ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ಳಿಖಂಡಿ ಗ್ರಾಮದಲ್ಲಿ ವಿವಾದಿತ ಜಾಗೆಯ ಸಮಸ್ಯೆ ಬಗೆಹರಿಸಲು ರಾಜಿ ಸಂಧಾನಕ್ಕಾಗಿ ಭೀಮಪ್ಪ ತಿಪ್ಪಣ್ಣ ಮೇಟಿ ಅವರನ್ನು ಪೊಲೀಸರು ಠಾಣೆಗೆ ಕರೆಸಿಕೊಂಡಿದ್ದರು. ಈ ವೇಳೆ ಅನಗತ್ಯವಾಗಿ ಮೇಟಿ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು, ಈ ಕುರಿತು ಕೂಡಲೇ ದೂರು ದಾಖಲಿಸಬೇಕು ಎಂದವರು ಆಗ್ರಹಿಸಿದರು.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿವರಣೆ ನೀಡಲಾಗಿದ್ದು, ಇದುವರೆಗೂ ದೂರು ದಾಖಲಾಗಿಲ್ಲ. ಕೂಡಲೇ ದೂರು ದಾಖಲಿಸಿಕೊಂಡು ನ್ಯಾಯ ಒದಗಿಸಬೇಕು ಎಂದವರು ಒತ್ತಾಯಿಸಿದರು.ಪೊಲೀಸ್ ಇಲಾಖೆ ಘಟನೆಗೆ ಸಂಬಂಧಿಸಿದಿಂತೆ ಯಾವುದೇ ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದರು. ಈ ವೇಳೆ ಹಲ್ಲೆಗೊಳಗಾದ ಭೀಮಪ್ಪ ಮೇಟಿ ಕೂಡ ಘಟನೆ ಕುರಿತು ವಿವರಿಸಿ ಕ್ರಮಕ್ಕೆ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಅಶೋಕ ರಾಜಾಪೂರ, ಗುರುಶಾಂತಪ್ಪ ಮದಿನಕರ, ದುಸಂಗಪ್ಪ ಮುರನಾಳ, ಶಂಕರ ಚಂದಾವರಿ ಮತ್ತಿತರರು ಇದ್ದರು.