ದೇಶದಲ್ಲಿ ನಿಜವಾದ ಅಲ್ಲಸಂಖ್ಯಾತ ಸಮುದಾಯಗಳು ಬಹಳಿಷ್ಟಿವೆ. ಅವುಗಳಲ್ಲಿ ವಿಶ್ವಕರ್ಮ ಸಮಾಜ ಸಹ ಒಂದಾಗಿದೆ. ಆದರೆ ನಮ್ಮ ಸಮಾಜದ ಅಭ್ಯು ದಯಕ್ಕೆ ಅನುಕೂಲವಾಗುವ ಯೋಜನೆಗಳನ್ನ ಜಾರಿಗೆ ತರುವ ಅವಶ್ಯಕತೆಯಿದೆ.
ಬ್ಯಾಡಗಿ: ಇಡೀ ದೇಶಕ್ಕೆ ವಿಶ್ವಕರ್ಮರ ಪ್ರಾಮುಖ್ಯತೆ ತಿಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಕೊಡುಗೆ ದೊಡ್ಡದಿದೆ. ಇಷ್ಟಾದರೂ ದೇಶದ ಹಲವು ರಾಜ್ಯಗಳಲ್ಲಿ ವಿಶ್ವಕರ್ಮರಿಗೆ ಸಿಗಬೇಕಾದ ಪ್ರಾತಿನಿಧ್ಯ ಸಿಗದೇ ಇರುವುದು ಖೇದದ ಸಂಗತಿ ಎಂದು ವಿಶ್ವಕರ್ಮ ಸಮಾಜದ ಮುಖಂಡ ಮಂಜುನಾಥ ಬಡಿಗೇರ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಬುಧವಾರ ವಿಶ್ವಕರ್ಮ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಮೆರವಣಿಗೆ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ನಿಜವಾದ ಅಲ್ಲಸಂಖ್ಯಾತ ಸಮುದಾಯಗಳು ಬಹಳಿಷ್ಟಿವೆ. ಅವುಗಳಲ್ಲಿ ವಿಶ್ವಕರ್ಮ ಸಮಾಜ ಸಹ ಒಂದಾಗಿದೆ. ಆದರೆ ನಮ್ಮ ಸಮಾಜದ ಅಭ್ಯು ದಯಕ್ಕೆ ಅನುಕೂಲವಾಗುವ ಯೋಜನೆಗಳನ್ನ ಜಾರಿಗೆ ತರುವ ಅವಶ್ಯಕತೆಯಿದೆ ಎಂದರು.ಸಮಾಜವನ್ನು ಹತ್ತಿಕ್ಕಬೇಡಿ: ಮೌನೇಶ ಕಮ್ಮಾರ ಮಾತನಾಡಿ, ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿರುವ ವಿಶ್ವಕರ್ಮ ಸಮಾಜದವರು ಎಲ್ಲ ವರ್ಗದ ಜನರೊಂದಿಗೆ ಬೆರೆತು ಜೀವನ ನಡೆಸುತ್ತ ಬಂದಿದ್ದಾರೆ. ನಮ್ಮ ಪಂಚ ವೃತ್ತಿಗಳಿಂದ ಎಲ್ಲ ಸಮುದಾಯದ ಜನರಿಗೂ ಅನುಕೂಲವಾಗುತ್ತಿದೆ. ಇಂಥ ಸಮಾಜವನ್ನ ಎಲ್ಲ ರೀತಿಯಲ್ಲಿಯೂ ತುಳಿಯುವ ಹುನ್ನಾರ ನಡೆಯುತ್ತಲೇ ಬಂದಿದೆ ಎಂದು ಖೇದ ವ್ಯಕ್ತಪಡಿಸಿದರು.ವಿಶ್ವಕರ್ಮರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಮೌನೇಶ ಬಡಿಗೇರ, ಪ್ರಶಾಂತ ಬಡಿಗೇರ, ರಾಜು ಕಮ್ಮಾರ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.ರಟ್ಟೀಹಳ್ಳಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ
ರಟ್ಟೀಹಳ್ಳಿ: ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದರು.ಪಟ್ಟಣ ಪಂಚಾಯಿತಿ ನೌಕರ ರಾಜಕುಮಾರ ಹೇಂದ್ರೆ, ಮಂಜು ಸುಣಗಾರ, ಸಂತೋಷ ಬಿಳಚಿ, ವೀರೇಶ ದ್ಯಾವಕ್ಕಳವರ, ಬಸವರಾಜ ಕವಲೆತ್ತು, ಅಶೋಕ ಬೆಳಕೆರಿ, ಗುತ್ತೆಪ್ಪ ಹರಿಜನ, ವಿವೇಕ ಕುಲಕರ್ಣಿ, ಮಂಜು ಮಾಸೂರ, ಸಂತೋಷ ಕಾಪ್ಸಿಕರ್ ಮುಂತಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.