ಮೆಲ್ಬರ್ನ್‌ನಲ್ಲಿ ವೈಭವದ ಶ್ರೀ ಕೃಷ್ಣಲೀಲೋತ್ಸವ

KannadaprabhaNewsNetwork |  
Published : Sep 08, 2026, 03:00 AM IST
ಮೆಲ್ಬರ್ನ್‌ನಲ್ಲಿರುವ ಪುತ್ತಿಗೆ ಶಾಖಾಮಠಲ್ಲಿ ನಡೆದ ಕೃಷ್ಣಾಷ್ಟಮಿಯಲ್ಲಿ ಅಲ್ಲಿನ ಸಚಿವರು ಭಾಗವಹಿಸಿದ್ದರು  | Kannada Prabha

ಸಾರಾಂಶ

ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿರುವ ಉಡುಪಿ ಪುತ್ತಿಗೆ ಮಠದ ಶಾಖೆ ಶ್ರೀ ವೆಂಕಟಕೃಷ್ಣ ವೃಂದಾವನದಲ್ಲಿ ಶ್ರೀಕೃಷ್ಣ ಲೀಲೋತ್ಸವವು ಶ್ರದ್ಧೆಭಕ್ತಿ ಮತ್ತು ವೈಭವದಿಂದ ನೆರವೇರಿತು. ನಗರದ ವಿವಿಧ ಭಾಗಗಳಿಂದ ಆಗಮಿಸಿದ 700ಕ್ಕೂ ಹೆಚ್ಚು ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಉಡುಪಿ : ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿರುವ ಉಡುಪಿ ಪುತ್ತಿಗೆ ಮಠದ ಶಾಖೆ ಶ್ರೀ ವೆಂಕಟಕೃಷ್ಣ ವೃಂದಾವನದಲ್ಲಿ ಶ್ರೀಕೃಷ್ಣ ಲೀಲೋತ್ಸವವು ಶ್ರದ್ಧೆಭಕ್ತಿ ಮತ್ತು ವೈಭವದಿಂದ ನೆರವೇರಿತು. ನಗರದ ವಿವಿಧ ಭಾಗಗಳಿಂದ ಆಗಮಿಸಿದ 700ಕ್ಕೂ ಹೆಚ್ಚು ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಶ್ರೀ ಕೃಷ್ಣ - ಶ್ರೀ ಗುರು ರಾಘವೇಂದ್ರ ಸ್ವಾಮಿಗಳಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪೂಜೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಪೂರ್ವಕವಾಗಿ ನೆರವೇರಿದವು. ಪುತ್ತಿಗೆ ಮಠದ ಅಂತರರಾಷ್ಟ್ರೀಯ ಶಾಖೆಗಳ ಸಂಯೋಜಕ ಪ್ರಸನ್ನಾಚಾರ್ಯರು ಸಮಾರಂಭದ ನೇತೃತ್ವ ವಹಿಸಿದ್ದರು. ಶ್ರೀ ವೆಂಕಟಕೃಷ್ಣ ವೃಂದಾವನದ ಪ್ರಧಾನ ಅರ್ಚಕ ವಿಶ್ವನಾಥ ಆಚಾರ್ಯರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.ಆಸ್ಟ್ರೇಲಿಯಾದ ಪೌರತ್ವ, ಕಸ್ಟಮ್ಸ್ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಹಾಯಕ ಸಚಿವ ಜೂಲಿಯನ್ ಹಿಲ್, ವಿಕ್ಟೋರಿಯಾ ರಾಜ್ಯದ ಪ್ರವಾಸೋದ್ಯಮ, ಕ್ರೀಡೆ ಹಾಗೂ ವ್ಯಾಪಾರ ಮತ್ತು ಹೂಡಿಕೆ ಸಚಿವ ಸ್ಟೀವ್ ಡಿಮೋಪೌಲಸ್, ಗ್ಲೆನ್ ವೇವರ್ಲಿ ಕ್ಷೇತ್ರದ ಸಂಸದ ಜಾನ್ ಮುಲ್ಲಾಹಿ ಮತ್ತು ಆಗ್ನೇಯ ಮೆಟ್ರೋಪಾಲಿಟನ್ ಸಂಸದ ಲೀ ಟಾರ್ಲಾಮಿಸ್ ಅವರು ಮುಖ್ಯ ಅತಿಥಿಗಳಾಗಿ ಈ ಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗವಹಿಸಿದರು. ಅವರನ್ನು ಶಾಲು ಹೊದೆಸಿ ಕೃಷ್ಣನ ಸ್ಮರಣಿಕೆ ನೀಡಿ ಗೌರವಿಸಲಾಯಿತುಪ್ರಸನ್ನಾಚಾರ್ಯರು ಮಾತನಾಡಿ, ವಿವಿಧ ಸಮುದಾಯಗಳು ತಮ್ಮ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಗಳನ್ನು ಮುಕ್ತವಾಗಿ ಸಂರಕ್ಷಿಸಿ ಆಚರಿಸಲು ಅವಕಾಶ ಕಲ್ಪಿಸಿರುವ ಆಸ್ಟ್ರೇಲಿಯಾ ಸರ್ಕಾರದ ಬಹುಸಾಂಸ್ಕೃತಿಕ ನೀತಿ ಮತ್ತು ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.ಸಮಾರೋಪದಲ್ಲಿ ಶ್ರೀಮಠದ ರಮೇಶ್, ಜಗನ್ ಮೋಹನ್ ಮತ್ತು ಅಶ್ವಿನ್ ಅವರು ಗಣ್ಯ ಅತಿಥಿಗಳು, ಭಕ್ತರು, ಸ್ವಯಂಸೇವಕರು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರಿಯೇಟಿವ್ ಗುರುದೇವೋಭವ: ಹಾಜಬ್ಬರಿಗೆ ಗೌರವ
ಭ್ರಷ್ಟರಿಂದಲೇ ಭ್ರಷ್ಟಾಚಾರದ ಆರೋಪ: ನವೀನ್ ನಾಯಕ್ ಆರೋಪ