ಮೊಳಕಾಲ್ಮೂರು: ತಾಲೂಕಿನ ಬಿಜಿಕೆರೆ ಗ್ರಾಮದಲ್ಲಿ ಮಂಗಳವಾರ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದ ಆವರಣದಿಂದ ತೇರು ಬೀದಿಯ ಮೂಲಕ ಪಾದಗಟ್ಟಿಯವರೆಗೆ ರಥವನ್ನು ಎಳೆದೊಯ್ದು ಮೂಲ ಸ್ಥಾನಕ್ಕೆ ಕರೆತರಲಾಯಿತು.
ರಥೋತ್ಸವದ ಉದ್ದಕ್ಕೂ ಭಕ್ತರು ಉರುಳು ಸೇವೆ ಮಾಡಿ ಭಕ್ತಿ ಸಮರ್ಪಿಸಿದರು. ಅಲ್ಲದೆ ಬಾಳೆ ಹಣ್ಣು ಚೂರು ಬೆಲ್ಲ ಎರಚಿದರು. ಬುಧವಾರ ಪಲ್ಲಕ್ಕಿ ಉತ್ಸವದೊಂದಿಗೆ ದೇವರನ್ನು ಗುಡಿ ತುಂಬಿಸಿ ಓಕುಳಿಯ ನಂತರ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.ರಥೋತ್ಸವದಲ್ಲಿ ದ್ರಾಕ್ಷ ರಸ ಹಾಗೂ ವೈನ್ ಬೋರ್ಡ್ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಜಯಣ್ಣ, ನಿವೃತ್ತ ತಹಸೀಲ್ದಾರ್ ರಘುಮೂರ್ತಿ, ಮುಖಂಡರಾದ ಶಿವಾನಂದಪ್ಪ, ನಾಗನಗೌಡ ಭಾಗಿಯಾಗಿದ್ದರು.