1008 ಭಗವಾನ ಪಾರ್ಶ್ವನಾಥ ತೀರ್ಥಂಕರರ ಪಂಚಲೋಹ ಮೂರ್ತಿಯ ಮೂರ್ತಿಯ ಭವ್ಯ ಮೆರವಣಿಗೆ ಉಳ್ಳಾಗಡ್ಡಿ-ಖಾನಾಪುರದ ಜೈನ ಮಂದಿರದ ರಸ್ತೆ ಮಾರ್ಗವಾಗಿ ಪ್ರಾರಂಭವಾಗಿ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ನಡೆಯುತ್ತಿರುವ ಮಂಟಪದವರೆಗೆ ಜರುಗಿತು.
ಕನ್ನಡಪ್ರಭ ವಾರ್ತೆ ಯಮಕನಮರಡಿ
1008 ಭಗವಾನ ಪಾರ್ಶ್ವನಾಥ ತೀರ್ಥಂಕರರ ಪಂಚಲೋಹ ಮೂರ್ತಿಯ ಮೂರ್ತಿಯ ಭವ್ಯ ಮೆರವಣಿಗೆ ಉಳ್ಳಾಗಡ್ಡಿ-ಖಾನಾಪುರದ ಜೈನ ಮಂದಿರದ ರಸ್ತೆ ಮಾರ್ಗವಾಗಿ ಪ್ರಾರಂಭವಾಗಿ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸ ನಡೆಯುತ್ತಿರುವ ಮಂಟಪದವರೆಗೆ ಜರುಗಿತು.
ಧರ್ಮ ಧ್ವಜಗಳು, ವಾದ್ಯ ಮೇಳಗಳು ಮೆರವಣಿಗೆ ಮೆರಗು ತಂದವು. ಭವ್ಯ ಮೂರ್ತಿ: 3-4 ಅಡಿಗಳಷ್ಟಿರುವ ಪಾರ್ಶ್ವನಾಥ ತೀಥಂಕರರ ಮೂಲ ನಾಯಕ ಪಂಚಲೋಹ ಮೂರ್ತಿ ಜೈನ ಮಂದಿರದಲ್ಲಿ ಪ್ರತಿಷ್ಠಾಪಣೆಗೊಳ್ಳಲಿದೆ.
ಈ ವೇಳೆ 108 ಜಿನಸೇನ ಮುನಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು, ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು, ಧಾರ್ಮಿಕ ವಿಧಿ ವಿಧಾನಗಳನ್ನು ಪವನ ಚಂದ್ರನಾಥ ಉಪಾಧ್ಯ ಹಾಗೂ ಜಿನೇಂದ್ರ ಕಾಂತ ಉಪಾಧ್ಯೆ, ವೃಷಭ ಉಪಾಧ್ಯೆ, ಮಹಾವೀರ ಉಪಾಧ್ಯೆ ನಡೆಸಿಕೊಟ್ಟರು. ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.