ಕನ್ನಡಪ್ರಭ ವಾರ್ತೆ ರಾಮನಾಥಪುರ
ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ರಥೋತ್ಸವದ ಅಂಗವಾಗಿ ದೇಗುಲವು ವಿವಿಧ ರೀತಿಯ ಹೂಗಳು ಹಾಗೂ ಚಿತ್ತಾರಗಳಿಂದ ಅಲಂಕೃತಗೊಂಡಿತ್ತು. ಭಾನುವಾರ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇಗುಲದ ಮುಂಭಾಗದಲ್ಲಿ ನಿಲ್ಲಿಸಿದ್ದ ರಥಕ್ಕೆ ವಿವಿಧ ಪುಷ್ಪಗಳಿಂದ ಹಾಗೂ ಬಗ್ಗೆ ಬಗೆಯ ವರ್ಣದ ಬಟ್ಟೆಗಳಿಂದ ಅಲಂಕರಿಸಿದ 40 ಅಡಿ ಎತ್ತರದ ರಥದಲ್ಲಿ ದೇವಾಲಯದಲ್ಲಿ ಮಹಾ ಮಂಗಳಾರತಿ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ, ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
ರಥದಲ್ಲಿ ಕುಳ್ಳರಿಸಿದ ನಂತರ ಛತ್ರಿಚಾಮರ, ಚಂಡೆವಾದ್ಯ, ಗಾರುಡಿ ಗೊಂಬೆಗಳು ಇನ್ನಿತರ ಜನಪದ ಕಲಾತಂಡಗಳೊಂದಿಗೆ ಸುತ್ತಮುತ್ತಲಿನ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರ ಸಮಯದಲ್ಲಿ ಹರ್ಷೋದ್ಘಾರದೊಂದಿಗೆ ಸಾಮೂಹಿಕವಾಗಿ ರಥವನ್ನು ಎಳೆಯುತ್ತಾ ದೇವಸ್ಥಾನದ ಮುಂಭಾಗದಿಂದ ರಥದ ಬೀದಿಯಲ್ಲಿ ತೆರಳಿ ಕಾವೇರಿ ನದಿ ಸೇತುವೆಯವರೆಗೂ ಹಾಗೂ ಅಲ್ಲಿಂದ ಮತ್ತೆ ಸ್ವಸ್ಥಾನಕ್ಕೆ ರಥವನ್ನು ಭಕ್ತರು ಎಳೆದು ತಂದು ನಿಲ್ಲಿಸಿದರು.ನೂರಾರು ನವಜೋಡಿ ಆಗಮನ:
ಪೊಲೀಸ್ ಭದ್ರತೆ:ಅರಕಲಗೂಡು ವೃತ್ತ ನಿರೀಕ್ಷಕರು ಕೆ.ಎಂ. ವಸಂತ್, ಕೊಣನೂರು ಠಾಣೆ ಪಿ.ಎಸ್.ಐ ಗಿರೀಶ್ ಹಾಗೂ ತಂಡ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ರಥೋತ್ಸವದಲ್ಲಿ ಶಾಸಕ ಎ. ಮಂಜು, ಹಾಸನ ಹಿರಿಯ ಸಿವಿಲ್ ನ್ಯಾಯಧೀಶರಾದ ಬಿ. ಗಿರೀಗೌಡರು, ಗ್ರಾ.ಪಂ. ಕಾರ್ಯದರ್ಶಿ ರೇವಣ್ಣ, ಮುಂತಾದವರು ಭಾಗವಹಿಸಿದ್ದರು.
ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ರಥ ಎಳೆಯುವ ಸಂದರ್ಭದಲ್ಲಿ ಅಕಾಶದಿಂದ ಹಾಜರಾಗುವ ನಾಲ್ಕಾರು ಗರುಡ ಪಕ್ಷಿಗಳು ರಥದ ಮೇಲೆ ( ಅವಕಾಶದಲ್ಲಿ) ಹಾಗೂ ದೇವಾಲಯದ ಮೇಲೆ ಪ್ರದಕ್ಷಣೆ ಹಾಕುವುದು ಪ್ರತೀತಿ.ಈ ವರ್ಷವೂ ಸಹ ಗರುಡಗಳ ಆಗಮನದಿಂದ ಭಕ್ತರು ನೋಡಿ ಧನ್ಯತಾ ಭಾವ ಸಮರ್ಪಿಸಿದರು.