ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಹ್ಯಾದ್ರಿ ವಾಣಿಜ್ಯ ಕಾಲೇಜು ಸಹಯೋಗದಲ್ಲಿ ದೊಡ್ಡ ಮತ್ತಲಿ ಗ್ರಾಮದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಎಸ್. ಕೆ. ಗಾಯತ್ರಿ ಮತ್ತು ಕೆ. ರಾಮಚಂದ್ರ ಸ್ಥಾಪಿಸಿರುವ ದಿ. ಜಯಮ್ಮ ಮತ್ತು ಆಡಗಡಿ ಕರಿಯಪ್ಪ ಸ್ಮಾರಕ ದತ್ತಿ ಆಶಯದಂತೆ, ‘ಸಂವಿಧಾನದ ಆಶಯಗಳು ಈ ಹೊತ್ತಿನ ಭಾರತ’ ವಿಚಾರವಾಗಿ ಮಾತನಾಡಿದರು.
ನಮ್ಮ ನಡುವೆ ಅನೇಕ ತಾರತಮ್ಯಗಳಿವೆ. ಮಸೀದಿ, ಮಂದಿರ, ಚರ್ಚುಗಳಲ್ಲಿ ಇಲ್ಲದ ಸಮಾನತೆಯನ್ನು, ನಾವು ಕಾಣುವ ಒಂದೇ ಒಂದು ಜಾಗವೆಂದರೆ ಅದು ತರಗತಿಯ ಕೊಠಡಿಗಳು ಮಾತ್ರ. ಇಲ್ಲಿ ಎಲ್ಲರೂ ಜೊತೆಯಾಗಿ ಬೆಂಚುಗಳ ಮೇಲೆ ಕುಳಿತು ಕಲಿಯುತ್ತೇವೆ ಎಂದ ಅವರು, ಮನುಷ್ಯ ಇನ್ನೊಬ್ಬ ಮನುಷ್ಯನನ್ನು ನೋಡುವ ರೀತಿಯೇ ಸಂವಿಧಾನದ ಆಶಯ ಎಂದು ವಿಶ್ಲೇಷಿಸಿದರು.ಮತ್ತೋರ್ವ ದತ್ತಿ ದಾನಿಗಳಾದ ಸಂದೇಶ ಉಪಾಧ್ಯ ಅವರು, ತಮ್ಮ ತಂದೆ ಶಂಕರನಾರಾಯಣ ಉಪಾದ್ಯ ಸ್ಮರಣೆಯಲ್ಲಿ ಸ್ಥಾಪಿಸಿರುವ, ‘ಸಮಾಜ ಸೇವೆಯಲ್ಲಿ ಯುವಜನರ ಪಾತ್ರ’ ಕುರಿತು ದಾವಣಗೆರೆ ಜಿಲ್ಲಾ ಎನ್.ಎಸ್.ಎಸ್. ನೋಡಲ್ ಅಧಿಕಾರಿಗಳಾದ ಡಾ. ಎಚ್. ಆರ್. ತಿಪ್ಪೇಸ್ವಾಮಿ ಮಾತನಾಡಿ, ಸಮ ಸಮಾಜದ ನಿರ್ಮಾಣಕ್ಕೆ ಯುವಕರು ಮುಂದಾಗಬೇಕು. ದೇಶದ ಪ್ರಗತಿಗೆ ಕಾರಣರಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ದತ್ತಿ ದಾನಿಗಳಾದ ಕೆ. ರಾಮಚಂದ್ರ ಮಾತನಾಡಿ, ನಾವು ನೀಡಿದ ದತ್ತಿಯ ಮೂಲಕ ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಸಂವಿಧಾನದ ಆಶಯ ಕುರಿತು ಕೇಳಿಸಲು ಸಾಧ್ಯವಾಗಿದ್ದಕ್ಕೆ ಕಸಾಪ ಅಧ್ಯಕ್ಷರನ್ನು ಅಭಿನಂದಿಸುವೆ. ನನಗೆ ಅತ್ಯಂತ ಸಂತೋಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.