ಜನಪರ ಆಡಳಿತ ನಡೆಸುವಲ್ಲಿ ಸರ್ಕಾರಗಳು ವಿಫಲ: ಯು. ಬಸವರಾಜ

KannadaprabhaNewsNetwork |  
Published : Jun 29, 2025, 01:33 AM IST
28ಎಚ್‌ಪಿಟಿ2- ಹೊಸಪೇಟೆಯಲ್ಲಿ ಭಾರತ ಕಮ್ಯುನಿಷ್ಟ ಪಕ್ಷ ಮಾರ್ಕ್ಸ್ ವಾದಿ (ಸಿಪಿಐಎಂ) ಜಿಲ್ಲಾ ಸಮಿತಿ ವತಿಯಿಂದ ನಡೆದ ಬಹಿರಂಗಸಭೆಯನ್ನುದ್ದೇಶಿಸಿ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು. ಬಸವರಾಜ ಮಾತನಾಡಿದರು. | Kannada Prabha

ಸಾರಾಂಶ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿವೆ. ಜನರು ಈಗಲೂ ಬದುಕು ನಡೆಸಲು ಕಷ್ಟ ಪಡುತ್ತಿದ್ದಾರೆ.

ಸಿಪಿಎಂ ಬಹಿರಂಗಸಭೆಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿವೆ. ಜನರು ಈಗಲೂ ಬದುಕು ನಡೆಸಲು ಕಷ್ಟ ಪಡುತ್ತಿದ್ದಾರೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು. ಬಸವರಾಜ ಹೇಳಿದರು.

ನಗರದಲ್ಲಿ ಭಾರತ ಕಮ್ಯುನಿಸ್ಟ್‌ ಪಕ್ಷ ಮಾರ್ಕ್ಸ್‌ವಾದಿ (ಸಿಪಿಎಂ) ಜಿಲ್ಲಾ ಸಮಿತಿ ವತಿಯಿಂದ ನಡೆದ ಬಹಿರಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯಸರ್ಕಾರದ ಆಡಳಿತ ವೈಫಲ್ಯಗಳಿಂದಾಗಿ ರೈತ ಮತ್ತು ಕಾರ್ಮಿಕರು ಹಾಗೂ ಬಡವರು ನಿವೇಶನ ಖರೀದಿಸಲು, ಮನೆ ಕಟ್ಟಲು ಆಗುತ್ತಿಲ್ಲ. ರೈತರಿಗೆ ಭೂಮಿ ಖರೀದಿಸಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೋಷಿತ ವರ್ಗಕ್ಕೆ ಜೀವನ ಸಾಗಿಸಲು ಭೂಮಿ, ಕನಿಷ್ಠ ವೇತನ,‌ ಅಲ್ಪಸಂಖ್ಯಾತರ ರಕ್ಷಣೆ ಹಾಗೂ ಉದ್ಯೋಗ ಸೃಷ್ಟಿ, 16 ವಸ್ತುಗಳ ಆಹಾರ ಪಡಿತರ ಕೊಡಬೇಕಿದೆ. ಈ ಕುರಿತು ದೇಶಾದ್ಯಂತ ಸಿಪಿಐಎಂ ಪಕ್ಷವು ಪ್ರಬಲ ಹೋರಾಟ ನಡೆಸಿದೆ. ಸರ್ಕಾರಗಳು ಭ್ರಷ್ಟಾಚಾರದಲ್ಲಿ ತೊಡಗಿ ಕಾರ್ಪೋರೇಟ್ ಕಂಪನಿಗಳಿಗೆ ಲಕ್ಷಾಂತರ ‌ಎಕರೆ ಜಮೀನುಗಳನ್ನು ಮತ್ತು ಕೋಟ್ಯಂತರ ರು. ಸಾಲ ಮನ್ನಾ ಮಾಡಿ ಮತ್ತೊಮ್ಮೆ ಸಾಲ ನೀಡಲು ಮುಂದಾಗಿದೆ ಎಂದು ದೂರಿದರು.ಕೇರಳ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಪಿಎಂ ಪಕ್ಷವು ‌ಅಲ್ಲಿನ ಜನಸಾಮಾನ್ಯರಿಗೆ ರೇಷನ್ ಅಂಗಡಿಗಳ ರೂಪದಲ್ಲಿ 16 ಆಹಾರ ವಸ್ತುಗಳ ಪಡಿತರ ಧಾನ್ಯಗಳನ್ನು ಕೊಡುತ್ತಿದೆ. ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡಿದೆ. 60/80 ಅಳತೆಯ ನಿವೇಶನ ಹಾಗೂ ಸಾಗುವಳಿ ಮಾಡುತ್ತಿರುವ ರೈತರಿಗೆ ಪುಕ್ಕಟೆ ಜಮೀನುಗಳನ್ನು ಕೊಟ್ಟಿದೆ. ಆದರೆ ಇಲ್ಲಿನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಏಕೆ ಕೊಡುತ್ತಿಲ್ಲ, ಅವರಿಗೆ ಏನಾಗಿದೆ ಇವರುಗಳಿಗೆ ಬಡವರ ಸಮಸ್ಯೆ ಪರಿಹರಿಸಲು ಆಗುತ್ತಿಲ್ಲ. ಇಂತಹವರನ್ನು ಕಿತ್ತೊಗೆಯದೆ ಬೇರೆ ಪರಿಹಾರವಿಲ್ಲ. ಕೇಂದ್ರ ಸರ್ಕಾರ ಸಾರ್ವಜನಿಕ ಆಸ್ತಿಗಳನ್ನು ವಿದೇಶಿ ಬಂಡವಾಳದಾರರಿಗೆ ಮಾರಾಟ ಮಾಡಲು ಯತ್ನಿಸುತ್ತಿದೆ. 1ಲಕ್ಷ ಕೋಟಿ ರು. ಸಾಲ ಮಾಡಿ ಈ ದೇಶದ ಜನರ ತಲೆ ಮೇಲೆ ಹೊರಿಸಿ ಬಡವರನ್ನು ಇನ್ನಷ್ಟು ಬಡವರನ್ನಾಗಿಸಿದೆ ಎಂದರು.

ಈ ಸಂದರ್ಭ ರಾಜ್ಯ ಸಮಿತಿ ಸದಸ್ಯರಾದ ಬಿ.ಮಾಳಮ್ಮ, ಜಿಲ್ಲಾ ಕಾರ್ಯದರ್ಶಿ ಆರ್. ಭಾಸ್ಕರ್ ರೆಡ್ಡಿ, ಕಾರ್ಯದರ್ಶಿ ಮಂಡಳಿ ಸದಸ್ಯ ಆರ್.ಎಸ್. ಬಸವರಾಜ್, ಜಿಲ್ಲಾ ಸಮಿತಿ ಮುಖಂಡರು ಇದ್ದರು.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ