ಕಂಪ್ಲಿ: ಯುವ ಶಿಲ್ಪಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ ಶಿಲ್ಪ ಕಲಾ ಕೇಂದ್ರಗಳನ್ನು ತೆರೆಯಲು ಸರ್ಕಾರ ಮುಂದಾಗಬೇಕು ಎಂದು ಪುರಸಭೆ ನಾಮ ನಿರ್ದೇಶಕ ಸದಸ್ಯರಾದ ಡಿ. ಮೌನೇಶ್ ಆಚಾರ ತಿಳಿಸಿದರು.
ಪಟ್ಟಣದ ಶ್ರೀ ಕಾಳಿಕಾ ಕಮಟೇಶ್ವರಿ ದೇವಸ್ಥಾನದ ಬಳಿಯ ಶ್ರೀ ವಿಶ್ವಕರ್ಮ ಭವನದಲ್ಲಿ ಕಂಪ್ಲಿ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಮಾತನಾಡಿದರು.ಭಾರತದ ಸಂಸ್ಕೃತಿಯನ್ನು ಹಾಗೂ ಎಂಜಿನಿಯರ್ ಅನ್ನು ಜಗತ್ತಿಗೆ ಪರಿಚಯಿಸಿದವರು ವಿಶ್ವಕರ್ಮರಾಗಿದ್ದಾರೆ. ದೇಶದ ಬೆನ್ನೆಲುಬು ರೈತರಾದರೆ ರೈತರ ಬೆನ್ನೆಲುಬು ವಿಶ್ವಕರ್ಮ ರಾಗಿದ್ದಾರೆ. ದೇಶದಲ್ಲಿನ ಐತಿಹಾಸಿಕ ದೇವಾಲಯಗಳು, ದೇವರ ಮೂರ್ತಿಗಳನ್ನು ಕೆತ್ತನೆ ಮಾಡುವ ಮೂಲಕ ದೇಶದ ಸಂಸ್ಕೃತಿಯನ್ನು ಎತ್ತಿಹಿಡಿಯುವಂತಹ ಕಾರ್ಯವನ್ನು ವಿಶ್ವ ಕರ್ಮರು ಮಾಡಿದ್ದರೂ ಈ ವರೆಗೂ ಒಂದು ದೇವಾಲಯಗಳ್ಳಲ್ಲಾಗಲಿ ಅವರ ಹೆಸರನ್ನು ಹಾಕಿಕೊಳ್ಳಲಾಗಿಲ್ಲ. ಈ ರೀತಿಯ ನಿಸ್ವಾರ್ಥ ಸೇವೆ ನಮ್ಮ ವಿಶ್ವ ಕರ್ಮರದ್ದಾಗಿದೆ. ಇಂತಹ ನಿಸ್ವಾರ್ಥ ಶಿಲ್ಪಿಗಳ ಸವಿ ನೆನಪಿಗೆ ಕಂಪ್ಲಿಯಲ್ಲಿ ವಿಶ್ವಕರ್ಮರ ವೃತ್ತ ನಿರ್ಮಿಸಬೇಕು ಎಂದರು. ಬಳಿಕ ತಹಸೀಲ್ದಾರ್ ಶಿವರಾಜ್ ಮಾತನಾಡಿ, ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆಯ ವಸ್ತುಗಳು, ಸ್ಮಾರಕಗಳ ನಿರ್ಮಾಣ ಕಾರ್ಯದಲ್ಲಿ ವಿಶ್ವಕರ್ಮರ ಕಲೆಗೆ ಸಾಕ್ಷಿ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈಚೆಗೆ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಡಿ. ಮೌನೇಶ್ ಆಚಾರ್, ಯುವ ಶಿಲ್ಪಿ ಪವನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಶಾಸಕ ಜೆ.ಎನ್. ಗಣೇಶ, ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ, ಪಿಎಸ್‌ಐ ನಿಂಗಪ್ಪ, ವಿಶ್ವಕರ್ಮ ಸಮಾಜದ ಅಧ್ಯಕ್ಷ ರುದ್ರಪ್ಪಾಚಾರಿ, ಉಪಾಧ್ಯಕ್ಷ ಚಂದ್ರಶೇಖರ ಕಾಳಾಚಾರಿ, ಪ್ರಮುಖರಾದ ಶಶಿಧರ್, ಗುರು ಮೂರ್ತಿ, ರಾಘು, ಮೌನೇಶ್, ನಾಗಲಿಂಗ, ರಾಮಚಂದ್ರ ಆಚಾರಿ, ನಾರಾಯಣ ಆಚಾರಿ, ವಿಜಯ್ ಕುಮಾರ್ ಸೇರಿದಂತೆ ಅನೇಕರಿದ್ದರು.ವಿಶ್ವಕರ್ಮ ಜಯಂತಿ ಅದ್ಧೂರಿ ಮೆರವಣಿಗೆ
ಕುರುಗೋಡು: ಪಟ್ಟಣದಲ್ಲಿ ವಿಶ್ವಕರ್ಮ ಜಯಂತಿ ಅಂಗವಾಗಿ ಮಂಗಳವಾರ ಉತ್ಸವಮೂರ್ತಿ ಮೆರವಣಿಗೆ ಮಾಡಲಾಯಿತು. ಕೆಳಗಳಪೇಟೆಯ ಕಾಳಮ್ಮದೇವಿ ದೇವಸ್ಥಾನದಿಂದ ಪ್ರಾರಂಭಗೊ೦ಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಾದನಹಟ್ಟಿ ರಸ್ತೆಯಲ್ಲಿರುವ ವಿಶ್ವಕರ್ಮ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡಿತು. ಡೊಳ್ಳು, ಸಮಾಳ, ರಾಮ್ಡೋಲ್, ಸುಮಂಗಳೆಯರ ಕುಂಭ, ಕಳಸ ಭಾಗವಹಿಸಿ ಮೆರವಣಿಗೆಯ ಮೆರಗು ಹೆಚ್ಚಿಸಿದ್ದವುವಿಶ್ವಕರ್ಮ ಚಿತ್ರಪಟಕ್ಕೆ ಪೂಜೆ ನೆರವೇರಿಸಿ ತಹಸೀಲ್ದಾರ್ ನರಸಪ್ಪ ಮಾತನಾಡಿ, ಪರಿಶ್ರಮದ ಜೀವನ ಸಾಗಿಸುವ ವಿಶ್ವಕರ್ಮ ಸಮುದಾಯಕ್ಕೆ ಸಮಾಜದಲ್ಲಿ ವಿಶೇಷ ಗೌರವವಿದೆ. ಎಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಸರ್ಕಾರದ ಯೋಜನೆಗಳ ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.
ಗ್ರೇಡ್-೨ ತಹಸೀಲ್ದಾರ್ ಮಲ್ಲೇಶಪ್ಪ, ವಿಶ್ವಕರ್ಮ ಸಮಾಜದ ಮುಖಂಡರಾದ ಡಾ. ತಿಪ್ಪೇಸ್ವಾಮಿ, ಪ್ರಕಾಶ್ ಆಚಾರಿ, ಟಿ.ವಿ. ವೀರೇಶ, ಮಾನಪ್ಪಾಚಾರಿ, ನಾಗಮೂರ್ತಿ, ಶಶಿಧರ, ವೆಂಕಟೇಶ, ಮೌನೇಶ್ ಆಚಾರಿ, ಚಂದ್ರಶೇಖರ, ರಮೇಶ್, ಗುರು, ಕೃಷ್ಣ, ಗುರುರಾಜ ಆಚಾರಿ, ರಾಜಶೇಖರ ಆಚಾರಿ, ತ್ರಿಲೋಕಾಚಾರಿ ಮತ್ತು ಮೌನೇಶ್ ಆಚಾರಿ ಇದ್ದರು.ವಿಶ್ವಕರ್ಮ ಜಯಂತಿ ಆಚರಣೆಹೊಸಪೇಟೆ:
ಶ್ರೀ ವಿಶ್ವಕರ್ಮ ಜಯಂತಿ ಅಂಗವಾಗಿ ವಿಜಯನಗರ ಜಿಲ್ಲಾಡಳಿತದ ವತಿಯಿಂದ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ವಿಶ್ವಕರ್ಮ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಸರಳವಾಗಿ ಆಚರಿಸಲಾಯಿತು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಜಿಪಂ ಸಿಇಒ ಅಕ್ರಂ ಶಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.