ಕದಂಬ ನೌಕಾನೆಲೆಗೆ ರಾಜ್ಯಪಾಲರ ಭೇಟಿ

KannadaprabhaNewsNetwork | Published : Dec 4, 2024 12:31 AM

ಸಾರಾಂಶ

ಬುಧವಾರ ಸಂಜೆ ನೌಕಾನೆಲೆಯಲ್ಲಿ ಆಯೋಜಿಸಲಾದ ನೇವಿ ಡೇ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಉಪಸ್ಥಿತರಿರುವರು.

ಕಾರವಾರ: ತಾಲೂಕಿನ ಅರಗಾದ ಕದಂಬ ನೌಕಾನೆಲೆಗೆ ಮಂಗಳವಾರ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ನೌಕಾಪಡೆ ವತಿಯಿಂದ ಗೌರವ ವಂದನೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.

ಬುಧವಾರ ಸಂಜೆ ನೌಕಾನೆಲೆಯಲ್ಲಿ ಆಯೋಜಿಸಲಾದ ನೇವಿ ಡೇ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಉಪಸ್ಥಿತರಿರುವರು. ರಿಯರ್ ಅಡ್ಮಿರಲ್ ಕೆ.ಎಂ. ರಾಮಕೃಷ್ಣನ್, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ಇದ್ದರು.ಸಹಕಾರ ಸಂಘದ ಅಧ್ಯಕ್ಷ, ನಿರ್ದೇಶಕರ ಅನರ್ಹತೆಗೆ ತಡೆಯಾಜ್ಞೆ

ಸಿದ್ದಾಪುರ: ತಾಲೂಕಿನ ಕರ್ಕಿಮಕ್ಕಿ ದೊಡ್ಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಾಯ ಭಟ್ಟ ಮತ್ತು ನಿರ್ದೇಶಕ ವಿವೇಕ ಸುಬ್ರಾಯ ಭಟ್ಟ ಅವರನ್ನು ಮೂರು ವರ್ಷಗಳವರೆಗೆ ಅನರ್ಹಗೊಳಿಸಿ ಶಿರಸಿ ಸಹಕಾರ ಸಂಘಗಳ ಸಹಯಕ ನಿಬಂಧಕರ ನ್ಯಾಯಾಲಯ ನೀಡಿದ ಆದೇಶಕ್ಕೆ ಕಾರವಾರ ಉಪನಿಬಂಧಕರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಕುಡೆಗೋಡಿನ ಪ್ರಕಾಶ ರಾಮಚಂದ್ರ ಹೆಗಡೆ ನೀಡಿದ ದೂರಿನ ಅನ್ವಯ ವಿಚಾರಣೆ ನಡೆಸಿದ ಶಿರಸಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ಸುಬ್ರಾಯ ಭಟ್ಟ ಹಾಗೂ ವಿವೇಕ ಭಟ್ಟ ಅವರನ್ನು ಅನರ್ಹಗೊಳಿಸಿ ಆದೇಶ ಮಾಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ಕಾರವಾರ ಸಹಕಾರಿ ಸಂಘಗಳ ಉಪನಿಬಂಧಕರ ನ್ಯಾಯಾಲಯದಲ್ಲಿ ಸುಬ್ರಾಯ ಭಟ್ಟ ಮತ್ತು ವಿವೇಕ ಭಟ್ಟ ಮೇಲ್ಮನವಿ ಸಲ್ಲಿಸಿದ್ದರು.ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ ಕಲಂ ೨೯- ಸಿ ಪ್ರಕರಣದ ಆದೇಶದಲ್ಲಿ ಆರೋಪಿಸಿದ ಅಂಶಗಳು ಊಹೆಯಲ್ಲಿ ಸೃಷ್ಟಿಸಿಕೊಂಡು ದಾಖಲಿಸಿದ್ದಾಗಿದೆ. ಸಂಘದ ಲೆಕ್ಕಪರಿಶೋಧನಾ ವರದಿಯಲ್ಲಿ ಈ ಕುರಿತು ಯಾವುದೇ ಆಕ್ಷೇಪಣೆ ಇಲ್ಲ. ಅಲ್ಲದೇ ಸಾಮೂಹಿಕವಾಗಿ ಆಡಳಿತ ಮಂಡಳಿಯಿಂದ ಲೋಪವಾಗಿರುವುದಾಗಿ ಪರಿಗಣಿಸಿದ್ದಲ್ಲಿ ಕೇವಲ ಓರ್ವ ಸದಸ್ಯನ ಮೇಲೆ ಕಲಂ ೨೯- ಸಿ ಅಡಿಯಲ್ಲಿ ಪ್ರಕರಣ ದಾಖಲಿಸಲು ಬರುವುದಿಲ್ಲ. ಅಲ್ಲದೇ ಆದೇಶವನ್ನು ಮಾಡಲು ಬರಲಾರದು ಎಂದಿದ್ದಾರೆ. ಅಲ್ಲದೆ ಈಗ ನೀಡಿರುವ ಆದೇಶವನ್ನು ಈ ಅಪೀಲಿನ ಅಂತಿಮ ಆದೇಶದವರೆಗೆ ತಡೆಹಿಡಿಯಬೇಕು. ಅಲ್ಲದೆ ರದ್ದುಗೊಳಿಸಬೇಕು ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ.ಹೀಗಾಗಿ ಸಹಕಾರ ಸಂಘಗಳ ಕಾಯ್ದೆ ೧೯೫೯ ಕಲಂ ೧೦೬(೩)ರ ಮೇರೆಗೆ ಹೊಂದಿರುವ ಅಧಿಕಾರವನ್ನು ಚಲಾಯಿಸಿ ಮೇಲ್ಮನವಿದಾರರ ಮಧ್ಯಂತರ ಅರ್ಜಿಯನ್ನು ಪರಿಗಣಿಸಲು ತೀರ್ಮಾನಿಸಿದೆ. ಎಆರ್ ಹೊರಡಿಸಿದ ಅನರ್ಹತೆ ಆದೇಶವನ್ನು ಡಿಆರ್ ನ್ಯಾಯಾಲಯ ಮುಂದಿನ ಆದೇಶದವರೆಗೆ ತಡೆಯಾಜ್ಞೆ ನೀಡಿದೆ. ಪ್ರಕರಣ ಮುಂದಿನ ವಿಚಾರಣೆ ಡಿ. ೩೧ಕ್ಕೆ ನಡೆಯಲಿದೆ.

Share this article