ದತ್ತಪೀಠದ ವಿಚಾರದಲ್ಲಿ ನ್ಯಾಯಕ್ಕಾಗಿ ಸರ್ಕಾರ ಹೆಜ್ಜೆ ಇಡಬೇಕು: ಸಿ.ಟಿ. ರವಿ

KannadaprabhaNewsNetwork |  
Published : Dec 04, 2025, 01:05 AM IST
ದತ್ತ ಜಯಂತಿಯ ಹಿನ್ನಲೆಯಲ್ಲಿ ದತ್ತಮಾಲೆ ಧರಿಸಿರುವ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಹಾಗೂ ಇತರೆ ಮಾಲಾಧಾರಿಗಳು ಬುಧವಾರ ಚಿಕ್ಕಮಗಳೂರಿನಲ್ಲಿ ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರುದತ್ತಾತ್ರೇಯ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಇದು ಒಂದು ರೀತಿ ಅವಧೂತ ತತ್ವವೂ ಹೌದು. ಪ್ರಾಪಂಚಿಕ ವ್ಯವಹಾರದಲ್ಲಿ ಇದ್ದರೂ ಸಹ ಒಂದು ರೀತಿಯಲ್ಲಿ ಎಲ್ಲದಕ್ಕಿಂತಲೂ ಮುಕ್ತವಾಗಿ ಆಧ್ಯಾತ್ಮಿಕ ಆದರ್ಶದ ಪಾಲನೆ ಮಾಡುವುದು ದತ್ತಾತ್ರೇಯ ಪರಂಪರೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದತ್ತಾತ್ರೇಯ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಇದು ಒಂದು ರೀತಿ ಅವಧೂತ ತತ್ವವೂ ಹೌದು. ಪ್ರಾಪಂಚಿಕ ವ್ಯವಹಾರದಲ್ಲಿ ಇದ್ದರೂ ಸಹ ಒಂದು ರೀತಿಯಲ್ಲಿ ಎಲ್ಲದಕ್ಕಿಂತಲೂ ಮುಕ್ತವಾಗಿ ಆಧ್ಯಾತ್ಮಿಕ ಆದರ್ಶದ ಪಾಲನೆ ಮಾಡುವುದು ದತ್ತಾತ್ರೇಯ ಪರಂಪರೆ.

ಸರ್ಕಾರ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ, ಕಂದಾಯ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ದತ್ತಪೀಠದ ವಿಚಾರದಲ್ಲಿ ನ್ಯಾಯ ನೀಡಲು ಸರ್ಕಾರ ಹೆಜ್ಜೆ ಇಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.ದತ್ತ ಜಯಂತಿ ಹಿನ್ನಲೆಯಲ್ಲಿ ಬುಧವಾರ ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿದ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ ಜಿಲ್ಲಾಡಳಿತ ತನಗಿರುವ ಇತಿಮಿತಿಗಳಲ್ಲಿ ಪೂರಕ ವ್ಯವಸ್ಥೆ ಕೈಗೊಂಡಿದೆ. ಆದರೆ, ಹಿಂದೂಗಳಿಗೆ ಅರ್ಧ ನ್ಯಾಯ ದೊರೆತಿದ್ದು, ಪೂರ್ಣ ನ್ಯಾಯಕ್ಕೆ ನೆರವಾಗುವಂತೆ ಮುಖ್ಯಮಂತ್ರಿಗಳಲ್ಲಿ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.

ನಾವು ದತ್ತಪೀಠವೇ ಬೇರೆ, ಬಾಬಾಬುಡನ್‌ಗಿರಿಯೇ ಬೇರೆ ಎಂದು ದಾಖಲೆಗಳ ಆಧಾರದಲ್ಲಿ ಹೇಳುತ್ತಿದ್ದೇವೆ. ಇದಕ್ಕಾಗಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಬೇಕು. ಮೈಸೂರು ಮಹಾರಾಜರ ಪತ್ರಾಗಾರಗಳಲ್ಲಿರುವ ದಾಖಲೆಗಳನ್ನು ಪರಿಶೀಲಿಸಬಹುದು. ಬಾಬಾಬುಡನ್‌ಗಿರಿ ಮತ್ತು ದತ್ತಪೀಠ ಒಂದೇ ಎಂದು ಕೆಲವರು ಇಲ್ಲಿ ಬರುವ ಹರಕೆ ಕಾಣಿಕೆಗಳನ್ನು ಲಪಟಾಯಿಸಲು ವಾದಿಸಿದ್ದಾರೆ. ಐದು ದಶಕಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದು, ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ತಕ್ಷಣವೇ ನ್ಯಾಯ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ, ಕಂದಾಯ ಸೇರಿದಂತೆಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ನ್ಯಾಯಾಲಯದ ಹೊರಗೂ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬಹುದು ಎಂದು ಎಂದರು.

3 ಕೆಸಿಕೆಎಂ 3ದತ್ತ ಜಯಂತಿಯ ಹಿನ್ನಲೆಯಲ್ಲಿ ದತ್ತಮಾಲೆ ಧರಿಸಿರುವ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಹಾಗೂ ಇತರೆ ಮಾಲಾಧಾರಿಗಳು ಬುಧವಾರ ಚಿಕ್ಕಮಗಳೂರಿನಲ್ಲಿ ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಡಘಟ್ಟ ಗ್ರಾ.ಪಂ.ಗೆ ಗಾಂಧೀಗ್ರಾಮ ಪುರಸ್ಕಾರ: ರುದ್ರಮ್ಮ ಬಸವರಾಜು
ಕಳವಾಗಿದ್ದ ಮೊಬೈಲ್‌ಗಳ ಪತ್ತೆ: ವಾರಸುದಾರರಿಗೆ ಹಸ್ತಾಂತರ