ಬೀರೂರಿನ ಗುರುಭವನದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರೇರಣ ನುಡಿ-ಸಂವಾದ
ವಿದ್ಯಾರ್ಥಿಗಳು ಮೊದಲು ಚಂಚಲ ಬುದ್ದಿ ಬಿಟ್ಟು ಏಕಾಗ್ರತೆ ಕಲಿಯಬೇಕು. ಆಗ ಮಾತ್ರ ಜೀವನದಲ್ಲಿ ಸಾಧ ಸಾಧ್ಯ. ಸರ್ಕಾರಿ ಶಾಲೆಗಳಲ್ಲಿ ಕಲಿತರೆ ಸಾಧನೆ ಮಾಡಲು ಅಸಾಧ್ಯ ಎಂಬ ಹಿಂಜರಿಕೆ ಕೈಬಿಡಬೇಕು. ದೇಶದ ಅನೇಕ ಮಹನೀಯರು ಕಲಿತದ್ದು ಸರ್ಕಾರಿ ಶಾಲೆಯಲ್ಲೇ ಅದನ್ನು ಮರೆಯಬಾರದು ಎಂದರು.ಪೋಷಕರು ಮತ್ತು ಶಿಕ್ಷಕರು ಮತ್ತು ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳ ಜೀವನ ವ್ಯಕ್ತಿತ್ವ ವಿಕಸನ ಸಾಧ್ಯ, ವಿದ್ಯಾರ್ಥಿಗಳು ಒಳ್ಳೆಯ ಛಲ ಬೆಳೆಸಿಕೊಳ್ಳಬೇಕು. ಹಿರಿಯರು, ಶಿಕ್ಷಕರು ಹೇಳಿದ ಒಳ್ಳೆಯ ಮಾತನ್ನು ಸ್ವೀಕರಿಸಬೇಕು. ಪ್ರತಿನಿತ್ಯ ನಿಮ್ಮ ಜೀವನದ ಬಜೆಟ್ ನೀವೆ ತಯಾರಿಸಿಕೊಂಡು ಓದಲೇಬೇಕು. ಎಲ್ಲದಕ್ಕು ಸರಿಯಾಗಿ ಸಮಯ ಮೀಸಲಿರಿಸಿ ಓದುವ ಸಮಯದಲ್ಲಿ ಮೊಬೈಲ್, ಟಿವಿ, ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಪುಸ್ತಕವನ್ನು ನಿಮ್ಮ ಸಂಗಾತಿ ಯಾಗಿಸಿಕೊಂಡರೆ ಒಳಿತು ಎಂದರು.ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಪ್ರತಿ ಮನುಷ್ಯನ ಯಶಸ್ಸು, ಸಾಧನೆಗೆ ಪಂಚಮಂತ್ರಗಳಾದ ಶಿಸ್ತು, ಶ್ರಮ, ಸಮಯಪ್ರಜ್ಞೆ, ಆತ್ಮವಿಶ್ವಾಸ, ನಿರ್ಭಯತೆ ಮೈಗೂಡಿಸಿಕೊಂಡಾಗ ನಿಮ್ಮ ಚೈತನ್ಯ ಉತ್ಸಾಹವಾಗಿ ಕಲಿಯಬಹುದು ಎಂದರು.ಸಮಾಜದಲ್ಲಿ ದುರ್ಬಲರು, ಶೋಷಣೆಗೆ ಒಳಗಾದವರು ಮತ್ತಿತರಿಗೆ ಮಾತ್ರ ನಿಮ್ಮ ವಿದ್ವತ್ ಸದ್ಬಳಕೆ ಮಾಡಿ, ನೀವು ಸಬಲರಾಬೇಕಾದರೇ ಸಜ್ಜನರ ಸಹವಾಸ ಮಾಡಿ, ವಿವೇಕಾನಂದರಂತಹ ರೋಲ್ ಮಾಡೆಲ್ ಗಳನ್ನು ಮಾದರಿ ಯಾಗಿಟ್ಟುಕೊಂಡರೆ ಒಳಿತು ಎಂದರು.ಪರೀಕ್ಷಾ ಭಯ ಎದುರಿಸುವುದು ಹೇಗೆ: ಶಿಕ್ಷಕರು ಪಾಠವನ್ನು ಏಕಾಗ್ರತೆಯಿಂದ ಕೇಳಿ. ಮನನ ಮಾಡಿ ಕೊಳ್ಳಿ. ಗ್ರೂಪ್ ಸ್ಟಡೀಸ್ ಮಾಡಿ ಪ್ರತಿ ವಿಷಯದ ಬಗ್ಗೆ ಚರ್ಚಿಸಿ. ಕಂಠಪಾಠ ಮಾಡಬೇಡಿ, ಪ್ರತಿ ವಿಷಯವನ್ನು ಅರ್ಥೈಸಿಕೊಂಡು ಓದಿ. ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯ ಪ್ರತಿ ಪ್ರಶ್ನೆಗೆ ಎಷ್ಟು ಅಂಕವಿದೆ ಗಮನಿಸಿ ಅಷ್ಟಕ್ಕೆ ಮಾತ್ರ ಉತ್ತರ ಬರೆದರೆ ಸಮಯ ಉಳಿಯಲಿದೆ. ಪರೀಕ್ಷೆ ಅರ್ಧ ಗಂಟೆ ಮುಂಚೆ ತೆರಳಿ ದರೆ ನಿಮ್ಮಲ್ಲಿನ ಟೆನ್ಷನ್ ಕಡಿಮೆಯಾಗಿ ಉತ್ತರ ಬರೆಯಲು ಸುಲಭ ಎಂದರು.ಕಳೆದ 13 ವರ್ಷಗಳಿಂದ ರಾಜ್ಯದ 31 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ವ್ಯಕ್ತಿತ್ವ ವಿಕಸನ ಮತ್ತು ಪರೀಕ್ಷಾ ತರಬೇತಿ ಕಾರ್ಯಗಾರ ಯಶಸ್ವಿಯಾಗಿ ನಿರ್ವಹಿಸುತ್ತಿರುವ ಯುವಸ್ಫೂರ್ತಿ ಅಕಾಡೆಮಿ ಅಧ್ಯಕ್ಷ ಸುಂದ್ರೇಶ್ ಕಾರ್ಯ ಶ್ಲಾಘನೀಯ ಎಂದರು. ಅಕಾಡೆಮೆ ಅಧ್ಯಕ್ಷ ಸುಂದ್ರೇಶ್, ಸಂಸ್ಥೆಯಿಂದ ರಾಜ್ಯದ ಸರ್ಕಾರಿ ಪ್ರೌಢ ಶಾಲೆ, ಮೊರಾರ್ಜಿ ವಸತಿ ಶಾಲೆಗಳ ಮಕ್ಕಳಿಗೆ ವಿವಿಧ ನುರಿತ ಗಣ್ಯರಿಂದ ಸಂವಾದ, ಮತ್ತಿತರ ಕಾರ್ಯಕ್ರಮ ಮಾಡುವ ಮುಖೇನ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರ ನೀಡುತ್ತಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮುಖೇನ ಶಿಕ್ಷಣ ಕ್ರಾಂತಿ ಹೆಚ್ಚಿಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಕಡೂರು ನ್ಯಾಯಾಲಯದ ನ್ಯಾಯಾಧೀಶರಾದ ಅಮ್ರೀನ್ ಸುಲ್ತಾನ್, ತಹಕಲೀಲ್, ಉಪನಿರ್ದೇಶಕ ತಿಮ್ಮರಾಜು, ಬಿಇಒ ಗಳಾದ ಬುರ್ಹಾನುದ್ದಿನ್ ಚೋಪ್ದಾರ್, ತಿಮ್ಮಯ್ಯ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಸಿ. ಉಮಾಕಾಂತ್, ಕೆ.ಬಿ.ಚಂದ್ರಪ್ಪ, ನಾಗರಾಜ ನಾಯ್ಕ್, ಜಿ.ಟಿ.ಕುಸುಮ, ಶಶಿಕುಮಾರ್, ಜಯಶ್ರೀ, ಎನ್.ಎಂ.ಮೋಹನ್ ರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸಪ್ಪ, ಕಾರ್ಯದರ್ಶಿ ಆರ್.ಪಿ.ಅಶೋಕ್, ರಾಜಕುಮಾರ್, ಸೇರಿದಂತೆ ಬೀರೂರು ಶೈಕ್ಷಣಿಕ ವಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. 14 ಬೀರೂರು 1ಬೀರೂರಿನ ಗುರುಭವನದಲ್ಲಿ ಶನಿವಾರ ಶಿಕ್ಷಣ ಇಲಾಖೆ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘ ಹಾಗೂ ಚಿಕ್ಕಮಗಳೂರು ಯುವ ಸ್ಪೂರ್ತಿ ಅಕಾಡೆಮಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನಡೆದ ಪರೀಕ್ಷಾ ಪ್ರೇರಣ ನುಡಿ-ಸಂವಾದ ಕಾರ್ಯಕ್ರಮವನ್ನು ಹೈಕೋರ್ಟ್ ಹಿರಿಯ ನ್ಯಾಯಾಧೀಶ ಎಚ್.ಪಿ.ಸಂದೇಶ್ ಉದ್ಘಾಟಿಸಿದರು.