ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದಲ್ಲಿರುವ ದೀಪಾಭಾಸ್ತಿ ಅವರ ಮನೆಗೆ ತೆರಳಿದ ಡಾ.ಮಂತರ್ ಗೌಡ, ಕಾಫಿ ಹಾರದ ಮೂಲಕ ಗೌರವ ಸನ್ಮಾನವನ್ನು ನೆರವೇರಿಸಿದರಲ್ಲದೇ ದೀಪಾಭಾಸ್ತಿ ಅವರು ಈ ಸಂದಭ೯ ನೀಡಿದ ಪ್ರಶಸ್ತಿ ವಿಜೇತ ಕೃತಿ ಹಾಟ್೯ ಲ್ಯಾಂಪ್ ನ್ನು ಗೌರವಪೂರ್ವಕವಾಗಿ ಸ್ವೀಕರಿಸಿದರು.
ಬೂಕರ್ ಪ್ರಶಸ್ತಿಯು ಅನುವಾದ ಸಾಹಿತ್ಯದ ನಿಜವಾದ ಶಕ್ತಿಯನ್ನು ನಿರೂಪಿಸಿದೆ ಎಂದೂ ಶಾಸಕರು ಹೇಳಿದರು.ಇತಿಹಾಸದಲ್ಲಿ ಅಚ್ಚಳಿಯದೇ ದಾಖಲು:
ಸಂತೋಷ ತಂದಿದೆ:
ಈ ಸಂದರ್ಭ ಮಾತನಾಡಿದ ದೀಪಾಭಾಸ್ತಿ, ತಾನು ಭಾನುಮುಷ್ತಾಕ್ ಅವರು ಬರೆದ ಎದೆಯ ಹಣತೆ ಸೇರಿದಂತೆ ಇತರ ಕೃತಿಗಳಲ್ಲಿನ 12 ಆಯ್ದ ಕಥೆಗಳನ್ನು ಹಾಟ್೯ ಲ್ಯಾಂಪ್ ಮೂಲಕ ಅನುವಾದಿಸಿದ್ದು, ಬುಕರ್ ಪ್ರಶಸ್ತಿಯು ಅನುವಾದಕ್ಕಾಗಿ ಸಂದದ್ದು ಸಂತೋಷ ತಂದಿದೆ ಎಂದರು.ಸುಮಾರು 3 ವರ್ಷಗಳ ಅವಿರತ ಶ್ರಮ ಈ ಸಾಧನೆಯ ಹಿಂದಿದೆ ಎಂದು ಹೇಳಿದ ದೀಪಾಭಾಸ್ತಿ, ಸದ್ಯದಲ್ಲಿಯೇ ಲಂಡನ್ ಗೆ ಮತ್ತೆ ತೆರಳಿ ಅಲ್ಲಿಂದ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಸಂಚರಿಸಿ ಅಲ್ಲಿ ಹಾಟ್೯ ಲ್ಯಾಂಪ್ ಕೃತಿಯ ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.
ದೀಪಾಭಾಸ್ತಿ ಪತಿ ಚೆಟ್ಟೀರ ನಾಣಯ್ಯ, ಪೋಷಕರಾದ ಪ್ರಕಾಶ್ ಭಾಸ್ತಿ, ಸುಧಾಭಾಸ್ತಿ, ಪತ್ರಕತ೯ ಅನಿಲ್ ಹೆಚ್.ಟಿ. ಈ ಸಂದಭ೯ ಹಾಜರಿದ್ದರು.ಇದೆ ಅಂದರೆ ಇದೆ, ಇಲ್ಲ ಅಂದರೆ ಇಲ್ಲ - ಮುಂದಿನ ಕೃತಿ
ಹೆಗ್ಗೋಡುವಿನ ಸಮುದ್ಯತಾ ವೆಂಕಟರಾಮು ಅವರ ''''''''ಇದೇ ಅಂದರೆ ಇದೆ, ಇಲ್ಲ ಅಂದರೆ ಇಲ್ಲ'''''''' ಎಂಬ ಕೃತಿಯನ್ನು ಈಗ ಇಂಗ್ಲೀಷ್ ಗೆ ಅನುದಾದಿಸುತ್ತಿದ್ದೇನೆ. ಜತೆಗೇ ಸ್ವಂತ ಕೃತಿ ಕೂಡ ಪ್ರಕಟವಾಗಬೇಕಾಗಿದೆ. ಬಾನುಮುಷ್ತಾಕ್ ಅವರು ಬರೆದಿರುವ 6 ಕಥಾ ಸಂಕಲನಗಳಾದ ಹೆಜ್ಜೆ ಮೂಡಿದ ಹಾದಿ, ಬೆಂಕಿ ಮಳೆ, ಎದೆಯ ಹಣತೆ, ಸಫೀರ, ಬಡವರ ಮಗಳು ಹೆಣ್ಣಲ್ಲ, ಹೆಣ್ಣು ಹದ್ದಿನ ಸ್ವಯಂವರ ಆಯ್ದ 12 ಕಥೆಗಳಾದ ಶಿಷ್ಟ ಮಾಲನ ಕಲ್ಲು ಚಪ್ಪಡಿ, ಬೆಂಕಿ ಮಳೆ, ಕರಿನಾಗರಗಳು, ಹೃದಯ ತೀಪು೯, ಕೆಂಪುಲುಂಗಿ, ಹೈಹೀಲ್ಡ್ ಶೂ, ಮೆಲುದನಿಗಳು, ಸ್ವರ್ಗವೆಂದರೆ, ಕಪಾನ್, ಅರಬ್ಬಿ ಮೇಷ್ಟ್ರು ಮತ್ತು ಗೋಬಿಮಂಚೂರಿ, ಒಮ್ಮೆ ಹೆಣ್ಣಾಗು ಪ್ರಭುವೇ ಗಳನ್ನು ಸೇರಿಸಿ ಹಾಟ್೯ ಲ್ಯಾಂಪ್ ಕೃತಿ ಪ್ರಕಟವಾಗಿದೆ. ಹಾಟ್೯ ಲ್ಯಾಂಪ್ ಖಂಡಿತವಾಗಿಯೂ ಎದೆಯ ಹಣತೆಯ ಪೂರ್ಣ ಕಥೆಗಳನ್ನು ಒಳಗೊಂಡಿಲ್ಲ. ಬದಲಿಗೆ ಎದೆಯ ಹಣತೆ ಕಥಾ ಸಂಕಲನದ 3 ಕಥೆ ಮಾತ್ರ ಹಾರ್ಟ್ ಲ್ಯಾಂಪ್ ನಲ್ಲಿದೆ.- ದೀಪಾ ಭಾಸ್ತಿ, ಇಂಗ್ಲೀಷ್ ಭಾಷಾ ಅನುವಾದಕ್ಕಾಗಿ ಬೂಕರ್ ಪ್ರಶಸ್ತಿ ಪಡೆದ ಲೇಖಕಿ