ಅನಾರೋಗ್ಯ ಪೀಡಿತ ಮಹಿಳೆಯನ್ನು ಗ್ರಾಮಸ್ಥರು ಡೋಲಿಯಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ಕಾಡು ಹೊಲದಲ್ಲಿ ಜರುಗಿದೆ.
ಕನ್ನಡಪ್ರಭ ವಾರ್ತೆ ಹನೂರು
ಅನಾರೋಗ್ಯ ಪೀಡಿತ ಮಹಿಳೆಯನ್ನು ಗ್ರಾಮಸ್ಥರು ಡೋಲಿಯಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ಕಾಡು ಹೊಲದಲ್ಲಿ ಜರುಗಿದೆ.
ಬೆಟ್ಟದ ಸಮೀಪದ ಕಾಡುಹೊಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸರಿಯಾದ ರಸ್ತೆ ಇಲ್ಲದ ಕಾರಣ ಸಾರಿಗೆ ವ್ಯವಸ್ಥೆ ಇಲ್ಲದೆ ಅನಾರೋಗ್ಯ ಪೀಡಿತ ಮಹಿಳೆಯನ್ನು ಡೋಲಿಯಲ್ಲಿ ಕಟ್ಟಿಕೊಂಡು ಮಹದೇಶ್ವರ ಬೆಟ್ಟದ ರಸ್ತೆಗೆ ಸಾಗಿಸಲು ಗ್ರಾಮಸ್ದರು ಹರಸಾಹಸಪಟ್ಟಿದ್ದಾರೆ.
ತುರ್ತು ಸೇವೆ ಇಲ್ಲದೇ ಡೋಲಿ:
ಮಲೆ ಮಹದೇಶ್ವರ ಬೆಟ್ಟದ ಸಮೀಪದ 2 ಕಿ.ಮೀ. ದೂರದಲ್ಲಿರುವ ಕಾಡುಹೋಲದ ನಿವಾಸಿ ದುಂಡಮ್ಮ ಮೂರ್ಚೆ ರೋಗದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲು ತುರ್ತುವಾಹನ ಸಿಗದೇ ಸಂಬಂಧಿಕರು ಹಾಗೂ ಗ್ರಾಮಸ್ಥರು ಡೋಲಿಯಲ್ಲಿ 2 ಕಿ.ಮೀ. ಹೊತ್ತು ತಂದು ಮಲೆ ಮಹದೇಶ್ವರ ಬೆಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದೇ ಸಂಬಂಧಿಕರು ತಮಿಳುನಾಡಿನ ಖಾಸಗಿ ಆಸ್ಪತ್ರೆಗೆ ಖಾಸಗಿ ವಾಹನದಲ್ಲಿ ತೆರಳಿ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ.---
ಚಿಕಿತ್ಸೆಗಾಗಿ ತಮಿಳುನಾಡಿಗೆ ರವಾನೆ
ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಮೂಲಭೂತ ಸೌಲಭ್ಯವಿಲ್ಲದ ಕುಗ್ರಾಮಗಳಿಗೆ ಆರೋಗ್ಯದ ಗ್ರಾಮದ ನಿವಾಸಿಗಳು ಡೋಲಿಯನ್ನು ಆಶ್ರಯಿಸಬೇಕಾಗಿರುವುದರಿಂದ ಕಾಡುಹೊಲದ ಮಹಿಳೆ ದುಂಡಮ್ಮ ಸೂಕ್ತ ಚಿಕಿತ್ಸೆ ಸಿಗದೆ ತಮಿಳುನಾಡಿಗೆ ಚಿಕಿತ್ಸೆಗಾಗಿ ತೆರಳಿರುವುದು ಈ ಭಾಗದ ಜನರ ದುರ್ದೈವ.
ಈ ಭಾಗದ ಶ್ರೀ ಕ್ಷೇತ್ರದ ತಪ್ಪಲಿನಲ್ಲಿ ಬರುವ ಕುಗ್ರಾಮಗಳ ಸ್ಥಿತಿ ಇದೇ ರೀತಿ ಮುಂದುವರೆದಿದ್ದು, ಮೂಲಭೂತ ಸೌಲಭ್ಯಗಳಿಗಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕಣ್ಣು ತೆರೆಸಲು ಗ್ರಾಮಸ್ಥರು ಹಲವಾರು ಬಾರಿ ಹೋರಾಟ ಮಾಡಿದ್ದರು, ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇರುವುದರಿಂದ ಮಲೆ ಮಹದೇಶ್ವರ ಬೆಟ್ಟದಿಂದ 2 ಕಿ.ಮೀ. ದೂರದಲ್ಲಿರುವ ಕಾಡುಹೊಲದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲು ತುರ್ತು ವಾಹನ ಸಿಗದೇ ಡೋಲಿಯನ್ನು ಆಶ್ರಯಿಸಿ ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ತಮಿಳುನಾಡಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.