ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ. ನ.6ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗಿದೆ.
ಮೊಳಕಾಲ್ಮುರು ತಾಲೂಕಿನ ಜಹಗೀರ್ ಬುಡ್ಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಹಟ್ಟಿ ಹೊಸಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಜಾತಿ), ತುಮಕೂರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕೋಬನಹಳ್ಳಿ-1 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಕೊಂಡ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಕೊಂಡ್ಲಹಳ್ಳಿ-5 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ ಮಹಿಳೆ), ಚಳ್ಳಕೆರೆ ತಾಲೂಕಿನ ಅಬ್ಬೇನಹಳ್ಳಿ ಗ್ರಾಪಂ ಅಬ್ಬೇನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ ಮಹಿಳೆ), ಚೌಳಕೆರೆ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ)ಕ್ಕೆ ಚುನಾವಣೆ ನಡೆಯಲಿದೆ.
ಘಟಪರ್ತಿ ಗ್ರಾಪಂ ವ್ಯಾಪ್ತಿಯ ಅಜ್ಜನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ-ಮಹಿಳೆ), ನೇರಲಗುಂಟೆ ಗ್ರಾಪಂ ವ್ಯಾಪ್ತಿಯ ಕಾತ್ರಿಕೇನಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ), ಮೈಲನಹಳ್ಳಿ ಗ್ರಾಪಂ ವ್ಯಾಪ್ತಿಯ ಬೂದಿಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ), ದೊಡ್ಡಚೆಲ್ಲೂರು ಗ್ರಾಪಂ ವ್ಯಾಪ್ತಿಯ ಚಿಕ್ಕಚೆಲ್ಲೂರು-1 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಕಾಲುವೇಹಳ್ಳಿ ಗ್ರಾಪಂ ವ್ಯಾಪ್ತಿಯ ಯಾದಗಲಗಟ್ಟೆ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ)ಕ್ಕೆ ಚುನಾವಣೆ ನಡೆಸಲಾಗುವುದು.ಕ್ಯಾತಗೊಂಡನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ-ಮಹಿಳೆ), ಚಿತ್ರದುರ್ಗ ತಾಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಭರಮಸಾಗರ ಗ್ರಾಪಂ ವ್ಯಾಪ್ತಿಯ ಭರಮಸಾಗರ-4 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಹಿರೇಗುಂಟನೂರು ಗ್ರಾಪಂ ವ್ಯಾಪ್ತಿಯ ಗೊಲ್ಲರಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ) ಚುನಾವಣೆ ನಡೆಯಲಿದೆ.
ಜಂಪಣ್ಣ ನಾಯಕನಕೋಟೆ ಗ್ರಾಪಂ ವ್ಯಾಪ್ತಿಯ ಜಂಪಣ್ಣ ನಾಯಕನ ಕೋಟೆ-1 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಹಿರಿಯೂರು ತಾಲೂಕಿನ ಮದಕರಿನಾಯಕನ ಕೋಟೆ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಧರ್ಮಪುರ ಗ್ರಾಪಂ ವ್ಯಾಪ್ತಿಯ ಕೃಷ್ಣಾಪುರ ಕ್ಷೇತ್ರದ 1 ಸದಸ್ಯ ಸ್ಥಾನ (ಹಿಂದುಳಿದ ವರ್ಗ “ಬ”), ಮೇಟಿಕುರ್ಕೆ ಗ್ರಾಪಂ ವ್ಯಾಪ್ತಿಯ ಹಿರೆಹಳ್ಳದ ವಡ್ಡರಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಹೊಸಯಳನಾಡು ಗ್ರಾಪಂ ವ್ಯಾಪ್ತಿಯ ಕಸವನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಜಾತಿ), ಯಲ್ಲದಕೆರೆ ಗ್ರಾಪಂ ವ್ಯಾಪ್ತಿಯ ಹಂದಿಗನಡು ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಜಾತಿ)ಕ್ಕೆ ಚುನಾವಣೆ ನಿಗದಿಯಾಗಿದೆ.ಬ್ಯಾಡರಹಳ್ಳಿ-2 ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ-ಮಹಿಳೆ), ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಪಂ ವ್ಯಾಪ್ತಿಯ ಯಲ್ಲಾಭೋವಿಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಬೆಲಗೂರು ಗ್ರಾಪಂ ವ್ಯಾಪ್ತಿಯ ಹರಿಯನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಶ್ರೀರಾಂಪುರ ಗ್ರಾಪಂ ವ್ಯಾಪ್ತಿಯ ಶ್ರೀರಾಂಪುರ-2 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಹೆಗ್ಗೆರೆ ಗ್ರಾಪಂ ವ್ಯಾಪ್ತಿಯ ಓಬಳಾಪುರ ಕ್ಷೇತ್ರದ 1 ಸದಸ್ಯ ಸ್ಥಾನ (ಹಿಂದುಳಿದ ವರ್ಗ “ಅ”), ಹೊಳಲ್ಕೆರೆ ತಾಲೂಕಿನ ತೇಕಲವಟ್ಟಿ ಗೊಲ್ಲರಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಹಿಂದುಳಿದ ವರ್ಗ ಅ-ಮಹಿಳೆ) ಹಾಗೂ 1 ಸದಸ್ಯ ಸ್ಥಾನ (ಸಾಮಾನ್ಯ) ವರ್ಗಕ್ಕೆ ಮೀಸಲಾಗಿದೆ.
ಉಪ್ಪರಿಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆರೆಯಾಗಳಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ-ಮಹಿಳೆ)ಕ್ಕೆ ಉಪ ಚುನಾವಣೆ ನಿಗದಿಪಡಿಸಲಾಗಿದೆ. ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.