹಸೀಲ್ದಾರ್ ಯೋಗೇಶ್ ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು.