ಆವಿಷ್ಕಾರೋತ್ಸವದಲ್ಲಿ ಮಿಂಚಿದ ಸರ್ಕಾರಿ ಐಟಿಐ ಕಾಲೇಜು ಮಕ್ಕಳು

KannadaprabhaNewsNetwork |  
Published : Feb 01, 2024, 02:01 AM IST
ಫೋಟೋ- ಇನ್ನೋವೇಷನ್‌ 1, ಇನ್ನೋವೇಷನ್‌ 2 ಮತತು ಇನ್ನೋವೇಷನ್‌ 3ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ನಡೆದ 2 ದಿನಗಳ ಅವಿಷ್ಕಾರೋತ್ಸವದಲ್ಲಿ ಪಾಲ್ಗೊಂಡ ಫ್ರೌಢಶಾಲೆ, ಐಟಿಐ, ಪದವಿ ಹಂತದ ಉತ್ತಮ ಪ್ರಾತ್ಯಕ್ಷಿಕೆ ಮಾಡಿದ ಮಕ್ಕಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯ್ತು. | Kannada Prabha

ಸಾರಾಂಶ

ಎರಡು ದಿನಗಳ ಆವಿಷ್ಕಾರೋತ್ಸವದಲ್ಲಿ ಪಾಲ್ಗೊಂಡಿದ್ದ ಕಲಬುರಗಿ ನಗರದ ಸರ್ಕಾರಿ ಐಟಿಐ ಕಾಲೇಜು ಮಕ್ಕಳು, ಕಾಲೇಜು ಹಾಗೂ ಐಟಿಐ ವರ್ಗದಲ್ಲಿ ತಾವು ಮಾಡಿರುವ ವೈಜ್ಞಾನಿಕವಾದಂತಹ ವಿನೂತನ ಪ್ರಾತ್ಯಕ್ಷಿಗಳಿಗಾಗಿ ಎಲ್ಲಾ ಬಹುಮಾನಗಳನ್ನು ಬಾಚಿಕೊಂಡು ಗಮನ ಸೆಳೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಜರುಗಿದ ಎರಡು ದಿನಗಳ ಆವಿಷ್ಕಾರೋತ್ಸವದಲ್ಲಿ ಪಾಲ್ಗೊಂಡಿದ್ದ ಇಲ್ಲಿನ ಸರ್ಕಾರಿ ಐಟಿಐ ಕಾಲೇಜು ಮಕ್ಕಳು, ಕಾಲೇಜು ಹಾಗೂ ಐಟಿಐ ವರ್ಗದಲ್ಲಿ ತಾವು ಮಾಡಿರುವ ವೈಜ್ಞಾನಿಕವಾದಂತಹ ವಿನೂತನ ಪ್ರಾತ್ಯಕ್ಷಿಗಳಿಗಾಗಿ ಎಲ್ಲಾ ಬಹುಮಾನಗಳನ್ನು ಬಾಚಿಕೊಂಡು ಗಮನ ಸೆಳೆದಿದ್ದಾರೆ.

ಬುಧವಾರ ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರದ ಆವಿಷ್ಕಾರ ವಿಭಾಗದಲ್ಲಿ ನಡೆದ ಬಹುಮಾನ ವಿತರಣೆ ಹಾಗೂ ಆವಿಷ್ಕಾರೋತ್ಸವ ಸಮಾರೋಪ ಸಮಾರಂಭದಲ್ಲಿ ಗುವಿವಿ ಬಯೋಟೆಕ್ನಾಲಜಿ ವಿಭಾಗದ ಹಿರಿಯ ಪ್ರಾಧ್ಯಾಪಕ ಚಂದ್ರಕಾಂತ ಕೆಳಮನಿ ಅವರು ವಿಜೇತರಾದ ವಿವಿಧ ಶಾಲೆಯ ಮಾದರಿಗಳಿಗೆ ಬಹುಮಾನ ವಿತರಿಸಿದರು.

ಹೈಸ್ಕೂಲ್ ವಿಭಾಗ:

ರಘೋಜಿ ಶಾಲೆಯ ರೀತು, ಮಂಜುನಾಥ ಶಿಂಧೆ, ವಿಭಾ ಎನ್. ಕುರಕೋಟಿ ಸಿದ್ಧಪಡಿಸಿದ ಸ್ಮಾರ್ಟ್‌ ರಸಗೊಬ್ಬರ, ಕೃಷಿಯಲ್ಲಿ ಅಂತರ್ಜಾಲ ಮಹತ್ವ ಪ್ರಾತ್ಯಕ್ಷಿಕೆ ಪ್ರಥಮ ಬಹುಮಾನ ಪಡೆದರೆ, ಮಿಲಿನಿಯಂ ಶಾಲೆಯ ಅನುರಾಧಾ ಡಿ., ಅನುಷಾ ಆರ್ ಅವರ ಅಲ್ಕೋಹಾಲ್‌ ಎಂಜಿನ್‌ ಲಾಕ್‌ ಸಿಸ್ಟಂ ಮಾದರಿ ದ್ವಿತೀಯ ಬಹುಮಾನ ಹಾಗೂ ಕೇಂದ್ರೀಯ ವಿದ್ಯಾಲಯದ ಸುದರ್ಶನ ಸಿ. ರಾಠೋಡ ತಯ್ಯಾರಿಸಿದ ಅಪಘಾತ ಪತ್ತೆ ಮತ್ತು ಪರಿಸರ ಸ್ನೇಹಿ ಮಾದರಿ ತೃತೀಯ ಬಹುಮಾನ ಪಡೆದುಕೊಂಡಿವೆ.

ಪಿಯುಸಿ ಹಾಗೂ ಐಟಿಐ ವಿಭಾಗ:

ಸರ್ಕಾರಿ ಐಟಿಐ ಕಾಲೇಜಿನ (ಪುರುಷ) ರೋಹಿತ್ ಮತ್ತು ಸೋಹೇಬ್ ಅಖ್ತರ್ ಅವರ ಭೂಕಂಪನ ಮಾದರಿ ಮೊದಲ ಬಹುಮಾನ ಪಡೆದರೆ, ಅದೇ ಕಾಲೇಜಿನ ವಿದ್ಯಾರ್ಥಿಗಳಾದ ಶೈಲೇಶ ಮತ್ತು ಶಿವಲಿಂಗ್ ಅವರ 2 ಬೆಡ್‌ರೂಮ್‌ ಕೋೆಯ ಮನೆಯಲ್ಲಿನ ವಿನೂತನ ವೈರಿಂಗ್‌ ತಂತ್ರಜ್ಞಾನ ಮಾದರಿ ತೃತೀಯ ಬಹುಮಾನ ಬಾಚಿಕೊಂಡಿದೆ. ಸರಕಾರಿ ಮಹಿಳಾ ಐಟಐ ಮಕ್ಕಳಾದ ಶೈಲೇಶ್‌ , ಶಿವಲಿಂಗ್ ಮತ್ತು ಹೀನಾ ಅವರ ಸಾದಾ ಚೈನ್‌ ಮೇಕರ್‌, ಸ್ಪಾನರ್‌ ಮಾದರಿ ದ್ವಿತೀಯ ಸ್ಥಾನ ಬಾಚಿಕೊಂಡಿದೆ.

ಪದವಿ ಕಾಲೇಜು/ ಇಂಜನಿಯರಿಂಗ್ ಕಾಲೇಜು ವಿಭಾಗ:

ಕಲಬುರಗಿ ಎನ್.ವಿ. ಬಿ.ಎಡ್.ಕಾಲೇಜಿನ ವಿದ್ಯಾರ್ಥಿ ಅಜಯಕುಮಾರ ಅವರ ಬುದ್ದಿವಂತ ರೌತ ಮಾದರಿ ಮೊದಲ ಬಹುಮಾನ ಗಿಟ್ಟಿಸಿಕೊಂಡರೆ, ಸರ್ಕಾರಿ ಬಿ.ಎಡ್. ಕಾಲೇಜಿನ ವಿದ್ಯಾರ್ಥಿಗಳಾದ ಲಕ್ಷ್ಮೀ ಆರ್.ವಿ. ಮತ್ತು ಕಾರ್ತಿಕ ಕೆ.ಡಿ. ತಯಾರಿಸಿದ “3ಡಿ ವಿವಿದೋದ್ದೇಶ ಸ್ಟವ್‌” ಮಾದರಿಗೆ ದ್ವಿತೀಯ ಬಹುಮಾನ, ಎಸ್.ಬಿ. ಸೈನ್ಸ್ ಕಾಲೇಜಿನ ನಿಖೀಲ ಎಂ.ಸಿ, ಪಲ್ಲವಿ ಎಸ್.ಡಿ. ಅವರ ಹಸಿರು ಬಸ್‌ ನಿಲ್ದಾಣ ಮಾದರಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದುಕೊಂಡಿವೆ.

ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ 2000 ರು., ದ್ವಿತೀಯ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ 1500 ರು. ಹಾಗೂ ತೃತೀಯ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ 1000 ರು.ಗಳ ಬಹುಮಾನ ವಿತರಿಸಲಾಯಿತು. ಕಲಬುರಗಿ ಜಿಲ್ಲಾ ವಿಜ್ಞಾನ ಅಧಿಕಾರಿ ಕೆ.ಎಂ. ಸುನೀಲ್ ಸ್ವಾಗತಿಸಿದರು. ಜಿಲ್ಲಾ ವಿಜ್ಞಾನ ಕೇಂದ್ರದ ತಾಂತ್ರಿಕ ಅಧಿಕಾರಿ ಪಿ. ಕೃಷ್ಣಮೂರ್ತಿ ಅವರು ವಂದಿಸಿದರು. ಸಂಯೋಜಕ ಎನ್. ಪೊನ್ನರಸನ್ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ