ರಬಕವಿ-ಬನಹಟ್ಟಿ: ಕನ್ನಡಪ್ರಭ ರೈತ ರತ್ನ ಪ್ರಶಸ್ತಿ ಪುರಸ್ಕೃತರಾದ ಹಳಿಂಗಳಿಯ ಪ್ರಗತಿಪರ ರೈತ ಧನಪಾಲ ಯಲ್ಲಟ್ಟಿ ಅವರಿಗೆ ತಮಿಳುನಾಡಿನ ಏಷಿಯಾ ಇಂಟರ್‌ನ್ಯಾಶನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ .ಸಾವಯವ ಮತ್ತು ಬಹುಬೆಳೆ ಮೂಲಕ ಕೃಷಿ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಯಾಗಿರುವ ಡಾ.ಧನಪಾಲ ಯಲಟ್ಟಿ ರಾಜ್ಯದ ರೈತರಿಗೆ ಬೆಳೆ ವಿಧಾನ, ಸಂರಕ್ಷಣೆ ಕ್ರಮಗಳನ್ನು ವಿವರಿಸುತ್ತ ರೈತರ ಕಣ್ಮಣಿಯಾಗಿದ್ದಾರೆ. ಕೃಷಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆ ಗುರುತಿಸಿ ವಿವಿ ಗೌರವ ಡಾಕ್ಟರೇಟ್ ನೀಡಿದ್ದು, ಈಚೆಗೆ ನಡೆದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.