ಪೌರ ಸೇವಾ ನೌಕರರ ಬೇಡಿಕೆ ಈಡೇರಿಕೆಗೆ ಸರ್ಕಾರ ಅಸ್ತು

KannadaprabhaNewsNetwork |  
Published : Jun 01, 2025, 01:37 AM IST
31 ಬೀರೂರು 1ರಾಜ್ಯ ಸರ್ಕಾರ ಪೌರ ಸೇವಾ ನೌಕಕರ ಬೇಡಿಕೆ ಈಡೇರಿಸುವ ಬರವಸೆ ನೀಡಿದ ಹಿನ್ನಲೆಯಲ್ಲಿ ಬೀರೂರಿನ ಪೌರ ಸೇವಾ ನೌಕರರು ಮುಷ್ಕರ ಅಂತ್ಯ ಗೊಳಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಅಧ್ಯಕ್ಷೆ ಜಯಮ್ಮ, ಪುರಸಭೆ ಅಧ್ಯಕ್ಷೆ ವನಿತಮಧು ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಬೀರೂರು ಪೌರ ಸೇವಾ ನೌಕರರ ಸಂಘ ತಮ್ಮ ವಿವಿಧ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಆಶ್ವಾಸನೆ ನೀಡಿದ ಹಿನ್ನಲೆಯಲ್ಲಿ ಮುಷ್ಕರ ಅಂತ್ಯಗೊಳಿಸಲಾಗಿದೆ ಎಂದು ಪೌರಸೇವಾ ನೌಕರರ ಸಂಘದ ಅಧ್ಯಕ್ಷೆ ಎಚ್. ಜಯಮ್ಮ ತಿಳಿಸಿದರು.

ಸಂಘದ ಅಧ್ಯಕ್ಷೆ ಜಯಮ್ಮ ಮಾಹಿತಿ । ಮುಷ್ಕರ ಅಂತ್ಯ । ಸಿಹಿ ಹಂಚಿ ಸಂಭ್ರಮಾಚರಣೆ ।

ಕನ್ನಡಪ್ರಭ ವಾರ್ತೆ,ಬೀರೂರು.ಪೌರ ಸೇವಾ ನೌಕರರ ಸಂಘ ತಮ್ಮ ವಿವಿಧ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಆಶ್ವಾಸನೆ ನೀಡಿದ ಹಿನ್ನಲೆಯಲ್ಲಿ ಮುಷ್ಕರ ಅಂತ್ಯಗೊಳಿಸಲಾಗಿದೆ ಎಂದು ಪೌರಸೇವಾ ನೌಕರರ ಸಂಘದ ಅಧ್ಯಕ್ಷೆ ಎಚ್. ಜಯಮ್ಮ ತಿಳಿಸಿದರು.

ಕಳೆದ 4 ದಿನಗಳಿಂದ ಪೌರ ಸೇವಾ ನೌಕರರ ಸಂಘ ತಮ್ಮ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಶನಿವಾರ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ್ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದು ಬೇಡಿಕೆ ಈಡೇರಿಸುವ ಸಂಬಂಧ ಲಿಖಿತ ರೂಪದ ಆಶ್ವಾಸನೆ ನೀಡಿದ್ದರಿಂದ ಮುಷ್ಕರ ಅಂತ್ಯಗೊಳಿಸಲಾಗಿದೆ ಹೇಳಿದರು.ಹಲವಾರು ವರ್ಷಗಳ ಬೇಡಿಕೆಗೆ ಇಂದು ಸರ್ಕಾರ ಸ್ಪಂದಿಸಿದ್ದು ಸಂತಸ ತಂದಿದೆ. ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ , ಸಂಘ ಸಂಸ್ಥೆಗಳು, ಪುರಸಭಾ ಸದಸ್ಯರು ಹಾಗೂ ಕ್ಷೇತ್ರ ಶಾಸಕರಿಗೆ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ, ಪಟ್ಟಣವನ್ನು ಶುಚಿಗೊಳಿಸುವ ಪೌರ ಕಾರ್ಮಿಕರು ಹಾಗೂ ಪೌರ ನೌಕರರು ಪುರಸಭೆಯ ಆಧಾರ ಸ್ತಂಭಗಳು, ಅವರ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಪೌರಾಡಳಿತ ಸಚಿವ ಹಾಗೂ ಶಾಸಕ ಆನಂದ್‌ ಅವರಿಗೆ ಹೃದಯಪೂರ್ವಕ ಅಭಿನಂದನೆ ತಿಳಿಸಿದ ಅವರು, ತ್ಯಾಗಜೀವಿಗಳಿಗೆ ಸರ್ಕಾರ ಮನ್ನಣೆ ನೀಡಿ ಅವರಿಗೆ ಸಿಗಬೇಕಾದ ಸವಲತ್ತು ಗಳನ್ನು ಆದಷ್ಟು ಬೇಗ ನೀಡಲಿ ಎಂದರು.ನಂತರ ಪೌರ ಸೇವಾ ನೌಕರರು ಈ ವಿಷಯ ತಿಳಿದು ಪುರಸಭೆ ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿ ಘೋಷಣೆ ಕೂಗಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುರಸಭೆಗೆ ವಾಪಾಸು ತೆರಳಿದರು.

ಪುರಸಭೆ ಸದಸ್ಯರಾದ ಮೋಹನ್ ಕುಮಾರ್, ಪೌರ ನೌಕರರ ಸಂಘದ ಕಾರ್ಯದರ್ಶಿ ಚೆಲುವರಾಜ್, ನೂರುದ್ದೀನ್, ಗಿರಿರಾಜ್, ದೀಪಕ್, ಶಿಲ್ಪ, ಪಾರ್ವತಮ್ಮ, ಮಲ್ಲೇಶ್, ಸುಬ್ರಮಣಿ, ಲಕ್ಷ್ಮಣ್, ಸೇರಿದಂತೆ ಮತ್ತಿತರ ಸದಸ್ಯರು ಇದ್ದರು.31 ಬೀರೂರು 1ರಾಜ್ಯ ಸರ್ಕಾರ ಪೌರ ಸೇವಾ ನೌಕಕರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಬೀರೂರಿನ ಪೌರ ಸೇವಾ ನೌಕರರು ಮುಷ್ಕರ ಅಂತ್ಯಗೊಳಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಅಧ್ಯಕ್ಷೆ ಜಯಮ್ಮ, ಪುರಸಭೆ ಅಧ್ಯಕ್ಷೆ ವನಿತಾ ಮಧು ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ