ಕನ್ನಡಪ್ರಭ ವಾರ್ತೆ ಕೊರಟಗೆರೆ
ಪಟ್ಟಣದ ರಾಜೀವ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರಟಗೆರೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮದ್ ಝಬೇರ್ ಬೆಂಗಳೂರು ಸೇರಿದಂತೆ ಹಲವು ಕಡೆ ಗೃಹ ಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದು, ಅವರ ಪೋಟೋ ತೋರಿಸಿ ವಂಚಿಸಿರುವುದಾಗಿ ತಿಳಿದು ಬಂದಿದೆ. ಇಂತಹ ವಂಚಕರನ್ನು ಗೃಹ ಸಚಿವರು ಕ್ಷಮಿಸುವುದಿಲ್ಲ. ಆರೋಪಿ ಝಬೇರ್ ರಾಜ್ಯಪಾಲರ ಲೆಟರ್ ಹೆಡ್ ಹಾಗೂ ಸಹಿಯನ್ನೇ ಫೋರ್ಜರಿ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾನೆ. ಈ ಕೂಡಲೇ ಅವನನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದರು.ಗ್ರಾಮಾಂತರ ಬ್ಲಾಕ್ ಕಾಂಗ್ರಸ್ ಆಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ಡಾ.ಜಿ.ಪರಮೇಶ್ವರ್ ಜೊತೆ ಕೊರಟಗೆರೆ ಕ್ಷೇತ್ರ ಸೇರಿದಂತೆ ಹಲವು ಕಡೆ ಸಾವಿರಾರು ಜನರು ಪೋಟೋ ತೆಗೆಸಿಕೊಂಡಿದ್ದಾರೆ. ಆದರೆ ಯಾರೋಬ್ಬರೂ ಝಬೇರ್ ರೀತಿ ದುರುಪಯೋಗ ಮಾಡಿಕೊಂಡಿಲ್ಲ. ಆದರೆ ಕೆಲವು ಮಾಧ್ಯಮ, ಪತ್ರಿಕೆಗಳಲ್ಲಿ ಡಾ.ಜಿ.ಪರಮೇಶ್ವರ್ ಹೆಸರನ್ನು ಬಳಸಿ ತಪ್ಪಾಗಿ ಅಥೈಸಲಾಗುತ್ತಿದೆ. ಈಗಾಗಲೇ ಆರೋಪಿ ಝಬೇರ್‌ನನ್ನು ಬೆಂಗಳೂರು ಕೆಂಗೇರಿ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಹೇಳಿದರು. ತಾಲೂಕು ಅಲ್ಪಸಂಖ್ಯಾತ ಮುಖಂಡ ಮಹಮದ್ ಮಕ್ತಿಯಾರ್ ಮಾತನಾಡಿ, ಝಬೇರ್ ಮಾಡಿರುವ ವಂಚನೆ ಅಪರಾಧಗಳನ್ನು ಸಹಿಸುವುದಿಲ್ಲ. ಇಂತಹ ಅಪರಾಧಿಗಳು ಎಲ್ಲಾ ಪಕ್ಷ, ಜಾತಿ, ಧರ್ಮಗಳಲ್ಲೂ ಇದ್ದಾರೆ. ಇದಕ್ಕಾಗಿ ಗೃಹ ಸಚಿವರನ್ನು ಎಳೆ ತರುವುದು ಮೂರ್ಖತನ. ಮಹಮದ್ದ ಝಬೇರ್ ಚುನಾವಣಾ ಸಮಯದಲ್ಲಿ ಕಾಣಿಸಿಕೊಂಡವನು ಇಲ್ಲಿಯವರೆಗೂ ಪಕ್ಷದ ಕಾರ್ಯಕ್ರಮ ಮತ್ತು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ ಎಂದರು. ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ, ಪಪಂ ಸದಸ್ಯರಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಾಗರಾಜು, ನಂದೀಶ್, ಮುಖಂಡರಾದ ಮಹಾಲಿಂಗಪ್ಪ, ಗಣೇಶ್, ನಾಜೀರ್ ಅಹಮದ್, ಕವಿತಾ, ಲಕ್ಷ್ಮೀದೇವಮ್ಮ, ಸುಮಾ, ನಾಸೀರ್, ಇಸ್ಮಾಯಿಲ್, ಜಮೀರ್, ಮುರಳಿ, ವಿನಯ್‌ಕುಮಾರ್, ಅರವಿಂದ್, ದೀಪಕ್, ರಘುವೀರ್, ಗೋಪಿ ಹಾಜರಿದ್ದರು.