ಮಗುವಿನ ಪ್ರತಿಭೆ ಗುರ್ತಿಸುವುದು ಶಿಕ್ಷಕರ ಹೊಣೆ

KannadaprabhaNewsNetwork |  
Published : Jan 06, 2025, 01:02 AM IST
ಶಿರ್ಷಿಕೆ-5ಕೆ.ಎಂ.ಎಲ್‌.ಅರ್.1-ಮಾಲೂರಿನ ಗ್ರೀನ್‌ ಸಿಟಿ ಇಂಟರ್‌ ನ್ಯಾಷನಲ್‌ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಿರಕಲ್‌ ಸೆಂಟರ್‌ನ ರಾಷ್ಟ್ರೀಯ ಪ್ರಶಸ್ತಿ ವಿಜೇತ ಡಾ.ಸೈಯದ್‌ ಸಲ್ಲಾವುದ್ದೀನ್‌ ಅವರನ್ನು ಗ್ರೀನ್‌ ಸಿಟಿ ಇಂಟರ್‌ ನ್ಯಾಷನಲ್‌ ಶಿಕ್ಷಣ ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಪ್ರತಿ ಮಕ್ಕಳಲ್ಲಿ ಒಂದಲ್ಲ ಒಂದು ಪ್ರತಿಭೆ ಅಡಕವಾಗಿರುತ್ತದೆ.ಅವರ ಆಸಕ್ತಿದಾಯಕ ಕಲೆಗಳಿಗೆ ಸಂಬಂಧಿಸಿದಂತೆ ಎಲ್ಲರೂ ಪೂರಕವಾದ ವಾತಾವರಣ ಸೃಷ್ಟಿಸುವ ಕೆಲಸ ಆಗಬೇಕು. ಇಂದಿನ ಜಂಜಾಟದ ಜೀವನದಲ್ಲಿ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕಡೆ ಗಮನ ನೀಡುತ್ತಿಲ್ಲ. ಶಿಕ್ಷಣವು ಮಕ್ಕಳ ಭವಿಷ್ಯದ ವಿಷಯವಾಗಿದ್ದು ,ಪೋಷಕರ ತಾತ್ಸರ ಮಾಡಬಾರದು.

ಕನ್ನಡಪ್ರಭ ವಾರ್ತೆ ಮಾಲೂರು

ಪ್ರತಿ ಮಗುವಿನಲ್ಲೂ ಅಗಾದ ಪ್ರತಿಭೆ ಇರುತ್ತದೆ. ಅದನ್ನು ಹೊರತೆಗೆಯುವ ಕೆಲಸ ಶಿಕ್ಷಕರಿಂದ ಆಗಬೇಕು. ಮಗುವಿನ ಶಿಕ್ಷಣಕ್ಕೆ ಬಡತನ ಅಡ್ಡಿಯಾಗಬಾರದು ಎಂದು ಮಿರಕಲ್‌ ಸೆಂಟರ್‌ ನ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ.ಸೈಯದ್‌ ಸಲ್ಲಾವುದ್ದೀನ್‌ ಪಾಷ ಹೇಳಿದರು.ಅವರು ಇಲ್ಲಿನ ಗ್ರೀನ್‌ ಸಿಟಿ ಇಂಟರ್‌ ನ್ಯಾಷನಲ್‌ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಮಗುವಿಗೆ ಯಾವುದೇ ದೈಹಿಕ, ಮಾನಸಿಕ ಅಥವಾ ವಿಕಲತೆಯು ಶಿಕ್ಷಣಕ್ಕೆ ಎಂದಿಗೂ ಅಡ್ಡಿ ಬರುವುದಿಲ್ಲ. ಪೋಷಕರಾಗಲಿ ಶಿಕ್ಷಕರಾಗಲಿ ಯಾವುದೇ ಕಾರಣಕ್ಕೂ ಮಕ್ಕಳನ್ನು ಹೀಯಾಳಿಸಬಾರದು.ಸದಾ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.

ಮಕ್ಕಳ ಆಸಕ್ತಿಯನ್ನು ಪ್ರೋತ್ಸಾಹಿಸಿ

ಪ್ರತಿ ಮಕ್ಕಳಲ್ಲಿ ಒಂದಲ್ಲ ಒಂದು ಪ್ರತಿಭೆ ಅಡಕವಾಗಿರುತ್ತದೆ.ಅವರ ಆಸಕ್ತಿದಾಯಕ ಕಲೆಗಳಿಗೆ ಸಂಬಂಧಿಸಿದಂತೆ ಎಲ್ಲರೂ ಪೂರಕವಾದ ವಾತಾವರಣ ಸೃಷ್ಟಿಸುವ ಕೆಲಸ ಆಗಬೇಕು ಎಂದರು.ಇಂದಿನ ಜಂಜಾಟದ ಜೀವನದಲ್ಲಿ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕಡೆ ಗಮನ ನೀಡಲಾಗುತ್ತಿಲ್ಲ.ಶಿಕ್ಷಣವು ಮಕ್ಕಳ ಭವಿಷ್ಯದ ವಿಷಯವಾಗಿದ್ದು ,ಪೋಷಕರಿಂದ ತಾತ್ಸರ ಸರಿ ಅಲ್ಲ ಎಂದರು.ಮಾನಸಿಕವಾಗಿ ಮಗು ಕುಂಟಿತವಾದರೆ ಅವರ ಇಡೀ ಜೀವನ ಕುಂಟಿತವಾಗುತ್ತದೆ ಎಂದು ಹೇಳಿದರು.

ಶಿಕ್ಷಣದಿಂದ ವಂಚಿತರಾಗದಿರಲಿ

ದೇಶದ ಭವಿಷ್ಯವಾಗಿರುವ ಇಂದಿನ ಮಕ್ಕಳ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕೆಂದರು.ಶಿಕ್ಷಕರು ಮಕ್ಕಳಿಗೆ ನಾಡು ನುಡಿ ಸಂಸ್ಕಾರಗಳ ಬಗ್ಗೆ ಮಾರ್ಗದರ್ಶನ ನೀಡಬೇಕು. ನಾನು ನೋಡಿದ ಹಾಗೆ ಇಲ್ಲಿನ ಸಂಸ್ಥೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ಪೂರಕ ವಾತಾವರಣ ನಿರ್ಮಿಸಲಾಗಿದೆ. ಇಸಿಎಸ್‌ ಇ ಪಠ್ಯ ಕ್ರಮ ಊಜ್ವಲ ಭವಿಷ್ಯ ವನ್ನು ಮಕ್ಕಳಿಗೆ ನಿರ್ಮಿಸಿಕೊಡಲಿದೆ. ಬಡ ಮಕ್ಕಳಿಗೆ ರಿಯಾಯತಿಯಲ್ಲಿ ಶಿಕ್ಷಣ ನೀಡಲು ಉತ್ತಮ ಹೆಸರು ಮಾಡಿರುವ ಶಿಕ್ಷಣ ಸಂಸ್ಥೆ ಗಳು ಮುಂದಾಗಬೇಕು ಎಂದರು.

ಪ್ರಾಂಶುಪಾಲ ನಾ.ಮುನಿರಾಜು ವಾರ್ಷಿಕ ವರದಿ ಮಂಡಿಸಿದರು. ಸಂಸ್ಥೆ ಕಾರ್ಯದರ್ಶಿ ಎಸ್‌.ಎನ್‌.ರಮೇಶ್‌ ಮಾತನಾಡಿದರು.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಸಂಸ್ಥೆ ಅಧ್ಯಕ್ಷೆ ಸುನೀತಾ ರಮೇಶ್‌ ,ಲತಾ, ಜಗದೀಶ್‌ ಇನ್ನಿತರರು ಇದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ