ಕನ್ನಡಪ್ರಭ ವಾರ್ತೆ ಸಿಂದಗಿ
ಪಟ್ಟಣದ ಏಜೇಂಲ್ಸ್ ಮತ್ತು ಸುಷ್ಮಾ ಆಂಗ್ಲ ಮಾಧ್ಯಮ ಹಾಗೂ ಶಾಂತಿನಿಕೇತನ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ವಿಜ್ಞಾನ ಮೇಳ ಮತ್ತು ಹಳ್ಳಿ ಸೊಗಡು ಕಾರ್ಯಕ್ರಮದಲ್ಲಿ ಕಂಡು ಬಂದಿತು.ಈ ವೇಳೆ ನಗರದ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಸುಧಾಕರ ಚವ್ಹಾಣ ಮಾತನಾಡಿ, ಗ್ರಾಮೀಣ ಜೀವನದ ಸುಂದರ ಚಿತ್ರಣವೆಂದರೆ ಅದು ಹಳ್ಳಿ ಸೊಗಡು. ಆಧುನಿಕತೆಯ ಪ್ರಭಾವದಿಂದ ಪ್ರಕೃತಿ ಮತ್ತು ಸಂಸ್ಕೃತಿ ದೂರವಾಗುತ್ತಿದೆ. ಆರೋಗ್ಯಕರವಾದ ಹಳ್ಳಿಯ ಬದುಕು ಇಂದು ಹಾಳಾಗುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಟ್ಟು ವೈಜ್ಞಾನಿಕ ಜಗತ್ತಿನ ಕಡೆಗೆ ಸಾಗಬೇಕು. ವಿಜ್ಞಾನ ವಸ್ತು ಪ್ರದರ್ಶನಗಳ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಮಾರ್ಗ ತೊರುತ್ತದೆ. ಮಕ್ಕಳಲ್ಲಿ ಸೃಜನಶೀಲತೆ, ವೈಜ್ಞಾನಿಕ ಜ್ಞಾನ ಹೆಚ್ಚಾಗುತ್ತದೆ ಎಂದರು.ಕಸಾಪ ಮಾಜಿ ಅಧ್ಯಕ್ಷ ಸಿದ್ದಲಿಂಗ ಚೌಧರಿ ಮಾತನಾಡಿ, ಹಳ್ಳಿ ಸಂಸ್ಕೃತಿ ನಿಜಕ್ಕೂ ಆರೋಗ್ಯಕರ ವಾತಾವರಣವನ್ನು ಸೃಷ್ಠಿ ಮಾಡುತ್ತದೆ. ಮಕ್ಕಳಲ್ಲಿರುವ ಪ್ರತಿಭೆಗೆ ಶಿಕ್ಷಕರು ಹೆಚ್ಚು ಒತ್ತು ನೀಡಿದಾಗ ಮಾತ್ರ ಅರವರಲ್ಲಿ ರಚನಾತ್ಮಕ ವಾತಾವರಣ ಉಂಟಾಗುತ್ತದೆ. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರತಿ ಮಕ್ಕಳ ತಂಡದಲ್ಲಿ ಹೊಸತನದ ಪ್ರದರ್ಶನ ತೊರಬೇಕೆಂಬ ಹಂಬಲ ಎದ್ದು ಕಾಣುತ್ತಿತ್ತು. ಸೂಕ್ತ ಸಮಯದಲ್ಲಿ ಸರಿಯಾದ ತರಬೇತಿ ಸಿಕ್ಕರೆ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ವಿಜ್ಞಾನಿಗಳಾಗುವ ಅವಕಾಶಗಳಿವೆ ಎಂದರು.ಈ ವೇಳೆ ಕಾನಿಪ ಅಧ್ಯಕ್ಷ ಮಹಾಂತೇಶ ನೂಲನವರ, ಕಾರ್ಯದರ್ಶಿ ಇಸ್ಮಾಯಿಲ್ ಶೇಖ, ನಾಗೇಶ ತಳವಾರ, ಸಂಸ್ಥೆಯ ಮುಖ್ಯಸ್ಥ ಶರಣಗೌಡ ಬಿರಾದಾರ ಮಾತನಾಡಿದರು. ಮುಖ್ಯಗುರು ಮಲ್ಲಿಕಾರ್ಜುನ ಬಿರಾದಾರ, ಕಾವ್ಯಾ ಬಿರಾದಾರ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ಮಲ್ಲಮ್ಮ ಕುಂಬಾರ, ಪೂಜಾ ಕರ್ನಾಳ, ಭಾರತಿ ಅಗಸರ, ಜಯಶ್ರೀ ಚಲವಾದಿ, ವೈಷ್ಣವಿ ಗುತ್ತೇದಾರ, ಸಿದ್ದಮ್ಮ ಹರನಾಳ, ರಾಘವೇಂದ್ರ ನಾಯಕ, ಸಂಗಮೇಶ ಕರಡಿ, ಪವನ ಕುಲಕರ್ಣಿ, ಗೋಕುಲ ನಾಯಕ ಸೇರಿದಂತೆ ಇತರರು ಇದ್ದರು. ಶಿಕ್ಷಕ ಶರಣು ನಂದ್ಯಾಳ ಸ್ವಾಗತಿಸಿದರು, ಸುನಿತಾ ಮಾಳೆಗಾರ ನಿರೂಪಿಸಿ, ವಂದಿಸಿದರು.