ಕೊಳ್ಳೇಗಾಲದಲ್ಲಿ ಅದ್ಧೂರಿ ಬಸವ ಜಯಂತಿ

KannadaprabhaNewsNetwork |  
Published : Jun 01, 2024, 12:45 AM IST
31ಕೆಜಿಎಲ್50 ಕೊಳ್ಳೇಗಾಲದಲ್ಲಿ ನಡೆದ ಬಸವ ಜಯಂತಿ ವೇಳೆ ಯುವ ನಾಯಕ ನಿಶಾಂತ್ ಶಿವಮೂತಿ೯ ಪಾಲ್ಗೊಂಡರು. ಈ ವೇಳೆ ಶಾಂತಮಲ್ಲಿಕಾಜು೯ನಸ್ವಾಮಿ, ಮಲ್ಲಿಕಾಜು೯ನಸ್ವಾಮಿಜಿ, ಲೋಕೇಶ್ ಇದ್ದರು. | Kannada Prabha

ಸಾರಾಂಶ

ಪಟ್ಟಣದಲ್ಲಿ ವೀರಶೈವ ಮಹಾಸಭೆ, ವೀರಶೈವ ಲಿಂಗಾಯಿತ ಒಕ್ಕೂಟ ಮತ್ತು ಬಸವ ಜಯಂತಿ ಸಮಿತಿ ವತಿಯಿಂದ ಅದ್ಧೂರಿಯಾಗಿ ಶುಕ್ರವಾರ ಬಸವ ಜಯಂತಿ ಮಹೋತ್ಸವ ಜರುಗಿತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದಲ್ಲಿ ವೀರಶೈವ ಮಹಾಸಭೆ, ವೀರಶೈವ ಲಿಂಗಾಯಿತ ಒಕ್ಕೂಟ ಮತ್ತು ಬಸವ ಜಯಂತಿ ಸಮಿತಿ ವತಿಯಿಂದ ಅದ್ಧೂರಿಯಾಗಿ ಶುಕ್ರವಾರ ಬಸವ ಜಯಂತಿ ಮಹೋತ್ಸವ ಜರುಗಿತು. ತೆರೆದ ವಾಹನದಲ್ಲಿ ಬಸವೇಶ್ವರ ಭಾವಚಿತ್ರವನ್ನಿಟ್ಟು ಅಲಂಕೃತಗೊಳಿಸಿ ಪೂಜೆ ಸಲ್ಲಿಸಿದ ಬಳಿಕ ಗಣ್ಯರ ಸಮ್ಮುಖದಲ್ಲಿ ಮೆರವಣಿಗೆಗೆ ಚಾಲನೆ ದೊರೆಯಿತು. ಸಾಲೂರು ಮಠಾಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಗುಂಡೇಗಾಲ ಮಠಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮೀಜಿ, ಆಲಹಳ್ಳಿ ಮಠಾಧ್ಯಕ್ಷ ಶಿವಕುಮಾರ ಸ್ವಾಮೀಜಿ, ದೊಡ್ಡಿಂದುವಾಡಿ ಮಠದ ಬಾಲಡಕ್ಷರಿ ಸ್ವಾಮೀಜಿ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಮೆರವಣಿಗೆಗೆ ಚಾಲನೆ ದೊರೆಯಿತು. ಮೆರವಣಿಗೆಗೂ ಮುನ್ನ ಮಾಜಿ ಸಚಿವ ಎನ್ ಮಹೇಶ್, ಹನೂರು ಶಾಸಕ ಮಂಜುನಾಥ್, ಡಾ.ದತ್ತೇಶ್ ಕುಮಾರ್, ಮಾಜಿ ಶಾಸಕರಾದ ಎಸ್. ಬಾಲರಾಜು, ಆರ್ ನರೇಂದ್ರ, ಪರಿಮಳ ನಾಗಪ್ಪ, ಹನೂರಿನ ಯುವ ಮುಖಂಡ ನಿಶಾಂತ್ ಶಿವಮೂರ್ತಿ, ಡಾ.ಪ್ರೀತನ್ ನಾಗಪ್ಪ, ಶಶಿಬಿಂಬ, ತಿಮ್ಮರಾಜಿಪುರ ಪುಟ್ಟಣ್ಣ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಮೆರವಣಿಗೆಗೆ ಅದ್ಧೂರಿ ಚಾಲನೆ ದೊರೆಯಿತು. ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಮಂಗಳವಾದ್ಯ ಸಮೇತ ಮಹಿಳಾ ತಂಡದ ವೀರಗಾಸೆ ಸೇರಿದಂತೆ ಅನೇಕ ಕಲಾತಂಡಗಳು ಹಾಗೂ ಯುವಕ ಮುಖಂಡರ ಕುಣಿತ ಗಮನ ಸೆಳೆಯಿತು. ಗೊಂಬೆ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಕೋಲಾಟ, ದೊಣ್ಣೆ ವರಸೆ ಇನ್ನಿತರ ತಂಡಗಳ ಪ್ರದರ್ಶನಗಳು ಮೆಚ್ಚುಗೆಗೆ ಭಾಜನವಾಯಿತು. ಎಂಜಿಎಸ್ವಿ ಜೂನಿಯರ್ ಕಾಲೇಜಿನಿಂದ ಹೊರಟ ಮೆರವಣಿಗೆ ರಾಜ್‌ಕುಮಾರ್ ರಸ್ತೆ, ಡಾ. ಬಿ ಆರ್ ಅಂಬೇಡ್ಕರ್ ರಸ್ತೆ , ನಾಗಪ್ಪ ವೃತ್ತದ ಮೂಲಕ ಸಾಗಿ ಜೆಎಸ್ಎಸ್ ಕಾಲೇಜು ತಲುಪಿತು. ಜೆಎಸ್ಎಸ್ ಕಾಲೇಜು ತಲುಪಿದ ಬಳಿಕ ವೀರಶೈವ ಸಂಘಟನೆಗಳ ವತಿಯಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಹನೂರು ಕ್ಷೇತ್ರದ ಯುವ ನಾಯಕ ನಿಶಾಂತ್, ಚಾಮುಲ್ ಅಧ್ಯಕ್ಷ ನಾಗೇಂದ್ರ, ನಿರ್ದೇಶಕ ನಂಜುಂಡಸ್ವಾಮಿ, ವೀರಶೈವ ಮಹಾಸಭೆ ತಾಲೂಕು ಅಧ್ಯಕ್ಷ ಮಹದೇವಪ್ರಸಾದ್, ಮಾಜಿ ಅಧ್ಯಕ್ಷ ಬಸಪ್ಪನದೊಡ್ಡಿ ಬಸವರಾಜು, ಹನೂರು ಅಧ್ಯಕ್ಷ ಕಣ್ಣೂರು ಬಸವರಾಜಪ್ಪ, ಪ್ರಧಾನ ಕಾರ್ಯದರ್ಶಿ ಬಸವರಾಜು, ಪದಾಧಿಕಾರಿಗಳಾದ ವೀರಭದ್ರಸ್ವಾಮಿ, ಅನಾಪುರ ಉಮೇಶ್, ಶಿವಪುರ ಲೋಕೇಶ್, ತಿಮ್ಮರಾಜಿಪುರ ಪುಟ್ಟಣ್ಣ, ವಿಜಯೇಂದ್ರ ಬಳಗದ ಬೃಂಗೇಶ್, ಮುಖಂಡರಾದ ಯುರಿಯೂರು ಮಹದೇವಸ್ವಾಮಿ, ಶಿವಕುಮಾರ್, ಪ್ರಭುಪ್ರಸಾದ್, ಯುಪಿಎಸ್ ಮಹದೇವಸ್ವಾಮಿ, ಬಿಲ್ಪಗಿರೀಶ್, ಮಲ್ಲೇಶಪ್ಪ, ಆಲಹಳ್ಳಿ ತೋಟೇಶ್, ನಂದೀಶ್, ಅಚ್ಚಗಾಳ ಮಹದೇವಸ್ವಾಮಿ, ಲಕ್ಕರನಸನಪಾಳ್ಯ ಮಹೇಶ್, ಮಾಜಿ ಶಾಸಕ ನಂಜುಂಡಸ್ವಾಮಿ ಅವರ ಪುತ್ರ ಜಿ ಎನ್ ಲೋಕೇಶ್, ಕೆಂಪನಪಾಳ್ಯ ಮಹೇಶ್, ಹಾಲಿನಡೈರಿ ಬಸಪ್ಪ, ಬೂದಿತಿಟ್ಟು ಶಿವಕುಮಾರ್, ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡರು. ವಿವಿಧ ಮುಖಂಡರ ಭೇಟಿ:ಮೆರವಣಿಗೆ ವೇಳೆ ಅನ್ಯಧರ್ಮದ ಮುಖಂಡರಾದ ಸಿಗ್ ಬತ್, ಕ್ರೈಸ್ತ ಸಮಾಜದ ಸೆಲ್ವರಾಜು, ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಬ್ರಾಹ್ಮಣ ಸಮಾಜದ ನರಸಿಂಹನ್, ದಲಿತ ಸಮಾಜದ ನಟರಾಜಮಾಳಿಗೆ, ಬಸ್ತಿಪುರ ಶಾಂತರಾಜು, ರವಿ, ಭೀಮನಗರದ ದೊಡ್ಡ ಯಜಮಾನ ಚಿಕ್ಕಮಾಳಿಗೆ, ಸತ್ತೇಗಾಲ ರಾಜಶೇಖರ್, ಬಸ್ಪಿಪುರ ಸ್ವಾಮಿ ನಂಜಪ್ಪ, ರಾಘವೇಂದ್ರ, ಕೆ.ಮೂರ್ತಿ, ನಾಯಕ ಸಮಾಜದ ಕೊಪ್ಪಾಳಿ ಮಹದೇವನಾಯಕ ಸೇರಿದಂತೆ ಅನೇಕ ಮುಖಂಡರು ಮೆರವಣಿಗೆ ವೇಳೆ ಪಾಲ್ಗೊಂಡದ್ದು ವಿಶೇಷವಾಗಿತ್ತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ