ಬೇಡಿಕೆ ತಕ್ಕಂತೆ ಖಾತ್ರಿ ಕೆಲಸ ನೀಡಲು ಗ್ರಾಪಂ ಸಿದ್ಧ: ಕಲ್ಲಪ್ಪ

KannadaprabhaNewsNetwork |  
Published : Sep 14, 2024, 01:52 AM IST
ರೋಜಗಾರ ದಿನ ಆಚರಿಸಲಾಯಿತು  | Kannada Prabha

ಸಾರಾಂಶ

ನರೇಗಾ ಯೋಜನೆಯಡಿ ಮಣ್ಣಿನ ಸವಕಳಿ ತಡೆ, ಜಾನುವಾರು ಹಾಗೂ ಕಾಡುಪ್ರಾಣಿಗಳ ಹಾವಳಿ ತಡೆಯಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯ ಪ್ರದೇಶಗಳಲ್ಲಿ ಜಾನುವಾರು ಕಂದಕ ಕಾಮಗಾರಿ ಕೈಗೊಳ್ಳಲಾಗಿದೆ.

ಕಾರವಾರ: ಉದ್ಯೋಗ ಖಾತರಿ ಯೋಜನೆಯಡಿ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡಲು ಗ್ರಾಪಂ ಸದಾಕಾಲ ಸಿದ್ಧವಾಗಿರುತ್ತದೆ. ವೈಯಕ್ತಿಕ ಹಾಗೂ ಸಾಮುದಾಯಿಕ ಕಾಮಗಾರಿಗಳಲ್ಲಿ ಪಾಲ್ಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳೋಣ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಲ್ಲಪ್ಪ ಎಂ. ಮಳಗ್ಯಾನವರ ತಿಳಿಸಿದರು.

ಗುರುವಾರ ಶಿರಸಿ ತಾಲೂಕಿನ ಹುಣಸೆಕೊಪ್ಪ ಗ್ರಾಪಂನ ಹುಣಸೆಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಜಾನುವಾರು ಕಂದಕ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡ ರೋಜಗಾರ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೂಲಿಕಾರರು ಕಾಮಗಾರಿಯನ್ನು ಯಾಕೆ ಮಾಡಬೇಕು ಎಂಬ ಕುರಿತು ವಿವರಿಸಿ, ಕಾಮಗಾರಿಯನ್ನು ಕೈಗೊಳ್ಳುವಾಗ ಗಮನಿಸಬೇಕಾದ ಅಂಶಗಳ ಕುರಿತು ಮಾಹಿತಿ ನೀಡಿದರು.ನರೇಗಾ ಯೋಜನೆಯಡಿ ಮಣ್ಣಿನ ಸವಕಳಿ ತಡೆ, ಜಾನುವಾರು ಹಾಗೂ ಕಾಡುಪ್ರಾಣಿಗಳ ಹಾವಳಿ ತಡೆಯಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯ ಪ್ರದೇಶಗಳಲ್ಲಿ ಜಾನುವಾರು ಕಂದಕ ಕಾಮಗಾರಿ ಕೈಗೊಳ್ಳಲಾಗಿದೆ. ಅಂದಾಜು ₹1 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಆರಂಭಿಸಲಾಗಿದ್ದು, ಈವರೆಗೆ 35 ಮಾನವ ದಿನಗಳ ಸೃಜನೆಯೊಂದಿಗೆ ₹11,060 ಕೂಲಿ ನೀಡಲಾಗಿದೆ.ನರೇಗಾ ಯೋಜನೆಯಡಿ ಎನ್ಎಂಎಂಎಸ್ ಆ್ಯಪ್ ಬಳಕೆಯ ಉದ್ದೇಶ, ಫೋಟೋಗಳನ್ನು ಹೇಗೆ ಮಾಡಬೇಕು. ಫೋಟೋ ಸಮೇತ ಹಾಜರಾತಿ ನೀಡದಿದ್ದರೆ ಕೂಲಿಕಾರರು ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ಹಾಗೂ ಕೂಲಿಕಾರರಿಗೆ ನೀಡಲಾಗುವ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಾಪಂ ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ವಿವರಿಸಿದರು.

ಗ್ರಾಪಂ ಸದಸ್ಯೆ ರಜನಿ ಹೆಗಡೆ, ಬಿಎಫ್‌ಟಿ ಪ್ರಸನ್ನ ಹೆಗಡೆ ಮತ್ತಿತರರು ಇದ್ದರು.ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ: ವಿ.ಎಸ್. ಪಾಟೀಲ್

ಮುಂಡಗೋಡ: ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಆರೋಗ್ಯವಂತ ಬದುಕನ್ನು ತಮ್ಮದಾಗಿಸಿಕೊಳ್ಳಬಹುದಲ್ಲದೇ ಭವಿಷ್ಯ ಉಜ್ವಲವಾಗುತ್ತದೆ. ಜತೆಗೆ ರಾಷ್ಟ್ರ ಮತ್ತು ನಾಡಿಗೂ ಗೌರವ ಬರುತ್ತದೆ ಎಂದು ವಿ.ಎಸ್. ಪಾಟೀಲ್ ತಿಳಿಸಿದರು.ಶುಕ್ರವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ೧೭ ವರ್ಷದ ಒಳಗಿನ ಪ್ರೌಢಶಾಲೆಗಳ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಉತ್ತಮವಾಗಿ ಆಟವನ್ನು ಆಡಿ ಶಾಲೆಯ ವಲಯದ ತಾಲೂಕಿನ ಜಿಲ್ಲೆಯ ರಾಜ್ಯದ ಹೆಸರನ್ನು ತನ್ನಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ, ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷ ಎಸ್.ಡಿ. ಮುಡೆಣ್ಣವರ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ ಅಂಬಿಗೇರ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿನಾಯಕ್ ಶೇಟ್, ಹನುಮಂತ ತಳವಾರ, ವಿಜಯ್ ಕುಮಾರ್ ಶೆಟ್ಟಿ, ಮೌಲಾನ ಆಜಾದ್ ಶಾಲೆಯ ಮುಖ್ಯಾಧ್ಯಾಪಕ ಸಂತೋಷ ಮಡಿವಾಳ, ಶಾಸಕರ ಮಾದರಿ ಶಾಲೆ ಮುಖ್ಯಾಧ್ಯಾಪಕ ವಿನೋದ ನಾಯಕ, ಜ್ಞಾನದೇವ ಗುಡಿಯಾಳ, ಉಲ್ಲಾಸ್ ಕಾಟನ್ಕರ್, ರಾಜೇಂದ್ರ ಗಾಣಿಗ ಮುಂತಾದವರು ಉಪಸ್ಥಿತರಿದ್ದರು. ಸಂತೋಷ ಮಡಿವಾಳ ಸ್ವಾಗತಿಸಿದರು. ಸಹನಾ ಸಂಗಡಿಗರು ಪ್ರಾರ್ಥಿಸಿದರು. ನಾಗೇಂದ್ರ ನಿರೂಪಿಸಿದರು. ದುರ್ಗಪ್ಪ ಬಂಡಿ ವಂದಿಸಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ