ಏ.26ರಿಂದ ಗೌಡ ಕುಟುಂಬಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

KannadaprabhaNewsNetwork |  
Published : Feb 01, 2025, 12:01 AM IST
32 | Kannada Prabha

ಸಾರಾಂಶ

ಮರಗೋಡು ಗೌಡ ಈವಿಂಗ್ ಸ್ಟಾರ್ ವತಿಯಿಂದ ಏ.26ರಿಂದ 15 ದಿನಗಳ ಕಾಲ ಗ್ರಾಮದ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗೌಡ ಕುಟುಂಬಗಳ ನಡುವಣ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮರಗೋಡು ಗೌಡ ಈವಿಂಗ್ ಸ್ಟಾರ್ ವತಿಯಿಂದ ಏ.26ರಿಂದ 15 ದಿನಗಳ ಕಾಲ ಗ್ರಾಮದ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗೌಡ ಕುಟುಂಬಗಳ ನಡುವಣ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಗೌಡ ಈವಿಂಗ್ ಸ್ಟಾರ್ ಅಧ್ಯಕ್ಷ ರೋಷನ್ ಕಟ್ಟೆಮನೆ, ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೌಡ ಸಮುದಾಯದ 100-150 ಕುಟುಂಬ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ತಂಡಗಳ ಹೆಸರು ನೋಂದಣಿಗೆ ಏ.10ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು. ಪಂದ್ಯಾವಳಿಯಲ್ಲಿ ಪ್ರತಿನಿತ್ಯ 10 ಪಂದ್ಯಗಳು ನಡೆಯಲಿದ್ದು, ಪ್ರತಿ ಪಂದ್ಯ 6 ಓವರ್‌ಗಳದ್ದಾಗಿರುತ್ತದೆ. ಪ್ರೀ ಕ್ವಾರ್ಟರ್ ಹಂತದ ಪಂದ್ಯಗಳು 8 ಓವರ್ ಹಾಗೂ ಕ್ವಾರ್ಟರ್ ಫೈನಲ್ ನಂತರದ ಎಲ್ಲಾ ಪಂದ್ಯಗಳು 10 ಓವರ್‌ಗಳದ್ದಾಗಿದ್ದು, ಪ್ರೀ ಕ್ವಾರ್ಟರ್ ನಂತರದ ಎಲ್ಲಾ ಪಂದ್ಯಗಳನ್ನು ಪವರ್ ಪ್ಲೇ ಮೂಲಕ ನಡೆಸಲಾಗುತ್ತದೆಂದು ಎಂದರು.

ಪಂದ್ಯಾವಳಿಯನ್ನು 10 ಲಕ್ಷ ರು.. ಅಂದಾಜು ಮೊತ್ತದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಒಟ್ಟು ಬಹುಮಾನದ ಮೊತ್ತ 3 ಲಕ್ಷ ರು.ಗಳಾಗಿರುತ್ತದೆ. ಮೊದಲ ನಾಲ್ಕು ಸ್ಥಾನಗಳನ್ನು ಪಡೆಯುವ ತಂಡಗಳಿಗೆ ಆಕರ್ಷಕ ನಗದು ಬಹುಮಾನ ಸೇರಿದಂತೆ ಟ್ರೋಫಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕ್ವಾರ್ಟರ್ ಫೈನಲ್ ಹಂತವನ್ನು ತಲುಪುವ ಪ್ರತಿ ತಂಡಕ್ಕೂ ನಗದು ಬಹುಮಾನ ನೀಡಲಾಗುತ್ತದೆ. ಇದರೊಂದಿಗೆ ಪಂದ್ಯ ಪುರುಷೋತ್ತಮ, ಉತ್ತಮ ಬ್ಯಾಟಿಂಗ್, ಉತ್ತಮ ಬೌಲ‌ರ್, ಸರಣಿ ಪುರುಷೋತ್ತಮ, ಉತ್ತಮ ಕ್ಷೇತ್ರ ರಕ್ಷಕ, ಉತ್ತಮ ಮಹಿಳಾ ಆಟಗಾರ್ತಿ, ಉದಯೋನ್ಮುಖ ಆಟಗಾರ ಪ್ರಶಸ್ತಿ ನೀಡಲಾಗುತ್ತದೆಂದು ವಿವರಿಸಿದರು. ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ನೋಂದಣಿ ಶುಲ್ಕವಾಗಿ 3 ಸಾವಿರ ರು. ನಿಗದಿಪಡಿಸಲಾಗಿದೆ.

ತಂಡಗಳ ಹೆಸರು ನೋಂದಣಿಗೆ ಮಗರೇನ ರಂಜು - 8762249317, ಬೆಳ್ಳೂರು ಮುನ್ನ - 9483678377 ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಟ್ಟೆಮನೆ ರೋಷನ್ ಮೊ.9449361933 ಹಾಗೂ ಕರ್ಣಯ್ಯನ ವಿವೇಕ್ - 9902497817 ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.

ಗೌಡ ಈವಿಂಗ್ ಸ್ಟಾರ್ ಉಪಾಧ್ಯಕ್ಷ ಪರ್ಲಕೋಟಿ ಸತ್ಯ, ಕಾರ್ಯದರ್ಶಿ ಕರ್ಣಯ್ಯನ ವಿವೇಕ್, ಖಜಾಂಚಿ ಬೈಮನ ಶರ್ವಿನ್, ಸದಸ್ಯ ಕೊಂಪುಳಿರ ಹೇಮರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ