ಮುಂಡರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಂಡರಗಿ ತಾಲೂಕು ಘಟಕ ವತಿಯಿಂದ ತಾಲೂಕಿನ ನೌಕರರಿಗಾಗಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮೊದಲ ಬಾರಿಗೆ ಮುಂಡರಗಿ ನೌಕರರ ಕ್ರಿಕೆಟ್ ಪ್ರಿಮೀಯರ್ ಲೀಗ್ (ಎಂಇಪಿಎಲ್ ಟಿ-10) ಆಯೋಜನೆ ಮಾಡಲಾಗಿದೆ.
ವಿವಿಧ ಇಲಾಖೆಯ ಆಟಗಾರರನ್ನು ಒಳಗೊಂಡ 8 ತಂಡಗಳು ಭಾಗವಹಿಸಿವೆ. ಜು. 13ರಂದು ಆರಂಭವಾಗಿದ್ದು, ಆ. 4ರ ವರೆಗೆ ಪ್ರತಿ ಭಾನುವಾರ ಹಾಗೂ 2ನೇ ಹಾಗೂ 4ನೇ ಶನಿವಾರ ಪಂದ್ಯಗಳು ನಡೆಯಲಿವೆ. ಪ್ರತಿದಿನ 3 ಪಂದ್ಯಗಳು ನಡೆಯಲಿವೆ.ಕಳೆದ ಶನಿವಾರ ನೌಕರರ ಕ್ರಿಕೆಟ್ ಪ್ರಿಮೀಯರ್ ಲೀಗ್ ಉದ್ಘಾಟನೆ ಕಾರ್ಯಕ್ರಮ ಜರುಗಿತು. ತಹಸೀಲ್ದಾರ್ ಧನಂಜಯ ಮಾಲಗತ್ತಿ ಟ್ರೋಫಿ ಅನಾವರಣ ಮಾಡಿ ಮಾತನಾಡಿ, ನೌಕರರ ಕಾರ್ಯದೊತ್ತಡ ನಡುವೆ ಮನೋರಂಜನೆ ಅವಶ್ಯಕವಾಗಿದ್ದು, ನೌಕರರಿಗೆ ಕ್ರಿಕೆಟ್ ಮನೋರಂಜನೆ ನೀಡುವುದಲ್ಲದೆ, ನೌಕರರಲ್ಲಿ ಸಮನ್ವಯತೆ ಬೆಳೆಸಲು ಸಹಕಾರಿಯಾಗಿದೆ ಎಂದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಮುಂಡರಗಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಸದಾ ನೌಕರರ ಹಿತ ಕಾಪಾಡುವಲ್ಲಿ ಶ್ರಮವಹಿಸುತ್ತಾ ಬಂದಿದೆ. ಎಲ್ಲ ಇಲಾಖೆ ನೌಕರರು ಸೇರಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಒಂದು ರೀತಿಯ ಸಂತಸ ಉಂಟು ಮಾಡುತ್ತಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಮಂಜುನಾಥ ಕುಸಗಲ್, ಉದಯಕುಮಾರ ಯಲಿವಾಳ, ಶಿವಯೋಗಿ ಕಲ್ಮಠ, ಗಂಗಾಧರ ಅಣ್ಣಿಗೇರಿ, ಮಹ್ಮದರಫಿ ತಾಂಬೋಟಿ, ಸಂತೋಷ ಆನೇಕಲ್, ಶಂಕರ ಸರ್ವದೆ, ಮಲ್ಲಿಕಾರ್ಜುನ ಕಲಕಂಬಿ, ವಿ.ವಿ. ದಿಬ್ಬದಮನಿ, ಎಸ್.ಎಸ್. ಬಿಚ್ಚಾಲಿ, ಮಹಾಂತೇಶ ಖೋತ್, ಆರ್.ಎಲ್. ಬದಾಮಿ, ಎಲ್.ಆರ್. ನಾಯಕ, ವಿ.ಎ. ಕುಂಬಾರ, ಅರ್ಜುನ ಮುತ್ತಾನವರ, ಶ್ರೀಕಾಂತ ಅರಹುಣಸಿ, ಸುರೇಶ ದಾವಣಗೆರೆ, ಕಾಶೀನಾಥ ಶಿರಬಡಗಿ, ಮನೋಹರ ಎಸ್., ಎಚ್.ಎಂ. ಕಾತರಕಿ, ಚನ್ನಪ್ಪ, ಸಂತೋಷ ಅಂಗಡಿ, ಎಸ್.ಎಂ. ಮೇಟಿ, ಸಂತೋಷ ಜಾಧವ, ವಿಶ್ವನಾಥ ಉಳಾಗಡ್ಡಿ, ಎಂ.ಆರ್. ಹಾತಲಗೇರಿ, ಹುಸೇನ್ ಕವಲೂರ, ಭೋಜು ಲಮಾಣಿ ಉಪಸ್ಥಿತರಿದ್ದರು.