ಗಜೇಂದ್ರಗಡ: ಪಟ್ಟಣದ ವಿಶ್ವಕರ್ಮ ಸಮಾಜ ವಿಕಾಸ ಕಮಿಟಿ, ಕಾಳಿಕಾದೇವಿ ಮಹಿಳಾ ಮಂಡಳದಿಂದ ಬುಧವಾರ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶ್ವಕರ್ಮ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಇದಕ್ಕೂ ಮುನ್ನ ಬೆಳಗ್ಗೆ ವಿಶ್ವಕರ್ಮರಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರದೊಂದಿಗೆ ವಿಶೇಷ ಪೂಜೆ ನಡೆಯಿತು. ಬಳಿಕ ಮೌನೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ವಿಶ್ವಕರ್ಮ ಭಾವಚಿತ್ರದ ಮೆರವಣಿಗೆಯು ಇಲ್ಲಿನ ವಿರೂಪಾಕ್ಷೇಶ್ವರ ದೇವಸ್ಥಾನ, ಕಟ್ಟಿಬಸವೇಶ್ವರ ವೃತ್ತ, ಕೊಳ್ಳಿಯವರ ಕತ್ರಿ, ಬಜರಂಗದಳ ವೃತ್ತ, ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಕಾಲಕಾಲೇಶ್ವರ ವೃತ್ತದಲ್ಲಿ ಸಾಗಿದ ಮೆರವಣಿಗೆಯಲ್ಲಿ ನವನಗರ ಮಾರ್ಗವಾಗಿ ದೇವಸ್ಥಾನಕ್ಕೆ ಬಂದು ತಲುಪಿತು. ಮೆರವಣಿಗೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ಭಾಗಿಯಾದರು. ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಾದಾನಿಗಳಿಗೆ ಸನ್ಮಾನ ನಡೆಯಿತು.
ಸಮಾಜದ ಅಧ್ಯಕ್ಷ ಬಿ.ಎಂ. ಬಡಿಗೇರ, ಶ್ರೀನಿವಾಸ ಸವದಿ, ಮಲ್ಲಿಕಾರ್ಜುನ ಬಡಿಗೇರ, ಮಂಜುನಾಥ ಬಡಿಗೇರ, ಶಂಕ್ರಪ್ಪ ಬಡಿಗೇರ, ಸುರೇಶ ಪತ್ತಾರ, ಪ್ರಾಣೇಶ ಹೊರಪೇಟಿ, ಸಂತೋಷ ಬೆನಹಾಳ, ರಾಘು ಸವದಿ, ಕಿರಣ ಸವದಿ, ರಾಗು ಕಮ್ಮಾರ, ಸುಜಾತಾ ಮುದಗಲ್, ಗಂಗೂಬಾಯಿ ಹೊರಪೇಟಿ, ಪರಶುರಾಮ ಕಮ್ಮಾರ, ಮೌನೇಶ ಪತ್ತಾರ, ರಂಗು ಕಮ್ಮಾರ, ಡಾ.ಶ್ವೇತಾ ವಿಶ್ವಬ್ರಾಹ್ಮಣ, ಕವಿತಾ ಕಮ್ಮಾರ ಸೇರಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.