ಅದ್ಧೂರಿ ಸಿದ್ಧೇಶ್ವರ ದೇವರ ರಥೋತ್ಸವ

KannadaprabhaNewsNetwork |  
Published : Apr 13, 2025, 02:02 AM IST
ಫೋಟೊ ಶೀರ್ಷಿಕೆ: 12ಆರ್‌ಎನ್‌ಆರ್4, 4ಎರಾಣಿಬೆನ್ನೂರಿನಲ್ಲಿ ಅದ್ಧೂರಿಯಾಗಿ ಜರುಗಿದ ಸಿದ್ಧೇಶ್ವರ ದೇವರ ರಥೋತ್ಸವ  | Kannada Prabha

ಸಾರಾಂಶ

ರಥೋತ್ಸವದ ಅಂಗವಾಗಿ ಬಲೂನುಗಳು ಸೇರಿದಂತೆ ಬಗೆ ಬಗೆಯ ಮಕ್ಕಳ ಆಟಿಕೆ ಸಾಮಗ್ರಿಗಳ ಮಾರಾಟಗಾರರು, ಹೂವು ಹಣ್ಣು ಅಂಗಡಿಕಾರರು, ಫಳಾರ ಮಾರಾಟಗಾರರು ಭರ್ಜರಿ ವ್ಯಾಪಾರ ನಡೆಸಿದರು.

ರಾಣಿಬೆನ್ನೂರು: ದವನ ಹುಣ್ಣಿಮೆ ಅಂಗವಾಗಿ ಇಲ್ಲಿನ ಸಿದ್ದೇಶ್ವರನಗರದ ಐತಿಹಾಸಿಕ ಸಿದ್ದೇಶ್ವರ ದೇವರ ರಥೋತ್ಸವ ಶನಿವಾರ ಅದ್ಧೂರಿಯಾಗಿ ಜರುಗಿತು.

ದೇವಸ್ಥಾನದಿಂದ ಸಂಜೆ 6ರ ಸುಮಾರು ಹೊರಟ ತೇರು ಹಳೆ ಪಿ.ಬಿ. ರಸ್ತೆಯಲ್ಲಿ ಹೊರಟು ಕುರುಬಗೇರಿ ಕ್ರಾಸ್‌ವರೆಗೆ ಬಂದು ಪುನಃ ದೇವಸ್ಥಾನಕ್ಕೆ ಬಂದು ಸೇರಿತು. ದಾರಿಯುದ್ದಕ್ಕೂ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ರಥಕ್ಕೆ ಭವ್ಯ ಸ್ವಾಗತ ಕೋರಿ ಹಣ್ಣು ಕಾಯಿ ನೈವೆದ್ಯ ಮಾಡಿಸಿದರು.

ರಥೋತ್ಸವದ ಅಂಗವಾಗಿ ಬಲೂನುಗಳು ಸೇರಿದಂತೆ ಬಗೆ ಬಗೆಯ ಮಕ್ಕಳ ಆಟಿಕೆ ಸಾಮಗ್ರಿಗಳ ಮಾರಾಟಗಾರರು, ಹೂವು ಹಣ್ಣು ಅಂಗಡಿಕಾರರು, ಫಳಾರ ಮಾರಾಟಗಾರರು ಭರ್ಜರಿ ವ್ಯಾಪಾರ ನಡೆಸಿದರು.

ಸೋಮಣ್ಣ ಗೌಡಶಿವಣ್ಣನವರ, ಶೇಖಪ್ಪ ಹೊಸಗೌಡ್ರ, ಮಂಜುನಾಥ ಗೌಡಶಿವಣ್ಣನವರ, ಸಿದ್ದಣ್ಣ ಅತಡಕರ, ಬಸಪ್ಪ ಕುರಡಣ್ಣನವರ, ಅರುಣ ಸೊಪ್ಪಿನ, ಪರಮೇಶ ಗೂಳಣ್ಣನವರ, ಮಹೇಶ ಅಗಡಿ, ಮಹೇಶ ಗೌಡಶಿವಣ್ಣನವರ, ಮಲ್ಲೇಶಪ್ಪ ಬಸನಗೌಡ್ರ, ಕುಮಾರ ಕಾಳಮ್ಮನವರ, ನಾಗರಾಜ ಸೊಪ್ಪಿನ, ಮಂಜುನಾಥ ಬುರಡಿಕಟ್ಟಿ, ಅರುಣ ಗೂಳಣ್ಣನವರ, ಶೇಖಪ್ಪ ನರಸಗೊಂಡರ, ಕರಬಸಪ್ಪ ಮಾಕನೂರ ಸೇರಿದಂತೆ ಸಹಸ್ರಾರು ಜನರು ರಥೋತ್ಸವದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ