ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಭೋದನಾ ಆಸ್ಪತ್ರೆ ಹಾಗೂ ಸಿಮ್ಸ್ ನರ್ಸಿಂಗ್ ಕಾಲೇಜು ವತಿಯಿಂದ ೨೦೨೦-೨೧ ನೇ ಸಾಲಿನ ಬಿಎಸ್ಸಿ ನರ್ಸಿಂಗ್ ವಿಧ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪ್ರಧಾನ ಮತ್ತು ವಚನ ಸ್ವಿಕಾರ ಕಾರ್ಯಕ್ರಮವು ಸಿಮ್ಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಭೋದನಾ ಆಸ್ಪತ್ರೆ ಹಾಗೂ ಸಿಮ್ಸ್ ನರ್ಸಿಂಗ್ ಕಾಲೇಜು ವತಿಯಿಂದ ೨೦೨೦-೨೧ ನೇ ಸಾಲಿನ ಬಿಎಸ್ಸಿ ನರ್ಸಿಂಗ್ ವಿಧ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪ್ರಧಾನ ಮತ್ತು ವಚನ ಸ್ವಿಕಾರ ಕಾರ್ಯಕ್ರಮವು ಸಿಮ್ಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಅತಿಥಿಗಳಾಗಿ ಹಾಸನದ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ ಪ್ರಾಶುಪಾಲರಾದ ಸಿ.ಟಿ.ರತ್ನಮ್ಮ ಭಾಗವಹಿಸಿ ಮಾತನಾಡಿ, ನರ್ಸಿಂಗ್ ಪದವಿ ಮುಗಿಸಿ ಮುಂದಿನ ಹಂತಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಸುಗಮವಾಗಲೆಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಭೋಧನಾ ಆಸ್ಪತ್ರೆಯ ಡೀನ್ ಹಾಗೂ ನಿರ್ದೇಶಕ ಡಾ. ಎಚ್. ಜಿ. ಮಂಜುನಾಥ್, ವಿದ್ಯಾರ್ಥಿ ಜೀವನವನ್ನು ಪೂರ್ಣಗೊಳಿಸಿದ ನಿಮಗೆ ಇನ್ನು ಮುಂದೆ ವೃತ್ತಿ ಜೀವನವು ಆರಂಭವಾಗಲಿದೆ. ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡಿ ಒಳ್ಳೆಯ ಹೆಸರು ಪಡೆಯಿರಿ ಎಂದು ಶುಭ ಕೋರಿದರು.
ಗಡಿಭಾಗದ ಚಾಮರಾಜನಗರ ಜಿಲ್ಲೆಯ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ೬೭ ವಿದ್ಯಾರ್ಥಿಗಳು ಪದವಿಧರರಾಗಿ ಹೊರಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಡೀನ್ ಡಾ. ಹೆಚ್. ಜಿ. ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.
ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಭೋಧನಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಕೆ.ಆರ್. ಮಹೇಶ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ್ ವಿ.ಪಾಟೀಲ್, ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಎನ್.ನಮ್ರತಾ, ಶುಶ್ರೂಷ ಅಧೀಕ್ಷಕಿ ಗೀತಾ ಕಾರ್ಯಕ್ರಮಯಲ್ಲಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.