ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಾಧ್ಯಕ್ಷರಾಗಿ ಸೂರ್ತಲೆ ಆರ್. ಸೋಮಣ್ಣ, ಕಾರ್ಯದರ್ಶಿಯಾಗಿ ಪೊಳಕಂಡ ಎಂ. ಸಂದೀಪ್, ಖಜಾಂಚಿಯಾಗಿ ಕಾಲೇರಮ್ಮನ ನಂದ ಕುಮಾರ್ ಆಯ್ಕೆಯಾಗಿದ್ದಾರೆ. ನಿದೇರ್ಶಕರಾಗಿ ಅಮೆ ಸೀತರಾಮ್, ಪೊನ್ನಚ್ಚನ ಮಧುಸೂದನ್, ಕೊಲ್ಯದ ಗಿರೀಶ್, ಹುದೇರಿ ರಾಜೇಂದ್ರ, ಪೈಕೆರ ಮನೋಹರ್, ಪೇರಿಯಾನ ಘನಶ್ಯಾಮ್, ತೋಟಂ ಬೈಲು ಅನಂತ ಕುಮಾರ್, ಮಂದ್ರಿರ ತೇಜಸ್, ಕೊಂಬನ ಪ್ರವೀಣ್, ಚೊಕ್ಕಾಡಿ ಪ್ರೇಮ ರಾಘವಯ್ಯ, ಮೂಮಜಲು ಅಮಿತ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಕೊಡಗು ಗೌಡ ಸಮಾಜದ ಉಪಾಧ್ಯಕ್ಷ ಸೂರ್ತಲೆ ಆರ್. ಸೋಮಣ್ಣ ಮಾತನಾಡಿ, ಕೊಡಗು ಗೌಡ ಸಮಾಜವು ಜನಾಂಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಉನ್ನತಿಗೆ ಕೊಡುಗೆ ನೀಡಲಿದೆ ಎಂದು ಭರವಸೆ ನೀಡಿದ ಅವರು, ಹಿಂದಿನ ೧೦ ವರ್ಷಗಳ ಅವಧಿಯಲ್ಲಿ ಪೇರಿಯನ ಜಯಾನಂದ ಅವರ ಅಧ್ಯಕ್ಷತೆಯಲ್ಲಿ ಉತ್ತಮ ಆಡಳಿತ ನಡೆಸಿ, ಆಧುನಿಕ ಕಲ್ಯಾಣ ಮಂಟಪ ನಿರ್ಮಾಣಗೊಂಡಿದೆ. ಆದರೆ, ಕೊಡಗು ಗೌಡ ಸಮಾಜಕ್ಕೆ ಸ್ವಂತ ಜಾಗದ ಕೊರತೆ ಕಾಡುತ್ತಿತ್ತು. ಇದನ್ನು ಮನಗಂಡ ಆಡಳಿತ ಮಂಡಳಿ ಮದೆ ಗ್ರಾಮದ ಸರ್ವೆ ನಂ.೯೮/೧ರಲ್ಲಿ ಲಭ್ಯವಿರುವ ಸರ್ಕಾರಿ ಜಾಗದಲ್ಲಿ ೮ ಎಕರೆ ಜಾಗ ಮಂಜೂರು ಮಾಡುವಂತೆ ಸತತ ಪ್ರಯತ್ನ ಮಾಡಿತ್ತು. ಪರಿಣಾಮ ೬ ಎಕರೆ ಜಾಗ ಇಂದು ಲಭ್ಯವಾಗಿದೆ. ಜನಾಂಗದ ಶಿಕ್ಷಣ, ಕ್ರೀಡಾಭಿವೃದ್ಧಿ ಹಾಗೂ ಸಾಂಸ್ಕೃತಿಕ ಉದ್ದೇಶಕ್ಕಾಗಿ ಮಂಜೂರು ಮಾಡಿಸಿದ್ದು, ಆಡಳಿತ ಮಂಡಳಿಗೆ ಹೆಮ್ಮೆ ಇದೆ ಎಂದರು.ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಪೊಳಕಂಡ ಎಂ. ಸಂದೀಪ್, ಮಾಜಿ ಅಧ್ಯಕ್ಷರು ಮತ್ತು ನಿರ್ದೇಶಕ ಪೇರಿಯನ ಜಯಾನಂದ, ನಿದೇರ್ಶಕರಾದ ಕೊಲ್ಯದ ಗಿರೀಶ್, ಹುದೇರಿ ರಾಜೇಂದ್ರ ಇದ್ದರು.