ಇಟಗಿ ಮಹಾದೇವ ದೇವಸ್ಥಾನ ವಿಶ್ವಪರಂಪರೆ ಪಟ್ಟಿಗೆ ಸೇರಿಸಲು ಪ್ರಸ್ತಾವನೆ

KannadaprabhaNewsNetwork |  
Published : Apr 13, 2025, 02:02 AM IST
5546 | Kannada Prabha

ಸಾರಾಂಶ

ಇಟಗಿ ಮಹಾದೇವ ದೇವಾಲಯವನ್ನು ಕಲ್ಯಾಣಿ ಚಾಲುಕ್ಯರ ೬ನೇ ವಿಕ್ರಮಾದಿತ್ಯನ ಪ್ರಧಾನ ದಂಡನಾಯಕನಾಗಿದ್ದ ಮಹಾದೇವ ದಂಡನಾಯಕ ನಿರ್ಮಿಸಿದ್ದಾನೆ. ಕಲೆಗಳಲ್ಲಿ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ಕೆತ್ತನೆಗಳಿಂದ ಈ ದೇವಾಲಯ ಕೂಡಿದೆ.

ಅಮರೇಶ್ವರ ಸ್ವಾಮಿಕುಕನೂರು:

ಮೈಸೂರಿನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ತಾಲೂಕಿನ ಇಟಗಿ ಗ್ರಾಮದ ದೇವಾಲಯ ಚಕ್ರವರ್ತಿ, ಮಹಾದೇವ ದೇವಾಲಯವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಕೇಂದ್ರ ಸಂಸ್ಕೃತಿ ಇಲಾಖೆಗೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಗದಗ ಜಿಲ್ಲೆಯ ಲಕ್ಕುಂಡಿಯ ದೇವಾಲಯ ಮತ್ತು ತೊಟ್ಟಿಗಳ ಗುಂಪು, ಗದಗಿನ ತ್ರಿಕೂಟೇಶ್ವರ ದೇವಸ್ಥಾನ, ಡಂಬಳದ ದೊಡ್ಡಬಸಪ್ಪ ದೇವಾಲಯ ಮತ್ತು ಜಪದ ಭಾವಿ, ಇಟಗಿ ಮಹಾದೇವ ದೇವಾಲಯ, ಕುರುವತ್ತಿಯ ಶ್ರೀಮಲ್ಲಿಕಾರ್ಜುನ ದೇವಸ್ಥಾನ, ಬೆಳಗಾವಿಯ ಕೇದಾರೇಶ್ವರ ದೇವಸ್ಥಾನ, ಹಾನಗಲ್ ತಾರಕೇಶ್ವರ ದೇವಸ್ಥಾನಗಳ ಸ್ಮಾರಕಗಳ ಸಮೂಹವನ್ನು ವಿಶ್ವಪರಂಪರೆಗೆ ಕಲ್ಯಾಣಿ ಚಾಲುಕ್ಯರ ದೇವಾಲಯಗಳು ಮತ್ತು ವಾಸ್ತುಶಿಲ್ಪ ಸಮೂಹ ಎಂದು ಬಿಂಬಿಸಿ ಭಾರತೀಯ ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ಟ್ರಸ್ಟ್ ಅಧ್ಯಯನ ಮಾಡಿದೆ. ಆ ಅಧ್ಯಯನ ವರದಿ ಪ್ರಕಾರ ಮೈಸೂರು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ವಿಶ್ವಪರಂಪರೆಗೆ ರಾಜ್ಯ ಸರ್ಕಾರ, ಕಲ್ಯಾಣಿ ಚಾಲುಕ್ಯರ ದೇವಾಲಯಗಳು ಮತ್ತು ವಾಸ್ತುಶಿಲ್ಪ ಸಮೂಹವನ್ನು ಕಳುಹಿಸಿಕೊಡಲು ಕೇಂದ್ರ ಸಂಸ್ಕೃತಿ ಮಂತ್ರಾಲಯಕ್ಕೆ ಕೋರಿದೆ.

ಹೊಸ ಕೋರಿಕೆ:

ಕೇಂದ್ರ ಸಂಸ್ಕೃತಿ ಮಂತ್ರಾಲಯದ ಅಧೀನದ ನೋಡಲ್ ಏಜೆನ್ಸಿಯಾದ ನವದೆಹಲಿಯ ಭಾರತೀಯ ಪುರಾತತ್ವ ಸರ್ವೇಕ್ಷಣೆ ಮುಖಾಂತರ ವಿಶ್ವಪರಂಪರೆ ತಾಣಗಳ ತಾತ್ಕಾಲಿಕೆ ಪಟ್ಟಿಯ ಸೇರ್ಪಡೆಗೆ ರಾಜ್ಯ ಸರ್ಕಾರ ಅಂತಾರಾಷ್ಟ್ರೀಯ ಕಾರ್ಯಗಳು ಮತ್ತು ತಾಣಗಳ ಮಂಡಳಿಗೆ ಕಲ್ಯಾಣಿ ಚಾಲುಕ್ಯರ ದೇವಾಲಯಗಳು ಮತ್ತು ವಾಸ್ತುಶಿಲ್ಪ ಸಮೂಹದ ವರದಿ ಕಳುಹಿಸಿಕೊಡುವಂತೆ ಕೋರಿದೆ.

ಮಾದರಿ ದೇವಾಲಯ:

ಇಟಗಿ ಮಹಾದೇವ ದೇವಾಲಯವನ್ನು ಕಲ್ಯಾಣಿ ಚಾಲುಕ್ಯರ ೬ನೇ ವಿಕ್ರಮಾದಿತ್ಯನ ಪ್ರಧಾನ ದಂಡನಾಯಕನಾಗಿದ್ದ ಮಹಾದೇವ ದಂಡನಾಯಕ ನಿರ್ಮಿಸಿದ್ದಾನೆ. ಕಲೆಗಳಲ್ಲಿ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ಕೆತ್ತನೆಗಳಿಂದ ಈ ದೇವಾಲಯ ಕೂಡಿದೆ. ಯುಗಾದಿ ದಿನ ಸೂರ್ಯ ರಶ್ಮಿಗಳು ನೇರವಾಗಿ ಗರ್ಭಗುಡಿ ಪ್ರಾಂಗಣಕ್ಕೆ ಬಿದ್ದು ಅವುಗಳ ಪ್ರತಿಬಿಂಬ ಮಹಾದೇವ ದೇವರ ವಿಗ್ರಹದ ಮೇಲಿರುತ್ತವೆ. ಏಷ್ಯಾದಲ್ಲಿಯೇ ಅತ್ಯಂತ ಎರಡನೇ ದೊಡ್ಡ ಪುಷ್ಕರಣೆ ಎಂಬ ಖ್ಯಾತಿ ಪಡೆದಿದೆ. ಕ್ರಿಶ ೧೧೧೨ರಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ. ಕಂಬ, ಜಾಲಂದುಗಳು ಅಂತರಾಳ, ಶುತನಾಶಿ ಕಂಬಗಳು ಬೋದಿಗೆ ದೇವಸ್ಥಾನದ ಅಷ್ಟಕೋನಾಕೃತಿ ವಿಶೇಷತೆಗಳಿಂದ ದೇವಾಲಯ ಕೂಡಿದೆ. ದೇವಸ್ಥಾನದಲ್ಲಿರುವ ೬೦ ಕಂಬಗಳ ಕೆತ್ತನೆ ಒಂದಕ್ಕೊಂದು ಭಿನ್ನವಾಗಿವೆ. ನೋಡಲು ಒಂದೇ ನೋಟದಂತೆ ಕಂಡರೂ ಸಹ ಒಂದು ಕಂಬ ಇನ್ನೊಂದು ಕಲೆ ಹೋಲುವುದಿಲ್ಲ. ರಾಜ್ಯ ಸರ್ಕಾರದ ಪುರಾತತ್ವ ಹಾಗೂ ಸಂಗ್ರಹಾಲಯ ಇಲಾಖೆ ಕುಕನೂರ ತಾಲೂಕಿನ ಇಟಗಿಯ ಮಹಾದೇವ ದೇವಸ್ಥಾನವನ್ನು ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಲು ಕೋರಿದೆ. ಇಟಗಿ ದೇವಾಲಯ ಕಲಾ ಕೆತ್ತನೆಯಿಂದ ತನ್ನದೆ ಆದ ವೈಶಿಷ್ಟ್ಯ ಹಾಗೂ ಐತಿಹ್ಯದಿಂದ ಕೂಡಿದೆ.

ಬಸವರಾಜ ರಾಯರಡ್ಡಿ, ಸಿಎಂ ಆರ್ಥಿಕ ಸಲಹೆಗಾರ, ಶಾಸಕ

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ