ಕನ್ನಡಪ್ರಭ ವಾರ್ತೆ ಬೆಳಗಾವಿ
ಸ್ಥಳೀಯರ ಮನವಿಗೆ ಸ್ಪಂದಿಸಿದ ಅವರು, ಬೆಳಿಗ್ಗೆ ಶಾಲೆಯ ಗೇಟ್ ಮುಂದೆ ಬಿದ್ದಿದ್ದ ಕಸದ ರಾಶಿಯನ್ನು ತೆರವುಗೊಳಿಸಿ, ಅಲ್ಲೇ ತುಳಸಿ ಗಿಡ ನೆಡುವ ಮೂಲಕ ಸ್ವಚ್ಛತೆ ಹಾಗೂ ಸಂಸ್ಕಾರದ ಸಂದೇಶ ನೀಡಿದರು.
ಈ ವೇಳೆ ಮಾತನಾಡಿದ ವಾಣಿ ವಿಲಾಸ್ ಜೋಶಿ, ಮಕ್ಕಳು ಓದುವ ಸ್ಥಳ ಕಸದ ಕೊಠಡಿ ಆಗಬಾರದು. ಇದು ಅವರ ಭವಿಷ್ಯ ರೂಪಿಸುವ ಪವಿತ್ರ ಸ್ಥಳ ಎಂದು ಹೇಳಿದರು. ಕಸದಿಂದ ಮುಚ್ಚಿಹೋಗಿದ್ದ ಶಾಲೆಯ ಪ್ರವೇಶ ದ್ವಾರ ಇದೀಗ ಹಸಿರು ತುಳಸಿಯೊಂದಿಗೆ ಹೊಸ ಸ್ಪರ್ಶ ಪಡೆದಿದೆ. ಸ್ಥಳೀಯರು, ಶಿಕ್ಷಕರು ಹಾಗೂ ಪಾಲಕರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಕೇವಲ ಸ್ವಚ್ಛತಾ ಕಾರ್ಯವಲ್ಲ, ಮಕ್ಕಳ ಬದುಕಿನ ಗೌರವ ಎಂದು ಅಭಿಪ್ರಾಯಪಟ್ಟರು. ಟಿಳಕವಾಡಿಯಲ್ಲಿ ನಡೆದ ಈ ಘಟನೆ ಬೆಳಗಾವಿಗೆ ಸ್ವಚ್ಛ ನಗರ – ಸುರಕ್ಷಿತ ಮಕ್ಕಳು ಎಂಬ ದೊಡ್ಡ ಸಂದೇಶ ನೀಡಿದಂತಿದೆ.