ಕನ್ನಡಪ್ರಭ ವಾರ್ತೆ ಪಾಂಡವಪುರ
ಜಾತ್ರೆಯಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯ ರಾಸುಗಳು ಭಾಗವಹಿಸಿದ್ದವು. ಈ ಪೈಕಿ ಹೋರಿ, ಕಡಸು, ಎತ್ತುಗಳು ಸೇರಿದಂತೆ ಎಲ್ಲಾ ವಿಭಾಗಗಳಿಂದ ೩೨೧ ರಾಸುಗಳ ಮಾಲೀಕರು ಬಹುಮಾನಕ್ಕಾಗಿ ಹೆಸರು ನೋಂದಾಯಿಸಿದ್ದರು. ಆಯ್ಕೆಯಾದ ರಾಸುಗಳ ಪೈಕಿ ಎತ್ತುಗಳ ವಿಭಾಗಕ್ಕೆ ೩ ಗ್ರಾಂ ಚಿನ್ನದ ನಾಣ್ಯ, ಬೀಜದ ಹೋರಿಗಳ ವಿಭಾಗಕ್ಕೆ ೧.೫ ಗ್ರಾಂ ಚಿನ್ನ ಹಾಗೂ ಕಡಸುಗಳ ವಿಭಾಗಕ್ಕೆ ೨ ಗ್ರಾಂ ಚಿನ್ನದ ನಾಣ್ಯವನ್ನು ಬಹುಮಾನವಾಗಿ ವಿತರಿಸಲಾಯಿತು. ಒಟ್ಟಾರೆ ೭೨ ರಾಸುಗಳ ಮಾಲೀಕರಿಗೆ ೧೬೮.೫ಗ್ರಾಂ ಚಿನ್ನವನ್ನು ಬಹುಮಾನವಾಗಿ ನೀಡಲಾಯಿತು.
ಕಳೆದ ಒಂಬತ್ತು ದಿನಗಳಿಂದ ನಡೆದ ಭಾರೀ ದನಗಳ ಜಾತ್ರಾ ಮಹೋತ್ಸವ ಉತ್ತಮ ರಾಸುಗಳ ಮಾಲೀಕರಿಗೆ ಚಿನ್ನದ ಬಹುಮಾನ ವಿತರಣೆ ಹಾಗೂ ಶ್ರೀ ಮಾದೇಶ್ವರ ಮತ್ತು ಶ್ರೀ ಸಿದ್ಧೇಶ್ವರ ತೆಪ್ಪೋತ್ಸವದೊಂದಿಗೆ ಸಂಪನ್ನಗೊಂಡಿತು.ಬಹುಮಾನ ವಿಜೇತ ರಾಸುಗಳ ಮಾಲೀಕರ ವಿವರ:
ಹಾಲು ಹಲ್ಲಿನ ಬೀಜದ ಹೋರಿಗಳು : ಸೋಮೇಗೌಡ, ಕುರುಬಹಳ್ಳಿ ಕೆ.ಆರ್.ಪೇಟೆ. ಹೋರಿ ಸಣ್ಣಮಾದೇಗೌಡ, ಮರಿಗೌಡನಕೊಪ್ಪಲು ಪಿರಿಯಾಪಟ್ಟಣ. ಮಾದವಯ್ಯ, ಅಕ್ಕಿಮರಿಪಾಳ್ಯ ಕುಣಿಗಲ್.
ನಾಲ್ಕು ಹಲ್ಲಿನ ಬೀಜದ ಹೋರಿಗಳು : ಕೃಷ್ಣ, ಮಾರಗೌಡನಹಳ್ಳಿ, ತಿ.ನರಸೀಪುರ. ರಾಜೇಶ, ಹೊಸಮಾವಿನಕೆರೆ, ಕೆ.ಆರ್.ಪೇಟೆ. ಭಾಸ್ಕರ, ಕೆಸ್ತೂರುಕೊಪ್ಪಲು, ಕೆ.ಆರ್.ನಗರ.
ಬಾಯಿಗೂಡಿದ ಬೀಜದ ಹೋರಿಗಳು: ಪ್ರಕಾಶ್, ಮಾವಿನಕೆರೆ, ಕೆ.ಆರ್.ಪೇಟೆ. ಸೋಮೇಗೌಡ, ಕುರುಬಹಳ್ಳಿ, ಕೆ.ಆರ್.ಪೇಟೆ. ಗುಂಡ, ಅಬ್ಬೂರು, ಚನ್ನಪಟ್ಟಣ.
ಹಾಲುಹಲ್ಲಿನ ಜೋಡಿ ಕಡಸುಗಳು: ನಾಗರಾಜು, ಬಿ.ಸೀಹಳ್ಳಿ, ತಿ.ನರಸೀಪುರ. ನಿತಿನ್, ಕೋಡಿಯಾಲ, ಸಾಲಿಗ್ರಾಮ. ಹೊನ್ನೇಗೌಡ, ಹನುಮನಾಳು, ತಿ.ನರಸೀಪುರ. ಮಿಲ್ಲಿನ ಜವರೇಗೌಡ, ಬಣ್ಣೇನಹಳ್ಳಿ, ಕೆ.ಆರ್.ಪೇಟೆ. ಮಂಜು, ಡಿಂಕಾಶೆಟ್ಟಹಳ್ಳಿ, ಪಾಂಡವಪುರ.
ನಾಲ್ಕು ಹಲ್ಲಿನ ಜೋಡಿ ಕಡಸುಗಳು: ಚಂದನ್, ಬುಳ್ಳಿ ಕೆಂಪನದೊಡ್ಡಿ, ಮಳವಳ್ಳಿ. ರವಿಕುಮಾರ್, ಹಳೆ ಬೂದನೂರು, ಮಂಡ್ಯ. ಎ.ಬಿ.ಅರುಣ್‌ಕುಮಾರ್, ಡಿ.ಆಲನಹಳ್ಳಿ, ಮಳವಳ್ಳಿ. ಮಲ್ಲೇಗೌಡ, ಚಾಮಲಾಪುರ, ತಿ.ನರಸೀಪುರ. ರಾಜು, ಹೊಸಕೊಪ್ಪಲು, ತಿ.ನರಸೀಪುರ.
ಬಾಯಿಗೂಡಿದ ಜೋಡಿ ಕಡಸುಗಳು: ವೆಂಕಟಸ್ವಾಮಪ್ಪ, ಹೊಸಕೋಟೆ, ಬೆಂಗಳೂರು. ಮಧು, ಅರಕೆರೆ, ಶ್ರೀರಂಗಪಟ್ಟಣ. ಅಭಿಲಾಷ್, ಮುರುಕನಹಳ್ಳಿ, ಕೆ.ಆರ್.ಪೇಟೆ. ಪ್ರೀತು, ಕಿರಗಂದೂರು, ಮಂಡ್ಯ. ರವಿದಾಸೇಗೌಡ, ಸಜ್ಜೆಹುಂಡಿ, ಮೈಸೂರು.
ಜೋಡಿ ಎತ್ತುಗಳ ವಿಭಾಗಹಾಲು ಹಲ್ಲಿನ ಜೋಡಿ ಕರುಗಳು: ಎಸ್.ಆರ್.ದೇವರಾಜು, ಸುಂಕಾತೊಣ್ಣೂರು, ಪಾಂಡವಪುರ. ವೀರೇಗೌಡ, ಕೋಣನಹಳ್ಳಿ, ಮಂಡ್ಯ. ಹೋರಿ ಮಾದಪ್ಪ, ಚಿಕ್ಕೆಗೌಡನಕೊಪ್ಪಲು ಮೈಸೂರು. ಸ್ವಾಮಿಗೌಡ, ಬೋಗಾದಿ, ಮೈಸೂರು. ಪುನೀತ್, ಗಂಜಾಂ, ಶ್ರೀರಂಗಪಟ್ಟಣ. ಶಿವಲಿಂಗಪ್ಪ, ಚಾಗಶೆಟ್ಟಹಳ್ಳಿ, ಪಾಂಡವಪುರ. ನಾಗೇಶ್, ಮತ್ತಿಘಟ್ಟ, ಚನ್ನರಾಯಪಟ್ಟಣ.
ಎರಡು ಹಲ್ಲಿನ ಜೋಡಿ ಎತ್ತುಗಳು: ನಿಶಾಂತ್, ಗಂಜಾಂ, ಶ್ರೀರಂಗಪಟ್ಟಣ. ರಮೇಶ, ಮಳವಳ್ಳಿ. ಶ್ರೀಧರ್, ಬಿ.ಸೀಹಳ್ಳಿ, ತಿ.ನರಸೀಪುರ. ಭೈರೇಗೌಡ, ಮಾಯಪ್ಪನಹಳ್ಳಿ, ಮಂಡ್ಯ. ವಿನೋದ, ಡಾಮಡಹಳ್ಳಿ, ಪಾಂಡವಪುರ.ನಾಲ್ಕು ಹಲ್ಲಿನ ಜೋಡಿ ಎತ್ತುಗಳು: ಚಾಮೇಗೌಡ, ಶಾಂತಿಕೊಪ್ಪಲು, ಶ್ರೀರಂಗಪಟ್ಟಣ. ಎಂ.ಎಸ್.ಕಿರಣ್, ಗಾಂಧಿನಗರ, ಮಂಡ್ಯ. ದೀಪು, ಕೆ.ಜಿ.ಕೊಪ್ಪಲು, ಮೈಸೂರು. ವಿಕ್ರಾಂತ್ ಸುರೇಶ್, ನಗುವನಹಳ್ಳಿ, ಶ್ರೀರಂಗಪಟ್ಟಣ. ಕೃಷ್ಣಪ್ಪ, ಚನ್ನಪಟ್ಟಣ.
ಆರು ಹಲ್ಲಿನ ಜೋಡಿ ಎತ್ತುಗಳು: ಮದನ್, ಕಾಚಮಾರನಹಳ್ಳಿ, ಬೆಂಗಳೂರು. ಸಿದ್ದಾಂತ್, ಕೋಡಿಪುರ, ಮಳವಳ್ಳಿ. ರೇವಂತ್‌ಗೌಡ, ಕೆನ್ನಾಳು, ಪಾಂಡವಪುರ. ದೇವರಾಜು, ಎಂ.ಶೆಟ್ಟಹಳ್ಳಿ, ಪಾಂಡವಪುರ. ಚಂದ್ರೇಗೌಡ, ಸುಳ್ಳೇರಿ, ಚನ್ನಪಟ್ಪಣ.ಬಾಯಿಗೂಡಿದ ಜೋಡಿ ಎತ್ತುಗಳು: ರಾಜಶೇಖರ್, ಇಡಗೂರು, ಗುಬ್ಬಿ. ಸಂದೀಪ್, ತಿಂಡ್ಲು, ಆನೇಕಲ್. ಶಶಿಶಿವು, ಕೆಂಪಯ್ಯನಹುಂಡಿ, ತಿ.ನರಸೀಪುರ. ಡಿ.ಎನ್.ಕುಮಾರ, ದೊಡ್ಡಗಾಡಿಗನಹಳ್ಳಿ, ಕೆ.ಆರ್.ಪೇಟೆ. ವಿನೋದ, ಡಾಮಡಹಳ್ಳಿ, ಪಾಂಡವಪುರ. ಕೆ.ಕೆ.ರಾಜೇಶ್, ನಾರ್ಥ್ ಬ್ಯಾಂಕ್, ಪಾಂಡವಪುರ. ಕುಮಾರ್, ಇಟ್ಟಿಗೆಗೂಡು, ಮೈಸೂರು. ವಿ.ಎಂ.ಡಿ.ಮಂಜುನಾಥ್, ಕೆ.ದೊಮ್ಮಸಂದ್ರ, ಬೆಂಗಳೂರು. ಕೃಷ್ಣೇಗೌಡ, ತಿಮ್ಮನಕೊಪ್ಪಲು, ಪಾಂಡವಪುರ. ಡಾ.ರಾಹುಲ್‌ಗೌಡ, ಬನ್ನೂರು, ತಿ.ನರಸೀಪುರ.