ಕನ್ನಡಪ್ರಭ ವಾರ್ತೆ ಚನ್ನಗಿರಿ
ಅವರು ಶನಿವಾರ ಪಟ್ಟಣದ ಸಂತೆ ಬೀದಿಯಲ್ಲಿರುವ ಮಿಲ್ಲತ್ ಶಾದಿ ಮಹಲ್‌ನಲ್ಲಿ ಭಾರತೀಯ ಕಾರ್ಮಿಕ ಸಂಘಗಳ ಒಕ್ಕೂಟ (ಐಎಫ್‌ಟಿಯು) ತಾಲೂಕು ಸಮಿತಿಯ ಪ್ರಥಮ ಸಮ್ಮೇಳನದ ದಿವ್ಯಸಾನ್ನಿಧ್ಯ ವಹಿಸಿ, ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ದಿನಗೂಲಿಯ ಕೆಲಸ ಮಾಡಿ ಬರುವ ಅಲ್ಫ ಸಂಭಾವನೆಯಲ್ಲಿ ತಮ್ಮ ಜೀವನ ನಡೆಸುವ ಕಾರ್ಮಿಕರ ಜೀವನ ಅಸನು ಮಾಡಲು ಸರ್ಕಾರಗಳು ಮುಂದಾಗಬೇಕಾಗಿದ್ದು ನಿಮ್ಮಗಳ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಸರ್ಕಾರದ ಗಮನ ಸೆಳೆಯಬೇಕಾದರೆ ಕಾರ್ಮಿಕರು ಸಂಘಟಿತರಾಗಬೇಕು ಎಂದರು.
ಸರ್ಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕೆಲಸಕ್ಕೆ ಸರಿಯಾದ ವೇತನ ನೀಡದೆ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸದೆ ಗೌರವ ಧನ ಕಾರ್ಯಕರ್ತೆಯರು ಎಂದು ದುಡಿಸಿಕೊಳ್ಳುತ್ತೀರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಅವರಿಗೆ ಕನಿಷ್ಟ 30ಸಾವಿರ ಸಂಬಳವನ್ನಾದರೂ ನೀಡಬೇಕು ಎಂದು ತಿಳಿಸಿದ ಶ್ರೀಗಳು ಕಾರ್ಮಿಕರು ತಮ್ಮ ಕೈಯಲ್ಲಿ ಶಕ್ತಿ ಇರುವವರೆಗೆ ಮಾತ್ರ ದುಡಿಯುತ್ತಾರೆ ವಯಸ್ಸಾದ ಕಾಲದಲ್ಲಿ ಕಾರ್ಮಿಕರಿಗೆ ಜೀವನ ಭದ್ರತೆಯನ್ನು ಕೊಡಬೇಕು ಎಂದು ಒತ್ತಾಯಿಸಿದರು.ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಮರೆಯಮ್ಮನವರ್ ಮಾತನಾಡಿ, ಆಶಾ, ಅಂಗನವಾಡಿ, ಬಿಸಿಊಟದ ಸಿಬ್ಬಂದ್ದಿಗಳನ್ನು ಜೀತದ ಆಳುಗಳಂತೆ ದುಡಿಸಿಕೊಳ್ಳುವ ಸರ್ಕಾರ ಅವರಿಗೆ ಜೀವನ ಭದ್ರತೆಯನ್ನು ಕೊಡಬೇಕಾಗಿದ್ದು ಅಂಗನವಾಡಿಗಳು ಪ್ರಾರಂಭವಾಗಿ 50 ವರ್ಷ ಕಳೆದಿದೆ, ಬಿಸಿ ಊಟ ಯೋಜನೆ ಪ್ರಾರಂಭಗೊಂಡು 24 ವರ್ಷ ಕಳೆದಿದ್ದು ಅವರಿಗೆ ಪುಡಿಗಾಸು ನೀಡುತ್ತಿರುವುದು ಸರಿಯಲ್ಲ ಎಂದು ತಿಳಿಸುತ್ತಾ ಇಲಾಖೆ ಏತರ ಕೆಲಸಗಳನ್ನು ಮಾಡಿಸಿಕೊಳ್ಳುತ್ತ ಅವರನ್ನು ಶೋಷಣೆ ಮಾಡುತ್ತೀರುವುದು ಸರಿಯಲ್ಲ ಇದಕ್ಕೆ ಕಡಿವಾಣ ಹಾಕಬೇಕು ಎಂದರು.
ಅಂಗನವಾಡಿ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಶಾರದಮ್ಮ, ರಾಜ್ಯ ಮುಖಂಡ ಪೀರ್ ಜಾದೆ, ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಅಧ್ಯಕ್ಷೆ ಕಗತೂರು ವಿಮಲಾಕ್ಷಿ, ಉಪಾಧ್ಯಕ್ಷೆ ಕೆ.ಆರ್.ಪುಪ್ಪಾವತಿ, ಒಕ್ಕೂಟದ ಪ್ರಮುಖರಾದ ಮಹಮ್ಮದ್ ಭಾಷಾ, ಟಿ.ಎನ್.ನಾಗರಾಜ್, ಅವರಗೆರೆ ವಾಸು, ಮಂಜುಳಾ, ಅಯಿಷ, ಲತಾ, ರಾಜೇಶ್ವರಿ ಪಾಟೀಲ್, ನದೀಮ್, ಮಹಮ್ಮದ್ ಅಫ್ತಾಬ್, ಉಮರ್ ಮುಕ್ತಿಯಾರ್, ಅಸ್ಫೀಯಾರಿದಾ, ಮನೋಹರ್, ರಮೇಶ್, ಮಾಲತೇಶ್, ಶಶಿಧರ್, ಸವಿತಾ, ಕೆ.ಜಿ.ಗೀತಾ, ರೇಣುಕಾ, ವೆಂಕಟೇಶ್, ವೀರಣ್ಣ ಇತರರು ಹಾಜರಿದ್ದರು.