ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಸಾಗುವಳಿಗೆ ಸಂಬಂಧಿಸಿದ ಜಿಪಿಎಸ್ ಸರ್ವೆಯ ನಕಾಶೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಜಿಲ್ಲಾದ್ಯಂತ ಅರಣ್ಯವಾಸಿಯ ಸುಮಾರು ೫೦೦೦೦ಕ್ಕೂ ಮಿಕ್ಕಿ ಜಿಪಿಎಸ್ ದಾಖಲೆಗಳು ಅತಂತ್ರವಾಗಲಿದೆ ಎಂಬ ಆತಂಕದ ಅಂಶ ಬೆಳಕಿಗೆ ಬಂದಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ಸೋಮವಾರ ನಗರದ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಅರಣ್ಯ ಇಲಾಖೆಯವರು ಕಾನೂನು ಮಾನ್ಯತೆ ಇಲ್ಲದ ಸಾವಿರಾರು ಜಿಪಿಎಸ್ ನಕಾಶೆಯನ್ನು ಪ್ರದರ್ಶಿಸಿ ಮಾತನಾಡಿದರು.ಅರಣ್ಯ ಹಕ್ಕು ಕಾಯಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ, ಸುತ್ತೋಲೆ ಮತ್ತು ಕಾನೂನಿನ ಮಾನದಂಡದ ಹೊರತಾಗಿ ಜಿಪಿಎಸ್ ನಕಾಶೆ ತಯಾರಿಸಿ ಅರಣ್ಯವಾಸಿಯ ಪ್ರಕರಣದ ಕಡತದಲ್ಲಿ ಸೇರಿಸಲಾಗಿದೆ. ವಲಯ ಅರಣ್ಯ ಅಧಿಕಾರಿ, ಕಂದಾಯ ಅಧಿಕಾರಿ, ಅರಣ್ಯ ಹಕ್ಕು ಸಮಿತಿ ದೃಢೀಕರಣವಿಲ್ಲದ ಜಿಪಿಎಸ್ ನಕಾಶೆಗೆ ಕಾನೂನು ಮಾನ್ಯತೆ ಇರುವುದಿಲ್ಲ ಎಂದರು.ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಪ್ರಮುಖರಾದ ರಮೇಶ ಮರಾಠಿ, ಗಂಗೂಬಾಯಿ ರಜಪೂತ್, ನಾಗರಾಜ ದೇವಸ್ಥಲ್, ರಾಘವೇಂದ್ರ ಶೆಟ್ಟಿ, ನವೀನ್ ಜೈನ್, ಶಿವು ಮರಾಠಿ, ಗಣಪ ಗೌಡ, ಯಶೋದ, ಕಲ್ಪನಾ ಪಾವಸ್ಕರ, ಅಬ್ದುಲ್ ರಪೀಕ್ ಗಫಾರ್ ಮುಂತಾದವರು ಉಪಸ್ಥಿತರಿದ್ದರು.ಬೆಳಗಾವಿ ಅಧಿವೇಶನ: ವಿವೇಕ ಹೆಬ್ಬಾರ ಸಭೆ
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್. ಪಾಟೀಲ ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕ್ಷೇತ್ರದ ಉಸ್ತುವಾರಿ ರಾಬರ್ಟ್, ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಭಟ್, ಬನವಾಸಿ ಬ್ಲಾಕ್ ಕಾಂಗ್ರೆಸ್‌ನ ಸಿ.ಎಫ್. ನಾಯ್ಕ, ಜಿಲ್ಲಾ ಕಾಂಗ್ರೆಸ್ ಎಸ್.ಸಿ., ಎಸ್.ಟಿ. ಅಧ್ಯಕ್ಷ ಬಸವರಾಜ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.