ಸಾಂಸ್ಕೃತಿಕ ಉತ್ಸವ ಸಂತೋಷ ಮತ್ತು ಸಂಭ್ರಮದ ವೇದಿಕೆ : ಶಾಸಕ ತುನ್ನೂರು
ಕನ್ನಡಪ್ರಭ ವಾರ್ತೆ ಶಹಾಪುರಸಾಂಸ್ಕೃತಿಕ ಉತ್ಸವ ಸಂತೋಷ ಮತ್ತು ಸಂಭ್ರಮದ ವೇದಿಕೆಯಾಗಿದೆ ಎಂದು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ನಗರದ ಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ, ಚರಬಸವೇಶ್ವರ ಸಂಗೀತ ಸಮಿತಿ ವತಿಯಿಂದ ನಡೆದ 26ನೇ ವರ್ಷದ ಸಗರನಾಡು ಉತ್ಸವ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನಾನು ಕನಿಷ್ಠ ಮೂವತ್ತು ವರ್ಷಗಳಿಂದ ಸಂಗೀತ ಸೇವಾ ಸಮಿತಿ ಕಾರ್ಯಕ್ರಮ ನೋಡುತ್ತಿದ್ದೇನೆ. ಈ ಭಾಗದಲ್ಲಿ ಕಲಾವಿದರನ್ನು, ಸಾಹಿತಿಗಳನ್ನು ಅನೇಕ ಕ್ಷೇತ್ರದಲ್ಲಿ ಸೇವೆ ಮಾಡಿದ ಗಣ್ಯರನ್ನು ವೇದಿಕೆಯ ಮೇಲೆ ತಂದು ರಾಜ್ಯಕ್ಜೆ ಪರಿಚಯಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಬೆನ್ನೆಲುಬಾಗಿ ಸಂಸ್ಥಾನ ಗದ್ದುಗೆಯ ಕಾರ್ಯ ಬಹಳ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮಲ್ಲಣ್ಣ ಮಡ್ಡಿ ಸಾಹು, ಮುಂದಿನ ಪೀಳಿಗೆಯಲ್ಲಿ ಸಾಂಸ್ಕೃತಿಕ ಪರಂಪರೆ ಮತ್ತು ಪ್ರೀತಿ ತುಂಬುವ ಜವಾಬ್ಧಾರಿ ಹಿರಿಯರು ತೆಗೆದುಕೊಳ್ಳಬೇಕು. ನಮ್ಮ ಶ್ರೇಷ್ಠ ಪರಂಪರೆ ಉಳಿಸಿಕೊಳ್ಳಬೇಕಾದರೆ ಇದನ್ನು ಮೊದಲಿನಿಂದಲೂ ಮಾಡಬೇಕು ಎಂದರು.ಸಂಸ್ಥಾನ ಗದ್ದುಗೆಯ ಬಸವಯ್ಯ ಸ್ವಾಮಿಗಳು, ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ಸಾನಿಧ್ಯ ವಹಿಸಿದ್ದರು. ನಟ ಮಂಜುನಾಥ, ನಟಿ ದಿಶಾ ಶೆಟ್ಟಿ, ವಿಶ್ವನಾಥರೆಡ್ಡಿ ದರ್ಶನಾಪುರ, ಡಾ. ಶಿವರಾಜ್ ದೇಶಮುಖ, ಡಾ. ಜಲಾಲುದ್ದಿನ್ ಅಕ್ಬರ್, ರವೀಂದ್ರನಾಥ ಚೌದ್ರಿ, ಸಿದ್ದಲಿಂಪ್ಪ ಆನೆಗುಂದಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಇದ್ದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗೌಡಪ್ಪಗೌಡ ಆಲ್ದಾಳ, ಮಲ್ಲಿಕಾರ್ಜುನ ಸತ್ಯಂಪೇಟ, ಮಹಾರಾಜ ದಿಗ್ಗಿ, ಡಾ. ಭೀಮಣ್ಣ ಮೇಟಿ, ಎಂ. ನಾರಾಯಣ, ಡಾ. ಮಲ್ಲಾರಡ್ಡಿ, ಹನಮರಡ್ಡಿ ಬೀರನೂರು, ಮಾನಯ್ಯ ಹತ್ತಿಗೂಡುರು ಅವರನ್ನು ಸನ್ಮಾನಿಸಲಾಯಿತು. ಸಮಿತಿ ಸಂಸ್ಥಾಪಕರಾದ ಡಾ. ಶರಣು ಗದ್ದುಗೆ ಕಾರ್ಯಕ್ರಮ ಆಯೋಜಿಸಿದ್ದರು. ಕಲಾವಿದರು, ಗಣ್ಯರು, ಅನೇಕ ಕಲಾವಿದರು ಇದ್ದರು. ಕನ್ನಡ ಸಂಸ್ಕೃತಿ ಇಲಾಖೆ ಸಹಕಾರ ನೀಡಿತ್ತು.2ವೈಡಿಆರ್5ಶಹಾಪುರ ನಗರದ ಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ ನಡೆದ 26ನೇ ಸಗರನಾಡು ಸಾಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಉದ್ಘಾಟಿಸಿ ಮಾತನಾಡಿದರು.2ವೈಡಿಆರ್6ಶಹಾಪುರ ನಗರದ ಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
2ವೈಡಿಆರ್4ಶಹಾಪುರ ನಗರದ ಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ ನಡೆದ 26ನೇ ಸಗರನಾಡು ಸಾಸ್ಕೃತಿಕ ಉತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.