ಗೌಡ ಫುಟ್ಬಾಲ್ : ಬಿಳಿಯಂಡ್ರ, ಕೊಂಪುಳಿರ ತಂಡ ಪ್ರೀ ಕ್ವಾರ್ಟರ್ ಹಂತಕ್ಕೆ ಪ್ರವೇಶ

KannadaprabhaNewsNetwork | Published : May 16, 2025 1:52 AM
Follow Us

ಸಾರಾಂಶ

ಎಂಟನೇ ವರ್ಷದ ಗೌಡ ಫುಟ್ಬಾಲ್‌ ಪಂದ್ಯಾವಳಿಯಲ್ಲಿ ಬಿಳಿಯಂಡ್ರ ಮತ್ತು ಕೊಂಪುಳಿರ ತಂಡ ಪ್ರೀ ಕ್ವಾರ್ಟರ್‌ ಹಂತಕ್ಕೆ ಪ್ರವೇಶ ಪಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗೌಡ ಫುಟ್ಬಾಲ್ ಅಕಾಡೆಮಿ ಕೊಡಗು ಇವರ ವತಿಯಿಂದ ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಎಂಟನೇ ವರ್ಷದ ಗೌಡ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬಿಳಿಯಂಡ್ರ ಮತ್ತು ಕೊಂಪುಳಿರ ತಂಡ ಪ್ರೀ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆಯಿತು.

ಗುರುವಾರ ನಡೆದ ಇಟ್ಟಣಿಕೆ ಹಾಗೂ ಪರ್ಲಕೋಟಿ ತಂಡಗಳ ನಡುವಿನ ಪಂದ್ಯದಲ್ಲಿ ಪರ್ಲಕೋಟಿ ತಂಡ 3 ಗೋಲ್‌ಗಳಿಂದ ಜಯಗಳಿಸಿತು. ದೇವಂಗೋಡಿ ಹಾಗೂ ಬಿಳಿಯಂಡ್ರ ತಂಡಗಳ ನಡುವಿನ ಪಂದ್ಯದಲ್ಲಿ ಬಿಳಿಯಂಡ್ರ ತಂಡ 6 ಗೋಲ್‌ಗಳಿಂದ ಜಯಗಳಿಸಿತು. ಕೈಕೇರಿ ಮುಕ್ಕಾಟಿ ಹಾಗೂ ಕೊಂಪುಳಿರ ತಂಡಗಳ ನಡುವಿನ ಪಂದ್ಯದಲ್ಲಿ ಕೊಂಪುಳಿರ ತಂಡ 3 ಗೋಲ್ಗಳಿಂದ ಜಯಗಳಿಸಿತು.

ಗುಡಂಡ್ರ ಹಾಗೂ ಚೆಟ್ಟಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಟ್ಟಿಮಾಡ ತಂಡ 2 ಗೋಲ್‌ಗಳಿಂದ ಜಯಗಳಿಸಿತು. ನೇಯ್ಯಣಿ ಹಾಗೂ ತುಂತಾಜಿರಾ ನಡುವಿನ ಪಂದ್ಯದಲ್ಲಿ ತುಂತಾಜಿರ ತಂಡ 2 ಗೋಲ್, ನೇಯ್ಯಣಿ ತಂಡ 3 ಗೋಲ್‌ಗಳಿಸಿ ಜಯಗಳಿಸಿತು. ಬಡುವಂಡ್ರ ಹಾಗೂ ಬಿಳಿಯಂಡ್ರ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು 1-1 ಗೋಲ್‌ಗಳನ್ನು ಗಳಿಸಿಕೊಂಡು ಸಮಬಲ ಸಾಧಿಸಿತು. ಟ್ರೈ ಬ್ರೇಕರ್‌ನಲ್ಲಿ ಬಿಳಿಯಂಡ್ರ ತಂಡ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಪೊಕ್ಕುಳಂಡ್ರ ಹಾಗೂ ಎಡಿಕೇರಿ ತಂಡಗಳ ನಡುವಿನ ಪಂದ್ಯದಲ್ಲಿ ಪೊಕ್ಕುಳಂಡ್ರ ತಂಡ 3 ಗೋಲ್ ಗಳಿಸಿಕೊಂಡು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಬೊಳ್ಳೂರು ಹಾಗೂ ಪರ್ಲಕೋಟಿ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲ 1 ಗೋಲ್ ಗಳಿಸಿಕೊಂಡು ಸಮಬಲ ಸಾಧಿಸಿತು. ಟ್ರೈ ಬ್ರೇಕರ್‌ನಲ್ಲಿ ಬೊಳ್ಳೂರು ತಂಡ ಜಯಗಳಿಸಿತು.

ಬೈಲೆ ಹಾಗೂ ಸಿರಕಜ್ಜೆ ತಂಡಗಳ ನಡುವಿನ ಪಂದ್ಯದಲ್ಲಿ ಬೈಲೆ ತಂಡ 7 ಗೋಲ್ ಗಳಿಸಿಕೊಂಡು ಜಯಗಳಿಸಿತು. ಕಟ್ಟೆಮನೆ ಹಾಗೂ ಕಡ್ಲೆರ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲ 1 ಗೋಲ್ ಗಳಿಸಿ ಸಮಬಲ ಸಾಧಿಸಿತು. ಟ್ರೈ ಬ್ರೇಕರ್‌ನಲ್ಲಿ ಕಟ್ಟೆಮನೆ ತಂಡ ಜಯಗಳಿಸಿತು. ಕುಯ್ಯಮುಡಿ ಹಾಗೂ ಕೋಲ್ಯದ ತಂಡಗಳ ನಡುವಿನ ಪಂದ್ಯದಲ್ಲಿ ಕುಯ್ಯಮುಡಿ ತಂಡ 5 ಗೋಲ್‌ಗಳಿಂದ ಜಯಗಳಿಸಿತು.