ಹೊನ್ನಾಳಿಯಲ್ಲೂ ಅದ್ಧೂರಿ ವಿಜಯದಶಮಿ

KannadaprabhaNewsNetwork |  
Published : Oct 13, 2024, 01:14 AM IST
ಹೊನ್ನಾಳಿ ಫೋಟೋ 12ಎಚ್.ಎಲ್.ಐ3. ಪಟ್ಟಣದ ಹೊರವಲಯದಲ್ಲಿರುವ  ಬನ್ನಿಮಂಟದಲ್ಲಿ  ಹಿರೇಕಲ್ಮಠದ  ಡಾ. ಒಡೆಯರ್ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ಅವರು ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಸೀಮೋಲ್ಲಂಘನಗೈದು ನಂತರ       ಭಕ್ತರಿಗೆ ಬನ್ನಿ ವಿತರಿಸುವ ಮೂಲಕ ವಿಜಯ ದಶಮಿ ಅಚರಣೆ ಮಾಡಲಾಯಿತು.     | Kannada Prabha

ಸಾರಾಂಶ

ದಸರಾ ವಿಜಯದಶಮಿಯನ್ನು ಹೊನ್ನಾಳಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿ ಶನಿವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

- ಬನ್ನಿವೃಕ್ಷಕ್ಕೆ ಪೂಜೆ ಸಲ್ಲಿಸಿ ಸೀಮೋಲ್ಲಂಘನಗೈದ ಸ್ವಾಮೀಜಿ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ದಸರಾ ವಿಜಯದಶಮಿಯನ್ನು ಪಟ್ಟಣ ಸೇರಿದಂತೆ ಹೊನ್ನಾಳಿ ತಾಲೂಕಿನಾದ್ಯಂತ ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿ ಶನಿವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನಾದ್ಯಂತ ಎಲ್ಲ ದೇವಾಲಯಗಳಲ್ಲಿ ವಿಜಯದಶಮಿಯೊಂದು ವಿಶೇಷ ಪೂಜೆಗಳನ್ನು ಮಾಡಿದರು. ಹಿರೇಕಲ್ಮಠದಲ್ಲಿ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರ ನೇತೃತ್ವದಲ್ಲಿ 10 ದಿನಗಳ ಕಾಲ ಶರನ್ನವರಾತ್ರಿ ದಸರಾ ಮಹೋತ್ಸವದ ವಿಶೇಷ ಪೂಜೆ ನಡೆದವು.

ಶನಿವಾರ ವಿವಿಧ ಹೂಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಪಟ್ಟಣದ ಭಕ್ತರು ಡಾ. ಒಡೆಯರ್ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ಅವರನ್ನು ಶ್ರೀ ಮಠದಿಂದ ವಿವಿಧ ವಾದ್ಯಗಳೂಂದಿಗೆ ಪಟ್ಟಣದ ರಾಜಬೀದಿಗಳಲ್ಲಿ ದೇವರ ಉತ್ಸವ ಮೂರ್ತಿಗಳ ಮೆರವಣೆಗೆಯಲ್ಲಿ ಕರೆತರಲಾಯಿತು. ಹೊರವಲಯದ ಬನ್ನಿ ಮಂಟಪದಲ್ಲಿ ಸ್ವಾಮೀಜಿ ಶಮಿವೃಕ್ಷಕ್ಕೆ ಪೂಜೆ ಸಲ್ಲಿಸಿ, ಸಿಂಹೋಲ್ಲಂಘನಗೈದರು. ಅನಂತರ ಸ್ಥಳದಲ್ಲಿದ್ದ ಸಹಸ್ರಾರು ಭಕ್ತರಿಗೆ ಪವಿತ್ರವಾದ ಬನ್ನಿಯನ್ನು ಸ್ವಾಮೀಜಿ ವಿತರಿಸಿ ಆಶೀರ್ವಾದ ಮಾಡಿದರು.

ಪಟ್ಟಣದ ಶ್ರೀ ನೀಲಕಂಠೇಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ಪಾಂಡುರಂಗ, ಶ್ರೀ ಮೈಲಾರಲಿಂಗೇಶ್ವರ, ಶ್ರೀ ಗಂಗಮಾಳಮ್ಮ ದೇವಿ, ದೇವರು ಮತ್ತು ಈ ಬಾರಿ ವಿಜಯದಶಮಿಗೆ ಶ್ರೀ ಮಠದ ವತಿಯಿಂದ ಶ್ರೀಮೃತುಂಜಯ ಸ್ವಾಮೀಜಿ ಶ್ರೀ ಚನ್ನಪ್ಪಸ್ವಾಮೀಜಿಯವರ ಭಾವಚಿತ್ತಗಳನ್ನು ಎತ್ತಿನ ಗಾಡಿ ಮೇಲೆ ಪೋಟೋಗಳನ್ನಿಟ್ಟು ಶೃಂಗರಿಸಿ ಮೆರವಣೆಗೆ ಮೂಲಕ ಬನ್ನಿ ಮಟ್ಟಪಕ್ಕೆ ತರಲಾಗಿತ್ತು. ಭಕ್ತರು ದೇವಾಲಯಗಳಿಗೆ ತೆರಳಿ ಬನ್ನಿಪತ್ರೆ ಅರ್ಪಿಸಿ, ಗುರು ಹಿರಿಯರಿಗೆ-ಸ್ನೇಹಿತರಿಗೆ ಬನ್ನಿ ಕೊಟ್ಟು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

- - - -12ಎಚ್.ಎಲ್.ಐ3:

ಹೊನ್ನಾಳಿ ಬನ್ನಿ ಮಂಟದಲ್ಲಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ಬನ್ನಿವೃಕ್ಷಕ್ಕೆ ಪೂಜೆ ಸಲ್ಲಿಸಿ ಸೀಮೋಲ್ಲಂಘನಗೈದರು.

PREV

Latest Stories

ಏಕರೂಪ ಸಿನಿಮಾ ಟಿಕೆಟ್‌ ದರಕ್ಕೆ ಕರಡು- ಗರಿಷ್ಠ ಟಿಕೆಟ್‌ ದರ ₹200 ನಿಗದಿ
ಶಾಲೆಯಲ್ಲಿನ ಕಲುಷಿತ ಬಿಸಿಯೂಟ ಸೇವಿಸಿ 68 ವಿದ್ಯಾರ್ಥಿಗಳು ಅಸ್ವಸ್ಥ
ರಾಷ್ಟ್ರೀಯ ಲೋಕ ಅದಾಲತ್: 58.67 ಲಕ್ಷ ಕೇಸ್ ಇತ್ಯರ್ಥ