ಭುವನೇಶ್ವರಿ ಮೆರವಣಿಗೆಗೆ ನರೇಗಲ್ಲನಲ್ಲಿ ಭವ್ಯ ಸ್ವಾಗತ

KannadaprabhaNewsNetwork |  
Published : Feb 20, 2025, 12:45 AM IST

ಸಾರಾಂಶ

ಮೊದಲನೇ ತಾಲೂಕು ಸಾಹಿತ್ಯ ಸಮ್ಮೇಳನದ ನಿಮಿತ್ತ ಜಕ್ಕಲಿಯಿಂದ ನರೇಗಲ್ಲಿಗೆ ಆಗಮಿಸಿದ ತಾಯಿ ಭುವನೇಶ್ವರಿ ಮೆರವಣಿಗೆಗೆ ನರೇಗಲ್ಲದ ಕೆ. ಇ. ಬಿ. ಕಚೇರಿ ಹತ್ತಿರ ಅದ್ಧೂರಿ ಸ್ವಾಗತ ಕೋರಲಾಯಿತು.

ನರೇಗಲ್ಲ:ಮೊದಲನೇ ತಾಲೂಕು ಸಾಹಿತ್ಯ ಸಮ್ಮೇಳನದ ನಿಮಿತ್ತ ಜಕ್ಕಲಿಯಿಂದ ನರೇಗಲ್ಲಿಗೆ ಆಗಮಿಸಿದ ತಾಯಿ ಭುವನೇಶ್ವರಿ ಮೆರವಣಿಗೆಗೆ ನರೇಗಲ್ಲದ ಕೆ. ಇ. ಬಿ. ಕಚೇರಿ ಹತ್ತಿರ ಅದ್ಧೂರಿ ಸ್ವಾಗತ ಕೋರಲಾಯಿತು.

ಪ. ಪಂ. ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ನಿವೃತ್ ಶಿಕ್ಷಕ ಎಂ ಎಸ್ ಧಡೆಸೂರಮಠ ಎಸ್ ಹಾಗೂ ವಿವಿಧ ಮುಖಂಡರುಗಳು ಪೂಜೆ ಸಲ್ಲಿಸುವ ಮೂಲಕ ಸ್ವಾಗತ ಕೋರಿದರು.ಈ ಸಂದರ್ಭದಲ್ಲಿ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಎಂ ಎಸ್ ಧಡೆಸೂರಮಠ ಮಾತನಾಡಿ ಸಮ್ಮೇಳನ ನಮ್ಮ ತಾಲೂಕಿನಲ್ಲಿ ಜರುಗುತ್ತಿರುವುದು ಅತ್ಯಂತ ಹೆಮ್ಮೆ ಮತ್ತು ಸಂತೋಷದ ಸಂಗತಿ. ಈವತ್ತಿನ ಈ ಮೆರವಣಿಗೆ ಕನ್ನಡದ ಎಲ್ಲ ಮನಸ್ಸುಗಳಿಗೆ ಅತೀವ ಆನಂದ ನೀಡುವುದರ ಜೊತೆಗೆ ಕನ್ನಡದ ಕೆಚ್ಚನ್ನು ಹೆಚ್ಚು ಮಾಡಿದೆ. ಮೆರವಣಿಗೆ ನರೇಗಲ್ಲಿನಲ್ಲಿ ಸಾಗುವುದರಿಂದ ಎಲ್ಲರಲ್ಲಿ ಕನ್ನಡಾಭಿಮಾನ ಮತ್ತು ಕನ್ನಡತನ ಬೆಳೆಯಲು ಸಹಾಯಕವಾಗುತ್ತದೆ ಎಂದರು.ಮಾರನಬಸರಿಗೆ ಪ್ರಯಾಣ:

ಮೆರವಣಿಗೆಯಲ್ಲಿ ಡೊಳ್ಳುಮೇಳ ಭಾಗಿಯಾಗಿತ್ತು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಪಟ್ಟಣ ಪಂಚಾಯತಿಯ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೊರಧಾನ್ಯಮಠ, ಸ್ಥಾಯಿ ಸಮೀತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ, ಸದಸ್ಯರು, ಸ್ಥಳಿಯ ಕಸಾಪ ಅಧ್ಯಕ್ಷ ಎಂ.ವಿ. ವೀರಾಪೂರ, ಎಸ್.ಎನ್. ಹೂಲಗೇರಿ, ಕಸಾಪ ತಾಲೂಕಾ ಕಾರ್ಯದರ್ಶಿ ಬಸವರಾಜ ಕುರಿ, ಮೈಲಾರಪ್ಪ ಚಳ್ಳಮರದ, ಶೇಖಪ್ಪ ಕೆಂಗಾರ, ಅಲ್ಲಾಭಕ್ಷಿ ನದಾಫ, ಕಳಕನಗೌಡ ಪೊಲೀಸ್ ಪಾಟೀಲ, ರಮೇಶ ಹಲಗಿ, ಹುಚ್ಚೀರಪ್ಪ ಈಟಿ, ಈಶ್ವರ ಆದಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಸಾಹಿತ್ಯಾಭಿಮಾನಿಗಳು, ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಮೆರವಣಿಕೆಯಲ್ಲಿ ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!