ಗ್ಯಾರಂಟಿ ಯಶಸ್ಸು ಸಹಿಸದೆ ರಾಜ್ಯಪಾಲರ ಆಡಳಿತ ದುರುಪಯೋಗ: ಟಿ.ಎಸ್. ಪ್ರಕಾಶ್ ವರ್ಮ

KannadaprabhaNewsNetwork | Published : Aug 18, 2024 1:52 AM

ಸಾರಾಂಶ

ತರೀಕೆರೆ, ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸು ಸಹಿಸಲಾಗದೆ ಬಿಜೆಪಿ ರಾಜ್ಯಪಾಲರ ಅಡಳಿತವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ದೂರಿದ್ದಾರೆ.

ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್, ಅಹಿಂದ ಬಳಗ, ಸಿಎಂ ಸಿದ್ದರಾಮಯ್ಯ ಅಭಿಮಾನಿಗಳ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸು ಸಹಿಸಲಾಗದೆ ಬಿಜೆಪಿ ರಾಜ್ಯಪಾಲರ ಅಡಳಿತವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ದೂರಿದ್ದಾರೆ.

ಶನಿವಾರ ಕಾಂಗ್ರೆಸ್ ಪಕ್ಷ, ಅಹಿಂದ ಬಳಗ, ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದ ಬಳಿ ಸಿದ್ದ ರಾಮಯ್ಯನವರ ವಿರುದ್ಧ ಬಿಜೆಪಿ ರಾಜ್ಯಪಾಲರು ಮೂಲಕ ಆಡಳಿತ ದೋರುಪಯೋಗ ಪಡಿಸಿಕೊಂಡು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡದರು.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಆರ್ಥಿಕ ಅಸಮಾನತೆಯಿಂದ ಬಸವಳಿದ ಜನರ ಬದುಕಿಗೆ ನೆಮ್ಮದಿ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಯಶಸ್ಸುಸಹಿಸಲಾಗದ ಭಾರತೀಯ ಜನತಾ ಪಾರ್ಟಿ, ಮೋದಿ ನೇತೃತ್ವದ ಸರ್ಕಾರ ವಾಮ ಮಾರ್ಗದ ಮೂಲಕ ರಾಜ್ಯಪಾಲರ ಆಡಳಿತ ದುರುಪಯೋಗಪಡಿಸಿಕೊಂಡು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೊಡಿಸಿರುವುದು ಅತ್ಯಂತ ಖಂಡನೀಯ ಹಾಗೂ ಇದು ಪ್ರಜಾಪ್ರಭುತ್ವಕ್ಕೆ ಮಾರಕ ಆದೇಶ ಎಂದು ದೂರಿದರು. ಬಿಜೆಪಿ ಸರ್ಕಾರದ ಮೂಡ ಹಗರಣವನ್ನು ವಿನಾಕಾರಣ ಸಿದ್ದರಾಮಯ್ಯ ಮೇಲೆ ಹೊರಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಇದಾಗಿದೆ ಆದರೆ ಪ್ರಯತ್ನ ಫಲಿಸದು. ಪಾರ್ವತಮ್ಮನವರಿಗೆ ನೀಡಿದ ನಿವೇಶನ ಅದು ಅವರ ತಂದೆ ಕುಟುಂಬದಿಂದ ನೀಡಿದ ಬಳುವಳಿ, ಅದಕ್ಕೂ ಸಿದ್ದರಾಮಯ್ಯನವರಿಗೂ ಏನು ಸಂಬಂಧ ? ಬೇಕಾದರೆ ಪಾರ್ವತಮ್ಮ ಕುಟುಂಬ ಮತ್ತು ಅವರ ತಮ್ಮ ಮಲ್ಲಿಕಾರ್ಜುನನ ವಿಚಾರಣೆ ಮಾಡಬೇಕು ಅದನ್ನು ಬಿಟ್ಟು ಈ ಆಸ್ತಿ ನೀಡಿರುವ ವ್ಯಕ್ತಿಗಳನ್ನು ವಿಚಾರಣೆ ಮಾಡುವುದನ್ನು ಬಿಟ್ಟು ಸಿದ್ದರಾಮಯ್ಯನವರ ಜನಪ್ರಿಯತೆ ಸಹಿಸಲಾಗದೆ ಕುತಂತ್ರ ರಾಜಕಾರಣ ಮಾಡುತ್ತಿರುವ ಬಿಜೆಪಿಯವರ ಹತಾಶ ಮನೋಭಾವ ತೋರಿಸಿದೆ ಎಂದು ಹೇಳಿದರು.ಪುರಸಭಾ ಸದಸ್ಯ ಟಿ. ದಾದಾುಪೀರ್ ಮಾತನಾಡಿ ಬಿಜೆಪಿ ಇಡಿ ತನಿಖೆ, ರೈಡ್ ಮಾಡುವುದು ಇತ್ಯಾದಿ ಮಾಡುತ್ತಿದೆ. ಇದು ಕೇಂದ್ರ ಸರ್ಕಾರದ ಕುತಂತ್ರ ಎಂದರು.

ಪುರಸಭೆ ಸದಸ್ಯ ಟಿ.ಜಿ.ಶಶಾಂಕ ಮಾತನಾಡಿ ಸಿದ್ದರಾಮಯ್ಯ ಪ್ರಾಮಾಣಿಕ ಮುಖ್ಯಮಂತ್ರಿ, ಅವರನ್ನು ಗುರಿಯಾಗಿಟ್ಟುಕೊಂಡು ಹುದ್ದೆಯಿಂದಇಳಿಸಲು, ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.ಮುಖಂಡ ಟಿ.ಆರ್.ಗಿರೀಶ್ ಮಾತನಾಡಿ ಜನಪ್ರಿಯ ಸರ್ಕಾರವಾಗಿದೆ. ಈ ಸರ್ಕಾರವ ಕೆಡವಬೇಕು ಎಂದು ಪಿತೂರಿ ಸೃಷ್ಠಿ ಮಾಡಿದೆ, ಇದು ಷಡ್ಯಂತ್ರವಾಗಿದೆ ಎಂದು ಹೇಳಿದರು.

ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್ ಮಾತನಾಡಿ ಇದು ಕೇಂದ್ರ ಸರ್ಕಾರದ ಷಡ್ಯಂತ್ರ. ರಾಜ್ಯಪಾಲರು ಅದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. ಪುರಸಭೆ ಸದಸ್ಯ ವಸಂತಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ರಮೇಶ್, ಮುಖಂಡರಾದ ಜಗದೀಶ್, ಮೆಹಬೂಬ, ಮಹಮದ್ ಇರ್ಷಾದ್, ಮುಗುಳಿ ಪ್ರಕಾಶ್, ಮತ್ತಿತರರು ಮಾತನಾಡಿದರು.17ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಕಾಂಗ್ರೆಸ್ ಪಕ್ಷ, ಅಹಿಂದ ಬಳಗ, ಸಿ.ಎಂ.ಸಿದ್ದರಾಮಯ್ಯ ಅಭಿಮಾನಿಗಳ ವತಿಯಿಂದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಪ್ರತಿಭಟನೆ ಏರ್ಪಡಿಸಲಾಗಿತ್ತು.

Share this article