ಕನ್ನಡಪ್ರಭ ವಾರ್ತೆ ಪಾಂಡವಪುರ
ಮಹದೇಶ್ವರಪುರ ಗ್ರಾಮದ ಶ್ರೀಮಹದೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸುತ್ತಮುತ್ತಲಿನ ಗ್ರಾಮಸ್ಥರು ಒಂದೊಂದು ದಿನ ಹುಲಿವಾಹನೋತ್ಸವ ಅದ್ಧೂರಿಯಾಗಿ ಮೆರವಣಿಗೆ ನಡೆಸುವ ಹಿನ್ನೆಲೆಯಲ್ಲಿ ಟಿ.ಎಸ್.ಛತ್ರ ಗ್ರಾಮಸ್ಥರು ಇಂದು ವಿವಿಧ ಕಲಾತಂಡಗಳೊಂದಿಗೆ ಹುಲಿವಾಹನೋತ್ಸವವನ್ನು ಮೆರವಣಿಗೆ ಮೂಲಕ ದೇವಸ್ಥಾನದ ಬಳಿಗೆ ತೆಗೆದುಕೊಂಡು ಹೋಗಲಾಯಿತು.
ಟಿ.ಎಸ್.ಛತ್ರ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹುಲಿವಾಹನೋತ್ಸವಕ್ಕೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದರು. ಬಳಿಕ ಗ್ರಾಮಸ್ಥರು ಹುಲಿವಾಹನೋತ್ಸವಕ್ಕೆ ಭಕ್ತಿಭಾವದಿಂದ ಪೂಜೆಸಲ್ಲಿಸಿದರು. ಗ್ರಾಮದ ಯುವಕರು ಅದ್ದೂರಿಯಾಗಿ ಹುಲಿವಾಹನವನ್ನು ಮೆರವಣಿಗೆ ನಡೆಸಿದರು.ಹುಲಿವಾಹನಕ್ಕೆ ಭಕ್ತರು, ಸಾರ್ವಜನಿಕರು ಕಡಲೆಪುರಿ, ಹಣ್ಣು-ಜವನ ಎಸೆದು ಉಘೇ ಮಾದಪ್ಪ... ಉಘೇ ಮಾದಪ್ಪ ಎಂಬ ಘೋಷಣೆ ಮೊಗಳಿಸಿ ಭಕ್ತಿಭಾವ ಪ್ರದರ್ಶಿಸಿದರು. ನಂತರ ಟಿ.ಎಸ್.ಛತ್ರ ಗ್ರಾಮದಿಂದ ಮಹದೇಶ್ವರಪುರ ಗ್ರಾಮದ ಮಹದೇಶ್ವರ ದೇವಸ್ಥಾನದವರೆಗೂ ವೀರಗಾಸೆ, ಚಂಡೆವೇಳ, ತಮಟೆ, ಪೂಜಾಕುಣಿತ ಸೇರಿದಂತೆ ನೃತ್ಯ ತಂಡ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಿದರು. ಮಹದೇಶ್ವರ ದೇವಸ್ಥಾನದ ಬಳಿಯೂ ಅದ್ಧೂರಿ ಮೆರವಣಿಗೆ ನಡೆಸಿದರು.
ಪಾಂಡವಪುರ:
ಈ ವೇಳೆ ತಹಸೀಲ್ದಾರ್ ಸಂತೋಷ್ ಹಾಗೂ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ಕಸಾಪ ತಾಲೂಕು ಮೇಣಾಗರ ಪ್ರಕಾಶ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿಬಾಬು, ಉಪಾಧ್ಯಕ್ಷ ಅಶೋಕ್, ಬಿ.ಎಲ್.ಕುನಾಲ್ ತಂದೆ ಬಿ.ಜೆ.ಲೊಕೇಶ್ ಪಟ್ಟಣದ ಪೇಟೆ ಬೀದಿಯಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡು ಪತ್ನಿ ಲಕ್ಷ್ಮಿ ಅವರೊಂದಿಗೆ ಜೀವನ ನಡೆಸುತ್ತಿದ್ದಾರೆ. ಯೋಗ ಕಲಿಸಿದ ಗುರು ಪ್ರಿಯಾ ಎನ್. ಅವರನ್ನು ಸ್ಮರಿಸಿದ್ದಾರೆ.