ಮುಂಡರಗಿ: ಸರ್ಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಅದನ್ನು ನೀಗಿಸಬೇಕು. ಜತೆಗೆ ದೇಶದಲ್ಲಿ ಅನ್ನದಾತರೂ ಸಂಕಷ್ಟದಲ್ಲಿದ್ದು, ಬೆಳೆಗೆ ಬೆಲೆ ಸಿಗದೇ ತೊಂದರೆಯಲ್ಲಿದ್ದಾರೆ. ಹೀಗಾಗಿ ಅವರಿಗೆ ಹೆಚ್ವಿನ ಆದ್ಯತೆ ನೀಡಬೇಕು ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಾ. ಬಿ.ಜಿ. ಜವಳಿ, ಕರಬಸಪ್ಪ ಹಂಚಿನಾಳ, ಎಂ.ಎಸ್. ಶಿವಶೆಟ್ಟರ, ವೀರನಗೌಡ ಗುಡದಪ್ಪನವರ, ಬಸವರಾಜ ಬನ್ನಿಕೊಪ್ಪ, ಗುಡದೀರಪ್ಪ ಲಿಂಬಿಕಾಯಿ, ತಿಮ್ಮಪ್ಪ ದಂಡೀನ, ಬಿ.ಎಫ್. ಈಟಿ, ಎಸ್.ಬಿ. ಹಿರೇಮಠ, ಡಿ.ಸಿ. ಮಠ, ಪಿ.ಎಂ. ಕಲ್ಲನಗೌಡ್ರ, ಸಿ.ಎಚ್. ಚಕ್ಕಡಿಮಠ ಉಪಸ್ಥಿತರಿದ್ದರು.ಕನ್ನಡ ಸಂಘ: ಪಟ್ಟಣದ ಬೃಂದಾವನ ವೃತ್ತದಲ್ಲಿ ಕನ್ನಡ ಸಂಘದಿಂದ ಜರುಗಿದ ಧ್ವಜಾರೋಹಣವನ್ನು ಬಾರ್ ಬೈಂಡಿಂಗ್ ಕಾರ್ಮಿಕ ಹುಚ್ಚಪ್ಪ ಕುಂಬಾರ ನೆರವೇರಿಸಿದರು. ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ್ ಅಧ್ಯಕ್ಷತೆ ವಹಿಸಿದ್ದರು. ಆನಂದಗೌಡ ಪಾಟೀಲ, ಬಸವರಾಜ ರಾಮೇನಹಳ್ಳಿ, ಪ್ರಶಾಂತಗೌಡ ಪಾಟೀಲ, ವೈ.ಎಚ್. ಬಚನಳ್ಳಿ, ವೆಂಕಟೇಶ ಗುಗ್ಗರಿ, ಉಮೇಶ ಕೊರಡಕೇರಿ, ಶಿವಯ್ಯ, ಮಲ್ಲಯ್ಯ, ವರುಣ್ ಬೆಲ್ಲದ, ರಾಜಾಸಾಬ್ ಬೆಟಗೇರಿ ಉಪಸ್ಥಿತರಿದ್ದರು.
ಪುರಸಭೆ ಕಚೇರಿ: ಪಟ್ಟಣದ ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪುರಸಭೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.ಗಾಂಧಿ ವೃತ್ತ: ಪಟ್ಟಣದ ಗಾಂಧಿ ವೃತ್ತದಲ್ಲಿನ ಧ್ವಜಾರೋಹಣವನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾಳ ನೆರವೇರಿಸಿದರು. ಈ ಸಂದರ್ಭದಲ್ಲಿ ಹೇಮಂತಗೌಡ ಪಾಟೀಲ, ರಾಮಚಂದ್ರ ಕಲಾಲ, ವಿಜಯಕುಮಾರ ಶಿಳ್ಳೀನ, ಅಶೋಕ ಹುಬ್ಬಳ್ಳಿ, ಬಿ.ವೈ. ಹೊಸಮನಿ, ಸುರೇಶ ಮಾಗಡಿ, ಡಿ.ಎಂ. ಕಾತರಕಿ, ದಾನೇಶ್ವರಿ ಭಜಂತ್ರಿ, ಮೌಲಾಸಾಬ್ ಬಾಗವಾನ ಉಪಸ್ಥಿತರಿದ್ದರು.
ಸಿಬಿಎಸ್ಇ ಶಾಲೆ: ಪಟ್ಟಣದ ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲೆಯ ಧ್ವಜಾರೋಹಣವನ್ನು ಶಾಲಾಡಳಿತ ಮಂಜಳಿ ಸದಸ್ಯ ನಾಗೇಶ ಹುಬ್ಬಳ್ಳಿ ನೆರವೇರಿಸಿದರು. ಈ ಸಂದರ್ಭದಲ್ಲಿ ಈಶ್ವರಪ್ಪ ಬೆಟಗೇರಿ, ಹೇಮಗಿರೀಶ ಹಾವಿನಾಳ, ಧ್ರುವಕುಮಾರ ಹೊಸಮನಿ, ಪ್ರಾ. ಶರಣ್ ಕುಮಾರ ಬುಗುಟಿ ಉಪಸ್ಥಿತರಿದ್ದರು.