ಧಾರವಾಡ:
ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ಭಕ್ತ ಸಾಗರವೇ ಪಾಲ್ಗೊಂಡು ಭಕ್ತಿ ಪರಾಕಾಷ್ಠೆ ಮೆರೆದರು. ನಗರದ ಹೆಡ್ ಪೋಸ್ಟ್ ಬಳಿಯ ಉಳವಿ ಚೆನ್ನಬಸವೇಶ್ವರ ವೃತ್ತದಿಂದ ಆರಂಭವಾದ ಶೋಭಾಯಾತ್ರೆ ಮಾಳಮಡ್ಡಿ ಗೋಪಾಲಪುರದ ಉತ್ತರಾದಿಮಠದ ವರೆಗೆ ಸಾಗಿತು. ಭಕ್ತರು ಹರಿ ಸರ್ವೋತ್ತಮ–ವಾಯು ಜೀವೋತ್ತಮ, ವಾಸುದೇವ ಹರಿ ಎಂಬ ಘೋಷಣೆಗಳು ಮೊಳಗಿಸಿದರು. ವಾದ್ಯ ಮೇಳ, ಭಜನಾ ಮಂಡಳಿ, ಮಹಿಳೆಯರ ಕೋಲಾಟ ಹಾಗೂ ಯುವಕರ ಉತ್ಸಾಹಭರಿತ ಘೋಷಣೆಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಅಪಾರ ಸಂಖ್ಯೆಯ ಭಕ್ತರು ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದರು.
ಚಾತುರ್ಮಾಸ್ಯದ ಅವಧಿಯಲ್ಲಿ ಧಾರವಾಡ ಉತ್ತರಾದಿಮಠದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ ಹಾಗೂ ಪ್ರವಚನಗಳು ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ.