ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಉದ್ಭವ ಗಣೇಶ ದೇವಾಲಯದಿಂದ ಆರಂಭವಾದ ಶೋಭಾಯಾತ್ರೆಯಲ್ಲಿ ಯುವತಿಯರ ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾಧ್ಯ ಕಲಾತಂಡಗಳ ಮೂಲಕ ಮೆರವಣಿಗೆ ನಡೆಯಿತು.
ಶೋಭಾಯಾತ್ರೆಯಲ್ಲಿ ವಿವಿಧ ದೇಶಭಕ್ತರ ವೇಷಧಾರಿ ಮಕ್ಕಳು ಗಮನ ಸೆಳೆದರು. ಪುಟಾಣಿ ಮಕ್ಕಳಿಂದ ಭಜನೆ, ಭವ್ಯ ಮೆರವಣಿಗೆಯಲ್ಲಿ ಸಾರೋಟಿನಲ್ಲಿ ಕುಳಿತ ಬಾಲಕ ಗಮನ ಸೆಳೆದ.ಶೋಭಾಯಾತ್ರೆಯಲ್ಲಿ ನೂರಾರು ಜನ ಹಿಂದೂಗಳು ಸೇರಿದಂತೆ ಮಹಿಳೆಯರು ಸಹ ಪಾಲ್ಗೊಂಡಿದ್ದರು. ಶೋಭಾಯಾತ್ರೆ ಹಾಗೂ ಹಿಂದೂ ಸಮ್ಮೇಳನ ಹಿನ್ನೆಲೆ ಎಲ್ಲೆಡೆ ಪೋಲಿಸ ಬಿಗಿಭದ್ರತೆ ಮಾಲಾಗಿತ್ತು. ನವನಗರದ ಸೆಕ್ಟರ್ 52ರಲ್ಲಿ ವಿರಾಟ್ ಹಿಂದೂ ಸಮ್ಮೇಳನ ನಡೆಯಿತು.
ಶೋಭಾಯಾತ್ರೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಸಂಸದ ಪಿ.ಸಿ. ಗದ್ದಿಗೌಡರ, ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಗಣ್ಯರು ಭಾಗವಹಿದ್ದರು.